Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Auction: ಹರಾಜಿನಲ್ಲಿ ಇಂಗ್ಲೆಂಡ್‌ ಆಲ್‌ರೌಂಡರ್‌ಗೆ 5 ತಂಡಗಳ ಗಾಳ

ಐಪಿಎಲ್‌ 2026ರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ಅಬುದಾಬಿಯಲ್ಲಿ ನಡೆಯಲಿದೆ. ಈ ಹರಾಜಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ವೇಳೆ ಮಾಲೀಕರು ಸಹ ತಾವು ಟಾರ್ಗೆಟ್‌ ಮಾಡಬಹುದಾದ ಆಟಗಾರರ ಶಾರ್ಟ್‌ ಲೀಸ್ಟ್‌ ಮಾಡಿದ್ದಾರೆ. ಆರ್‌ಸಿಬಿ ಸಹ ಈ ಪಟ್ಟಿಯನ್ನು ಸಿದ್ಧ ಪಡಿಸಿಕೊಳ್ಳುತ್ತಿದೆ. ಆಲ್‌ರೌಂಡರ್‌ಗಳನ್ನೇ ಹಲವು ತಂಡಗಳು ಟಾರ್ಗೆಟ್‌ ಮಾಡಲಿವೆ. ಈ ಬಾರಿ ಹರಾಜಿನಲ್ಲಿ ಹಲವು ಆಲ್‌ರೌಂಡರ್‌ಗಳು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಇಂಗ್ಲೆಂಡ್ ತಂಡದ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) ಸಹ ಒಬ್ಬರು.

ಕಳೆದ ಬಾರಿಯ ಐಪಿಎಲ್‌ನಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಆರ್‌ಸಿಬಿ ಪರ ಆಡಿದ್ದರು. ಮೆಗಾ ಹರಾಜಿನಲ್ಲಿ ಇವರಿಗೆ ಉತ್ತಮ ಮೊತ್ತವನ್ನು ನೀಡಿ ಆರ್‌ಸಿಬಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಇವರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡದೇ ಇದ್ದಾಗ ಇವರನ್ನು ರಿಲೀಸ್‌ ಮಾಡಲಾಯಿತು. ಒಟ್ಟಾರೆ ಲಿಯಾಮ್‌ ಐಪಿಎಲ್‌ನಲ್ಲಿ 49 ಪಂದ್ಯಗಳನ್ನು ಆಡಿದ್ದು, 1051 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 7 ಅರ್ಧಶತಕಗಳು ಸೇರಿವೆ. ಇವರು ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದು 13 ವಿಕೆಟ್‌ ಕಬಳಿಸಿದ್ದಾರೆ. ಈ ಹರಾಜಿನಲ್ಲಿ ಲಿಯಾಮ್‌ ಅವರನ್ನು ಗುರಿಯಾಗಿಸಿಕೊಂಡು 5 ತಂಡಗಳು ಹಣವನ್ನು ಹೂಡಲಿವೆ.

Liam Livingstone The Key All-Rounder Targeted by 5 IPL Franchises in 2026

ಚೆನ್ನೈ ಸೂಪರ್ ಕಿಂಗ್ಸ್‌

ಈ ಬಾರಿಯ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು (43.40 ಕೋಟಿ ರೂ.) ಹೊಂದಿರುವ ಎರಡನೇ ತಂಡ ಚೆನ್ನೈ ಸೂಪರ್ ಕಿಂಗ್ಸ್‌. ಈ ತಂಡ ಟ್ರೇಡ್‌ ಮುಖಾಂತರ ರವೀಂದ್ರ ಜಡೇಜಾ ಹಾಗೂ ಸ್ಯಾಮ್‌ ಕರನ್‌ ಅವರನ್ನು ರಾಜಸ್ಥಾನ ತಂಡಕ್ಕೆ ಕಳುಹಿಸಿದೆ. ಹೀಗಾಗಿ ಚೆನ್ನೈ ತಂಡಕ್ಕೆ ಮಿಡ್ಲ್ ಆರ್ಡರ್‌ನಲ್ಲಿ ಒಬ್ಬ ಒಳ್ಳೆಯ ಬ್ಯಾಟರ್‌ ಹಾಗೂ ಕೆಲವು ಓವರ್‌ ಬೌಲ್‌ ಮಾಡಬಲ್ಲ ಬೌಲರ್‌ ಹುಡುಕಾಟದಲ್ಲಿದೆ. ಈ ವೇಳೆ ಲಿಯಮಾ ಲಿವಿಂಗ್‌ಸ್ಟೋನ್‌ ಉತ್ತಮ ಆಯ್ಕೆ ಆಗಿದೆ. ತಂಡದ ಸಮತೋಲವನ್ನು ಕಾಯ್ದುಕೊಳ್ಳಲು ಲಿಯಾಮ್‌ ಸಿಎಸ್‌ಕೆಗೆ ಉತ್ತಮ ಆಯ್ಕೆ.

