Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ 5 ಐಸಿಸಿ ಟ್ರೋಫಿಗಳಲ್ಲಿ ಯಾವ ದೇಶ ಯಾವ ಟ್ರೋಫಿ ಗೆದ್ದಿದೆ, ಯಾವ ಟ್ರೋಫಿ ಗೆದ್ದಿಲ್ಲ? ಇಲ್ಲಿದೆ ಮಾಹಿತಿ

List of all ICC trophies and list of ICC trophy winners in kannada

ಕ್ರಿಕೆಟ್‍ನಲ್ಲಿ ಐಸಿಸಿಯ ಒಟ್ಟು 5 ಟೂರ್ನಿಗಳು ಸದ್ಯ ಅಸ್ತಿತ್ವದಲ್ಲಿವೆ. ಐಸಿಸಿ ಅಂಡರ್ 19 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಟಿ ಟ್ವೆಂಟಿ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿ ಹೀಗೆ 5 ಮಹತ್ವದ ಟ್ರೋಫಿಗಳಿದ್ದು, ಈ ಟ್ರೋಫಿಗಳಲ್ಲಿ ಯಾವುದೇ ಟ್ರೋಫಿಯನ್ನು ತಂಡವೊಂದು ಗೆದ್ದರೆ ಆ ತಂಡ ವಿಶ್ವ ಚಾಂಪಿಯನ್ ಎನಿಸಿಕೊಳ್ಳಲಿದೆ.

ಹೀಗಾಗಿ ಕ್ರಿಕೆಟ್‍ನಲ್ಲಿ ಭಾಗವಹಿಸುವ ಪ್ರತಿ ತಂಡವೂ ಕೂಡ ಈ ಟ್ರೋಫಿಗಳನ್ನು ಗೆಲ್ಲುವತ್ತ ಚಿತ್ತ ನೆಟ್ಟಿರಲಿವೆ. ಸದ್ಯ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಇಂಗ್ಲೆಂಡ್ ಇದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿಯನ್ನು ನ್ಯೂಜಿಲೆಂಡ್ ಮುಡಿಗೇರಿಸಿಕೊಂಡಿದೆ, ಚಾಂಪಿಯನ್ಸ್ ಟ್ರೋಫಿಯನ್ನು ಕೊನೆಯದಾಗಿ ಪಾಕಿಸ್ತಾನ ಗೆದ್ದಿದೆ, ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅಂಡರ್ 19 ವಿಶ್ವಕಪ್ ಚಾಂಪಿಯನ್ ಆಗಿ ಸದ್ಯ ಭಾರತವಿದೆ.

ಹೀಗೆ ಐಸಿಸಿಯ ಈ 5 ಟ್ರೋಫಿಗಳಲ್ಲಿ ಯಾವ ತಂಡ ಯಾವ ಟ್ರೋಫಿಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ ಮತ್ತು ಯಾವ ತಂಡ ಯಾವ ಟ್ರೋಫಿಯನ್ನು ಇನ್ನೂ ಗೆಲ್ಲಬೇಕಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಎಲ್ಲಾ ತಂಡಗಳು ಗೆದ್ದಿರುವ ಟ್ರೋಫಿಗಳ ಪಟ್ಟಿ

ಎಲ್ಲಾ ತಂಡಗಳು ಗೆದ್ದಿರುವ ಟ್ರೋಫಿಗಳ ಪಟ್ಟಿ

• ಆಸ್ಟ್ರೇಲಿಯಾ: ಏಕದಿನ ವಿಶ್ವಕಪ್, ಟಿ ಟ್ವೆಂಟಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಅಂಡರ್ 19 ಟ್ರೋಫಿಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗೆದ್ದಿಲ್ಲ.

• ಭಾರತ: ಟೀಮ್ ಇಂಡಿಯಾ ಕೂಡ ಆಸ್ಟ್ರೇಲಿಯಾ ರೀತಿಯೇ ಏಕದಿನ ವಿಶ್ವಕಪ್, ಟಿ ಟ್ವೆಂಟಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಅಂಡರ್ 19 ಟ್ರೋಫಿಗಳನ್ನು ಗೆದ್ದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗೆದ್ದಿಲ್ಲ.


