ಟೆಸ್ಟ್‌ನಲ್ಲಿ ಅತೀ ಕಡಿಮೆ ರನ್ ದಾಖಲೆಗಳ ಪಟ್ಟಿಗೆ ಭಾರತ ಸೇರ್ಪಡೆ!

ಅಡಿಲೇಡ್: ಅಡಿಲೇಡ್‌ನಲ್ಲಿ ಟೀಮ್ ಇಂಡಿಯಾ ಬೇಡದ ದಾಖಲೆ ನಿರ್ಮಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಒಟ್ಟು ರನ್ ಬಾರಿಸಿದ ತಂಡಗಳ ಸಾಲಿಗೆ ಭಾರತ ಸೇರಿಸಿಕೊಂಡಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಪಡೆ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ ಬಾರಿಸಿದೆ. ಇದರೊಂದಿಗೆ ಭಾರತ ಕ್ರಿಕೆಟ್ ತಂಡದ ಹೆಸರಿನಲ್ಲಿ ಕೆಟ್ಟ ದಾಖಲೆಯೊಂದು ನಿರ್ಮಾಣವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿದ್ದರೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 72.1 ಓವರ್‌ಗೆ 191 ರನ್ ಗಳಿಸಿ 53 ರನ್ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಇನ್ನೂ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದೆ (ಭಾರತದ ದ್ವಿತೀಯ ಇನ್ನಿಂಗ್ಸ್ ಸ್ಕೋರ್: 36-9 (21.2 Ov).
ವಿಶೇಷವೆಂದರೆ ಆಸ್ಟ್ರೇಲಿಯಾ ಕೂಡ ಅತೀ ಕಡಿಮೆ ರನ್ ಬಾರಿಸಿದ ತಂಡಗಳ ಪಟ್ಟಿಯಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ರನ್ ಬಾರಿಸಿರುವ ತಂಡಗಳು, ಭಾರತ ತಂಡದ ಕಡಿಮೆ ರನ್ ದಾಖಲೆಗಳ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕಡಿಮೆ ರನ್‌ನಲ್ಲಿ ನ್ಯೂಜಿಲೆಂಡ್ ನಂ.1
ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತೀ ಕಡಿಮೆ ರನ್ ದಾಖಲೆ ನ್ಯೂಜಿಲೆಂಡ್ ಹೆಸರಿನಲ್ಲಿದೆ. 1955ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಒಂದರಲ್ಲಿ 26 ರನ್ ಬಾರಿಸಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಅತೀ ಕಡಿಮೆ ಟೋಟಲ್ ರನ್ ಇದು. ಅದು ಬಿಟ್ಟರೆ 1896ರಲ್ಲಿ ದಕ್ಷಿಣ ಆಫ್ರಿಕಾ ತಂಡ ಪೋರ್ಟ್ ಎಲಿಝಬೆತ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಬಾರಿಸಿದ್ದ 30 ರನ್ ದ್ವಿತೀಯ ಕೆಟ್ಟ ದಾಖಲೆಯೆನಿಸಿದೆ.ಅಂತೂ 2020ರ ವರ್ಷ ಟೀಮ್ ಇಂಡಿಯಾ ಪಾಲಿಗೆ ಒಂದರ್ಥದಲ್ಲಿ ಕೆಟ್ಟ ನೆನಪಾಗಿ ಉಳಿಯಲಿದೆ.

ಕಡಿಮೆ ರನ್ ಬಾರಿಸಿರುವ ತಂಡಗಳ ಪಟ್ಟಿ
* 1. ನ್ಯೂಜಿಲೆಂಡ್, 26 ರನ್, ಇಂಗ್ಲೆಂಡ್ ವಿರುದ್ಧ, ಆಕ್ಲೆಂಡ್, 1955
* 2. ದಕ್ಷಿಣ ಆಫ್ರಿಕಾ, 30 ರನ್, ಇಂಗ್ಲೆಂಡ್ ವಿರುದ್ಧ, ಪೋರ್ಟ್ ಎಲಿಝಬೆತ್, 1896
* 3. ದಕ್ಷಿಣ ಆಫ್ರಿಕಾ, 30 ರನ್, ಇಂಗ್ಲೆಂಡ್ ವಿರುದ್ಧ, ಬರ್ಮಿಂಗ್‌ಹ್ಯಾಮ್, 1924
* 4. ದಕ್ಷಿಣ ಆಫ್ರಿಕಾ, 35 ರನ್, ಇಂಗ್ಲೆಂಡ್ ವಿರುದ್ಧ, ಕೇಪ್ ಟೌನ್, 1899
* 5. ದಕ್ಷಿಣ ಆಫ್ರಿಕಾ, 36 ರನ್, ಆಸ್ಟ್ರೇಲಿಯಾ ವಿರುದ್ಧ, ಮೆಲ್ಬರ್ನ್, 1932
* 6. ಆಸ್ಟ್ರೇಲಿಯಾ, 36 ರನ್, ಇಂಗ್ಲೆಂಡ್ ವಿರುದ್ಧ, ಬರ್ಮಿಂಗ್‌ಹ್ಯಾಮ್, 1902
* 7. ಭಾರತ, 36 ರನ್, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್ ಓವಲ್, 2020
* 8. ನ್ಯೂಜಿಲೆಂಡ್, 42 ರನ್, ಆಸ್ಟ್ರೇಲಿಯಾ ವಿರುದ್ಧ, ವೆಲ್ಲಿಂಗ್ಟನ್, 1946
* 9. ಆಸ್ಟ್ರೇಲಿಯಾ, 42 ರನ್, ಇಂಗ್ಲೆಂಡ್ ವಿರುದ್ಧ, ಸಿಡ್ನಿ, 1888
* 10. ಭಾರತ, 42 ರನ್, ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 1974

ಟೆಸ್ಟ್‌ನಲ್ಲಿ ಭಾರತದ ಕಡಿಮೆ ರನ್ ದಾಖಲೆಗಳು
* 36 ರನ್, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 2020
* 42 ರನ್, ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 1974
* 58 ರನ್, ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್, 1947
* 58 ರನ್, ಇಂಗ್ಲೆಂಡ್ ವಿರುದ್ಧ, ಮ್ಯಾನ್ಚೆಸ್ಟರ್, 1952
* 66 ರನ್, ದಕ್ಷಿಣ ಆಫ್ರಿಕಾ ವಿರುದ್ಧ, ಡರ್ಬನ್, 1996
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications