ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್ ಕ್ರಿಕೆಟ್: ವರ್ಲ್ಡ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಇಂಡಿಯಾ ಮಹಾರಾಜಾಸ್

Legends League Cricket: India Maharajas won the match by 6 wickets against World Giants

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ವಿಶೇಷ ಪಂದ್ಯ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಸೆಣೆಸಾಟ ನಡೆಸಿದ್ದು ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ಭರ್ಜರಿ ಗೆಲುವು ದೊರೆತಿದೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ದಿಗ್ಗಜ ಆಟಗಾರರು ನಡೆಸಿದ ಈ ಸೆಣೆಸಾಟ ಅಭಿಮಾಣಿಗಳಿಗೆ ಸಾಕಷ್ಟು ಮನರಂಜನೆ ನೀಡಿದ್ದು ಇಂಡಿಯಾ ಮಹಾರಾಜಾಸ್ ತಂಡದ ಗೆಲುವು ಭಾರತೀಯ ಅಭಿಮಾನಿಗಳಿಗೆ ಮತ್ತಷ್ಟು ಹರ್ಷವನ್ನುಂಟು ಮಾಡಿದೆ.

ವರ್ಲ್ಡ್ ಜೈಂಟ್ಸ್ ತಂಡ ನೀಡಿದ 171 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಹಾರಾಜಾಸ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 8 ಎಸೆತಗಳು ಬಾಕಿಯಿರುವಂತೆಯೇ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ. ಇಂಡಿಯಾ ಮಹಾರಾಜಾಸ್ ಪರವಾಗಿ ತನ್ಮಯ್ ಶ್ರೀವಾಸ್ತವ್, ಯೂಸುಫ್ ಪಠಾಣ್ ಭರ್ಜರಿ ಅರ್ಧ ಶತಕ ಸಿಡಿಸಿದರೆ ಅಂತಿಮ ಹಂತದಲ್ಲಿ ಇರ್ಫಾನ್ ಪಠಾಣ್ ಸ್ಪೋಟಕ ಪ್ರದರ್ಶನ ನೀಡಿದರು. ಇನ್ನು ಬೌಲಿಂಗ್‌ನಲ್ಲಿ ಭಾರತದ ಪರಚಾಗಿ ಪಂಕಜ್ ಸಿಂಗ್ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ.

ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್

170 ರನ್‌ಗಳಿಸಿದ ವರ್ಲ್ಡ್ ಜೈಂಟ್ಸ್

170 ರನ್‌ಗಳಿಸಿದ ವರ್ಲ್ಡ್ ಜೈಂಟ್ಸ್

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ವರ್ಲ್ಡ್ ಜೈಂಟ್ಸ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಈ ತಂಡದ ಪರವಾಗಿ ಕೆವಿನ್ ಓಬ್ರಿಯಾನ್ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದು ದಿನೇಶ್ ರಾಮ್‌ದಿನ್ ಸ್ಪೋಟಕ 42 ರನ್‌ಗಳನ್ನು ಗಳಿಸಿದರು. ಉಳಿದಂತೆ ತಿಸರ ಪೆರೆರ ಅವರಿಂದ 23 ರನ್‌ಗಳ ಕೊಡುಗೆ ಬಂದಿದೆ. ಹೀಗಾಗಿ ವರ್ಲ್ಡ್ ಜೈಂಟ್ಸ್ ತಂಡ ಭರ್ಜರಿ 170 ರನ್‌ಗಳನ್ನು ಗಳಿಸಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ದೊಡ್ಡ ಮೊತ್ತದ ಗುರಿ ನೀಡಿತು.

ಬೌಲಿಂಗ್‌ನಲ್ಲಿ ಮಿಂಚಿದ ಪಂಕಜ್ ಸಿಂಗ್

ಬೌಲಿಂಗ್‌ನಲ್ಲಿ ಮಿಂಚಿದ ಪಂಕಜ್ ಸಿಂಗ್

ಇನ್ನು ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಪಂಕಜ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಲ್ಕು ಓವರ್‌ಗಳ ಬೌಲಿಂಗ್ ಕೋಟಾದಲ್ಲಿ ಕೇವಲ 26 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ನಾಯಕ ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ ಹಾಗೂ ಮೊಹಮ್ಮದ್ ಕೈಫ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿಗೆ ಸಿಗುವ ಹಣ ಎಷ್ಟು ಕೋಟಿ ಗೊತ್ತಾ?

ಆಡುವ ಬಳಗ

ಆಡುವ ಬಳಗ

ಇಂಡಿಯಾ ಮಹಾರಾಜಾಸ್: ವೀರೇಂದ್ರ ಸೆಹ್ವಾಗ್, ತನ್ಮಯ್ ಶ್ರೀವಾಸ್ತವ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಮೊಹಮ್ಮದ್ ಕೈಫ್, ಮನ್ವಿಂದರ್ ಬಿಸ್ಲಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ (ನಾಯಕ), ಜೋಗಿಂದರ್ ಶರ್ಮಾ, ಪಂಕಜ್ ಸಿಂಗ್, ಎಸ್ ಶ್ರೀಶಾಂತ್, ಅಶೋಕ್ ದಿಂಡಾ
ಬೆಂಚ್: ಸೌರವ್ ಗಂಗೂಲಿ, ಆರ್ಪಿ ಸಿಂಗ್, ಎಸ್ ಬದ್ರಿನಾಥ್, ಸ್ಟುವರ್ಟ್ ಬಿನ್ನಿ, ಅಜಯ್ ಜಡೇಜಾ, ರೀತೀಂದರ್ ಸೋಧಿ, ನಮನ್ ಓಜಾ, ಪರ್ವಿಂದರ್ ಅವಾನಾ

ವರ್ಲ್ಡ್ ಜೈಂಟ್ಸ್: ಕೆವಿನ್ ಒ ಬ್ರಿಯಾನ್, ಹ್ಯಾಮಿಲ್ಟನ್ ಮಸಕಡ್ಜಾ, ಜಾಕ್ವೆಸ್ ಕಾಲಿಸ್ (ನಾಯಕ), ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ತಿಸಾರಾ ಪೆರೆರಾ, ಟಟೆಂಡ ಟೈಬು, ರೋಮೇಶ್ ಕಲುವಿತಾರಣ, ಡೇನಿಯಲ್ ವೆಟ್ಟೋರಿ, ಟಿಮ್ ಬ್ರೆಸ್ನಾನ್, ಮಾಂಟಿ ಪನೇಸರ್, ಫಿಡೆಲ್ ಎಡ್ವರ್ಡ್ಸ್, ಮುತ್ತಯ್ಯ ಮುರಳೀಧರನ್
ಬೆಂಚ್: ಹರ್ಷಲ್ ಗಿಬ್ಸ್, ಲೆಂಡ್ಲ್ ಸಿಮನ್ಸ್, ಸನತ್ ಜಯಸೂರ್ಯ, ಇಯಾನ್ ಮಾರ್ಗನ್, ಜಾಂಟಿ ರೋಡ್ಸ್, ಬ್ರೆಟ್ ಲೀ, ಮಿಚೆಲ್ ಜಾನ್ಸನ್, ಡೇಲ್ ಸ್ಟೇನ್, ಅಸ್ಗರ್ ಅಫ್ಘಾನ್, ಮುಶ್ರಫೆ ಮೊರ್ತಾಜಾ, ನಾಥನ್ ಮೆಕಲಮ್, ಮ್ಯಾಟ್ ಪ್ರಯರ್

Story first published: Saturday, September 17, 2022, 10:56 [IST]
Other articles published on Sep 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X