For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್: ಇಂಡಿಯಾ ಮಹಾರಾಜಸ್‌ ಮತ್ತು ಏಷ್ಯಾ ಲಯನ್ಸ್ ಕಾದಾಟದಲ್ಲಿ ಜಯ ಯಾರಿಗೆ?

Legends league cricket: India Maharajas vs Asia Lions match preview and predicted playing XI

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾಗಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಗಳಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಿದೆ.

ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಹಲವಾರು ದಿಗ್ಗಜ ಕ್ರಿಕೆಟಿಗರನ್ನೊಳಗೊಂಡ 3 ತಂಡಗಳ ನಡುವಿನ ಸೆಣಸಾಟವೇ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆಗಿದೆ. ಈ ಟೂರ್ನಿಯಲ್ಲಿ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಕಣಕ್ಕಿಳಿಯುತ್ತಿದ್ದು ಟೂರ್ನಿ ಜನವರಿ 20ರಂದು ಆರಂಭವಾಗಿದ್ದು ಅಂತಿಮ ಪಂದ್ಯ ಜನವರಿ 29ರಂದು ನಡೆಯಲಿದೆ. ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರಲಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳು ನಡೆದಿದ್ದು ಮೂರೂ ಪಂದ್ಯಗಳು ಸಹ ವಿಭಿನ್ನ ಫಲಿತಾಂಶಗಳನ್ನು ನೀಡಿದ್ದು ಎಲ್ಲಾ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯಗಳಿಸಿವೆ. ಇನ್ನು ಇಂದು ( ಜನವರಿ 24 ) ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದ್ದು ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

ಹೌದು, ಈ ಎರಡೂ ತಂಡಗಳ ನಡುವೆ ಚೊಚ್ಚಲ ಪಂದ್ಯ ಜನವರಿ 20ರಂದು ನಡೆದಿತ್ತು ಹಾಗೂ ಈ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ ಇಂಡಿಯಾ ಮಹಾರಾಜಸ್ ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಇನ್ನು ಇಂಡಿಯಾ ಮಹಾರಾಜಸ್ ವಿರುದ್ಧ ಸೋತಿದ್ದ ಏಷ್ಯಾ ಲಯನ್ಸ್ ತಂಡ ವರ್ಲ್ಡ್ ಜಯಂಟ್ಸ್ ತಂಡದ ವಿರುದ್ಧ ಜಯ ಸಾಧಿಸಿದೆ. ಹಾಗೂ ಏಷ್ಯಾ ಲಯನ್ಸ್ ವಿರುದ್ಧ ಚೊಚ್ಚಲ ಪಂದ್ಯ ಗೆದ್ದಿದ್ದ ಇಂಡಿಯಾ ಮಹಾರಾಜಾಸ್ ನಂತರ ವರ್ಲ್ಡ್ ಜಿಯಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದು, ಇಂದಿನ ಪಂದ್ಯದಲ್ಲಿ ಇತ್ತಂಡಗಳು ಕೂಡ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿವೆ.

ಹಾಗೂ ಇಂಡಿಯಾ ಮಹಾರಾಜಾಸ್ ಆಡಿದ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ತಂಡದ ನಾಯಕ ವಿರೇಂದ್ರ ಸೆಹ್ವಾಗ್ ಕಾರಣಾಂತರಗಳಿಂದ ಭಾಗವಹಿಸಿರಲಿಲ್ಲ. ಆದರೆ ಇದೀಗ ವಿರೇಂದ್ರ ಸೆಹ್ವಾಗ್ ತೃತೀಯ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಪಂದ್ಯದ ಸಮಯ ಹಾಗೂ ದಿನಾಂಕ: ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ತಂಡಗಳ ನಡುವಿನ ಪಂದ್ಯ ಜನವರಿ 24ರಂದು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಇಂಡಿಯಾ ಮಹಾರಾಜಸ್ ಸಂಭಾವ್ಯ ಆಡುವ ಬಳಗ: ನಮನ್ ಓಜಾ (ವಿಕೆಟ್ ಕೀಪರ್), ವಾಸಿಂ ಜಾಫರ್, ಮೊಹಮ್ಮದ್ ಕೈಫ್, ವಿರೇಂದ್ರ ಸೆಹ್ವಾಗ್ (ನಾಯಕ), ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ವೇಣುಗೋಪಾಲ್ ರಾವ್, ಆರ್ ಪಿ ಸಿಂಗ್, ಮನ್ ಪ್ರೀತ್ ಗೋನಿ, ಮುನಾಫ್ ಪಟೇಲ್

ಏಷ್ಯಾ ಲಯನ್ಸ್ ಸಂಭಾವ್ಯ ಆಡುವ ಬಳಗ: ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ತಿಲಕರತ್ನೆ ದಿಲ್ಶನ್, ಉಪುಲ್ ತರಂಗ, ಮೊಹಮ್ಮದ್ ಹಫೀಜ್, ಅಸ್ಗರ್ ಅಫ್ಘಾನ್, ಮಿಸ್ಬಾ-ಉಲ್-ಹಕ್ (ನಾಯಕ), ಮುತ್ತಯ್ಯ ಮುರಳೀಧರನ್, ನುವಾನ್ ಕುಲಶೇಖರ, ಅಜರ್ ಮಹಮೂದ್, ಉಮರ್ ಗುಲ್, ಚಾಮಿಂದಾ ವಾಸ್

Story first published: Monday, January 24, 2022, 17:48 [IST]
Other articles published on Jan 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+