Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೆಜೆಂಡ್ಸ್ ಲೀಗ್ ಕ್ರಿಕೆಟ್: ವರ್ಲ್ಡ್ ಜೈಂಟ್ಸ್ ಸವಾಲು ಗೆಲ್ಲುತ್ತಾರಾ ಇಂಡಿಯಾ ಮಹಾರಾಜರು: ಪಂದ್ಯದ ಪ್ರಮುಖ ಮಾಹಿತಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಏಷ್ಯಾ ಲಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಇಂಡಿಯಾ ಮಹಾರಾಜಾಸ್ ಇಂದು ವರ್ಲ್ಡ್ ಜೈಂಟ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಏಷ್ಯಾ ಲಯನ್ಸ್ ವಿರುದ್ಧ ಸಾಧಿಸಿರುವ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸ ಹೊಂದಿರುವ ಇಂಡಿಯಾ ಮಹಾರಾಜಾಸ್ ತಂಡ ಯಾತಿ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಏಷ್ಯಾ ಲಯನ್ಸ್ ವಿರುದ್ಧ ನಡೆದ ಈ ಹಿಂದಿನ ಪಂದ್ಯದಲ್ಲಿ 35 ರನ್‌ಗಳ ಅಂತರದ ಸೋಲು ಕಂಡಿರುವ ವಲ್ಡ್ ಜೈಂಟ್ಸ್ ತಂಡ ಅದಕ್ಕೂ ಮುನ್ನ ಇಂಡಿಯಾ ಮಹಾರಾಜಾಸ್ ವಿರುದ್ಧ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ ವರ್ಲ್ಡ್ ಜೈಂಟ್ಸ್ ತಂಡ.

ಪಂದ್ಯದ ದಿನಾಂಕ ಸಮಯ: ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಮಾರ್ಚ್ 15 ಬುಧವಾರದಂದು ಮುಖಾಮುಖಿಯಾಗಿತ್ತಿದೆ. ಕತಾರ್‌ನ ದೋಹಾದಲ್ಲಿ ನಡೆಯಲಿರುವ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಸಂಜೆ 8 ಗಂಟೆಗೆ ಆರಂಭವಾಗಲಿದ್ದು 7:30ಕ್ಕೆ ಟಾಸ್ ನಡೆಯಲಿದೆ.

ನೇರಪ್ರಸಾರದ ಮಾಹಿತಿ: ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಜೈಂಟ್ಸ್ ವಿರುದ್ಧದ ಈ ಪಂದ್ಯ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. ಇನ್ನು ಫ್ಯಾನ್‌ಕೋಡ್‌ನಲ್ಲಿಯೂ ವೀಕ್ಷಿಸಲು ಅವಕಾಶವಿದೆ.

ಅಂಕಪಟ್ಟಿ ಹೀಗಿದೆ: ಮೂರು ತಂಡಗಳ ಈ ಟೂರ್ನಿಯಲ್ಲಿ ಏಷ್ಯಾ ಲಯನ್ಸ್ ತಂಡ ಮೊದಲ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದು ನಾಲ್ಕು ಅಣಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಇಂಡಿಯಾ ಮಹಾರಾಜಾಸ್ ತಂಡ ಕೂಡ ಮೂರು ಪಂದ್ಯಗಳನ್ನು ಆಡಿದ್ದು ಇದರಲ್ಲಿ 1 ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ವರ್ಲ್ಡ್ ಜೈಂಟ್ಸ್ ತಂಡ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದ್ದು ಮೂರನೇ ಸ್ಥಾನದಲ್ಲಿದೆ.

ಭಾರತ ಮಹಾರಾಜಾಸ್ ತಂಡ: ರಾಬಿನ್ ಉತ್ತಪ್ಪ(ವಿಕೆಟ್ ಕೀಪರ್), ಗೌತಮ್ ಗಂಭೀರ್(ನಾಯಕ), ಮುರಳಿ ವಿಜಯ್, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಅಶೋಕ್ ದಿಂಡಾ, ಪ್ರವೀಣ್ ತಾಂಬೆ, ಎಸ್ ಶ್ರೀಶಾಂತ್, ಪ್ರವೀಣ್ ಕುಮಾರ್, ಮನ್ವಿಂದರ್ ಬಿಸ್ಲಾ, ರೀತೀಂದರ್ ಸೋಧಿ, ಪರ್ವಿಂದರ್ ಅವಾನಾ

ವರ್ಲ್ಡ್ ಜೈಂಟ್ಸ್ ತಂಡ: ಆರೋನ್ ಫಿಂಚ್ (ನಾಯಕ), ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಲೆಂಡ್ಲ್ ಸಿಮನ್ಸ್, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ರಾಸ್ ಟೇಲರ್, ರಿಕಾರ್ಡೊ ಪೊವೆಲ್,
ಕೆವಿನ್ ಓ ಬ್ರಿಯಾನ್, ಜಾಕ್ವೆಸ್ ಕಾಲಿಸ್, ಮಾಂಟಿ ಪನೇಸರ್, ಪಾಲ್ ಕಾಲಿಂಗ್‌ವುಡ್, ಹಾಶಿಮ್ ಆಮ್ಲಾ, ಮೊರ್ನೆ ಮೊರ್ಕೆಲ್, ಇಯಾನ್ ಮಾರ್ಗನ್, ಬ್ರೆಟ್ ಲೀ, ಟಿನೋ ಬೆಸ್ಟ್, ಕ್ರಿಸ್ ಎಂಪೋಫು, ಆಲ್ಬಿ ಮೊರ್ಕೆಲ್

Story first published: Wednesday, March 15, 2023, 13:54 [IST]
Other articles published on Mar 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+