ಕೋಲ್ಕತ್ತಾ ನೈಟ್ ರೈಡರ್ಸ್‌

ಈ ಬಾರಿಯ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ 64.30 ಕೋಟಿ ರೂ. ಹಣದೊಂದಿಗೆ ಹರಾಜಿನ ಅಂಗಳಕ್ಕೆ ಇಳಿಯಲಿದೆ. ಕೆಕೆಆರ್‌ ಸ್ಟಾರ್ ಆಲ್‌ರೌಂಡರ್‌ಗಳನ್ನು ರಿಲೀಸ್ ಮಾಡಿದೆ. ಅಲ್ಲದೆ ಆಂಡ್ರೆ ರಸೆಲ್ ಸ್ಥಾನ ತುಂಬ ಬಲ್ಲ ಆಲ್‌ರೌಂಡರ್ ಹುಡುಕಾಟದಲ್ಲಿದೆ. ಕೆಕೆಆರ್‌ ಒಬ್ಬ ವಿದೇಶಿ ಬ್ಯಾಟರ್‌ ಹುಡುಕಾಟದಲ್ಲಿ. ಆ ಬ್ಯಾಟರ್‌ ಡೆತ್ ಓವರ್‌ಗಳಲ್ಲಿ ವೇಗವಾಗಿ ರನ್‌ ಕಲೆ ಹಾಕಿ, ಪಾರ್ಟ್‌ ಟೈಮ್‌ ಬೌಲಿಂಗ್ ಮಾಡುವ ಅನುಭವ ಹೊಂದಿರಬೇಕು. ಹೀಗಾಗಿ ಲಿಯಾಮ್‌ ಒಳ್ಳೆಯ ಆಯ್ಕೆ. ಈಡನ್‌ ಗಾರ್ಡನ್‌ನಂತಹ ದೊಡ್ಡ ಅಂಗಳದಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಮ್ಮ ಬಿಗ್‌ ಹಿಟ್ಟಿಂಗ್‌ ಎಬಿಲಿಟಿ ಮೂಲಕ ಸ್ಕೋರ್‌ ಬೋರ್ಡ್‌ಗೆ ಕೆಲಸ ನೀಡಬಲ್ಲರು. ಅಲ್ಲದೆ ಇಲ್ಲಿಯ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯಕವಾಗಿರಲಿದೆ. ಹೀಗಾಗಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಉತ್ತಮ ಆಯ್ಕೆ.

ಪಂಜಾಬ್‌ ಕಿಂಗ್ಸ್‌

ಪಂಜಾಬ್‌ ಕಿಂಗ್ಸ್‌ ತಂಡ ಸಹ ತನ್ನ ಮಾಜಿ ಆಟಗಾರ ಲಿಯಾಮ್‌ ಲಿವಿಂಗ್‌ಸ್ಟೋನ್ ಅವರನ್ನು ಹರಾಜಿನಲ್ಲಿ ಗುರಿಯಾಗಿ ಹಣವನ್ನು ಹೂಡಲಿದೆ. ಈ ಬಾರಿ ಪಂಜಾಬ್‌ 11.50 ಕೋಟಿ ರೂ.ಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಲಿದೆ. ಪಂಜಾಬ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರನ್ನು ರಿಲೀಸ್ ಮಾಡಿದ್ದು, ಇವರಿಗೆ ಬದಲಿ ಆಟಗಾರನ ಹುಡುಕಾಟ ನಡೆಸಿದೆ. ಈ ವೇಳೆ ಲಿಯಾಮ್‌ ಒಳ್ಳೆಯ ಆಯ್ಕೆ. ಇವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದು, ಇವರಿಗೆ ತಂಡ ಮಣೆ ಹಾಕುವ ಸಾಧ್ಯತೆ ಇದೆ.

ಸನ್‌ರೈಸರ್ಸ್‌ ಹೈದರಾಬಾದ್

ಈ ಬಾರಿಯ ಹರಾಜಿನಲ್ಲಿ ಸನ್‌ರೈಸರ್ಸ್‌ ತಂಡ ಸ್ಟಾರ್ ಆಲ್‌ರೌಂಡರ್‌ಗಳಿಗೆ ಹಣ ಹೂಡಲಿದೆ. ಈ ತಂಡದ ಬಳಿಕ 25.50 ಕೋಟಿ ಇದ್ದು, ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ಹೀಗಾಗಿ ಸನ್‌ ಆಲ್‌ರೌಂಡರ್‌ಗಳನ್ನು ಟಾರ್ಗೆಟ್ ಮಾಡಲಿದೆ. ಸನ್‌ ತಂಡ ಇವರಿಗೆ ಗಾಳ ಹಾಕಿ ತನ್ನ ತಂಡವನ್ನು ಮತ್ತಷ್ಟು ಬಲಿಷ್ಠ ಗೊಳಿಸಿಕೊಳ್ಳುವ ಇರಾದೆ ಹೊಂದಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

18ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್ ಆರ್‌ಸಿಬಿ ಸಹ ಲಿಯಾಮ್‌ ಲಿವಿಂಗ್‌ಸ್ಟೋನ್ ಅವರನ್ನು ಟಾರ್ಗೆಟ್‌ ಮಾಡಿ ಹಣ ಹೂಡಲಿದೆ. ಕಳೆದ ಬಾರಿಯ ಹರಾಜಿನಲ್ಲಿ ಇವರಿಗೆ ಆರ್‌ಸಿಬಿ ನೀಡಿದ ಮೊತ್ತಕ್ಕಿಂತ ಕಡಿಮೆ ಮೊತ್ತದಲ್ಲಿ ಸಿಕ್ಕರೆ ಆರ್‌ಸಿಬಿ, ಲಿಯಾಮ್‌ಗೆ ಮತ್ತೊಮ್ಮೆ ಆರ್‌ಸಿಬಿ ಜೆರ್ಸಿ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ಆರ್‌ಸಿಬಿ 16.40 ಕೋಟಿ ರೂ.ಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಲಿದೆ.

Story first published: Sunday, December 7, 2025, 16:10 [IST]
Other articles published on Dec 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+