• ವೆಸ್ಟ್ ಇಂಡೀಸ್: ವೆಸ್ಟ್ ಇಂಡೀಸ್ ಸಹ ಏಕದಿನ ವಿಶ್ವಕಪ್, ಟಿ ಟ್ವೆಂಟಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಅಂಡರ್ 19 ಟ್ರೋಫಿಗಳನ್ನು ಗೆದ್ದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗೆದ್ದಿಲ್ಲ.

• ಪಾಕಿಸ್ತಾನ: ಪಾಕಿಸ್ತಾನ ತಂಡ ಕೂಡ ಏಕದಿನ ವಿಶ್ವಕಪ್, ಟಿ ಟ್ವೆಂಟಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಅಂಡರ್ 19 ಟ್ರೋಫಿಗಳನ್ನು ಗೆದ್ದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗೆದ್ದಿಲ್ಲ.

• ಶ್ರೀಲಂಕಾ: ಶ್ರೀಲಂಕಾ ತಂಡವು ಏಕದಿನ ವಿಶ್ವಕಪ್, ಟಿ ಟ್ವೆಂಟಿ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಅಂಡರ್ 19 ವಿಶ್ವಕಪ್‌ ಟ್ರೋಫಿಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ.

• ಇಂಗ್ಲೆಂಡ್: ಇಂಗ್ಲೆಂಡ್ ತಂಡವು ಏಕದಿನ ವಿಶ್ವಕಪ್, ಟಿ ಟ್ವೆಂಟಿ ವಿಶ್ವಕಪ್ ಹಾಗೂ ಅಂಡರ್ 19 ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದ್ದು, ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿ ಗೆಲ್ಲುವಲ್ಲಿ ವಿಫಲಗೊಂಡಿದೆ.


• ನ್ಯೂಜಿಲೆಂಡ್‌: ನ್ಯೂಜಿಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಹೊರತುಪಡಿಸಿ ಐಸಿಸಿಯ ಇತರೆ ಯಾವುದೇ ಟ್ರೋಫಿಯನ್ನು ಗೆದ್ದಿಲ್ಲ.


• ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾ ಅಂಡರ್ 19 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು, ಐಸಿಸಿಯ ಉಳಿದ ಯಾವುದೇ ಟ್ರೋಫಿಯನ್ನು ಗೆದ್ದಿಲ್ಲ.

• ಬಾಂಗ್ಲಾದೇಶ: ಬಾಂಗ್ಲಾದೇಶ ಅಂಡರ್ 19 ವಿಶ್ವಕಪ್ ಟ್ರೋಫಿ ಹೊರತುಪಡಿಸಿ ಐಸಿಸಿಯ ಉಳಿದ ಯಾವುದೇ ಪ್ರತಿಷ್ಠಿತ ಟ್ರೋಫಿಯನ್ನು ಗೆದ್ದಿಲ್ಲ.

ವಿಶ್ವಕಪ್ ಗೆಲ್ಲದೇ ಇರುವ ತಂಡಗಳಿವು

ವಿಶ್ವಕಪ್ ಗೆಲ್ಲದೇ ಇರುವ ತಂಡಗಳಿವು

ಐಸಿಸಿಯ ಮಹತ್ವದ ಟ್ರೋಫಿಗಳಾದ ಏಕದಿನ ವಿಶ್ವಕಪ್ ಹಾಗೂ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಗಳನ್ನು ಇದುವರೆಗೂ ನ್ಯೂಜಿಲೆಂಡ್,ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಒಮ್ಮೆಯೂ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಹೊಸ ಟ್ರೋಫಿ

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಹೊಸ ಟ್ರೋಫಿ

ಇನ್ನು ನ್ಯೂಜಿಲೆಂಡ್ ಹೊರತುಪಡಿಸಿ ಉಳಿದ ತಂಡಗಳು ಗೆಲ್ಲದೇ ಇರುವ ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಇತ್ತೀಚೆಗಷ್ಟೇ ಆರಂಭಗೊಂಡಿರುವ ನೂತನ ಟೂರ್ನಿಯಾಗಿದೆ. 2019ರಿಂದ ಪ್ರಾರಂಭಗೊಂಡಿರುವ ಈ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಮುಂದಿನ ದಿನಗಳಲ್ಲಿ ಯಾವ ತಂಡ ಗೆದ್ದು ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Monday, June 20, 2022, 10:08 [IST]
Other articles published on Jun 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+