2020ರ ನಂತರ ರಾಹುಲ್, ರೋಹಿತ್ ಮತ್ತು ಶ್ರೇಯಸ್ ಆಟದ ಮುಂದೆ ಮಂಕಾದ ಕೊಹ್ಲಿ! ಇಲ್ಲಿದೆ ಅಂಕಿಅಂಶ

ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯುತ್ತಿದ್ದು, ಈ ಸರಣಿಗೆ ಅನುಭವಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಜಸ್ ಪ್ರೀತ್ ಬುಮ್ರಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ವಿಶ್ರಾಂತಿಯ ಕಾರಣದಿಂದಾಗಿ ಗೈರಾಗಿದ್ದಾರೆ. ಹಾಗೂ ಮತ್ತೋರ್ವ ಪ್ರಮುಖ ಆಟಗಾರ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಸರಣಿ ಆರಂಭಕ್ಕೂ ಮುನ್ನ ಹೊರಬಿದ್ದ ಕಾರಣ ಸದ್ಯ ತಂಡವನ್ನು ರಿಷಭ್ ಪಂತ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ರಿಷಬ್ ಪಂತ್ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಸರಣಿ ಸೋಲಿನ ಭೀತಿಯಲ್ಲಿದ್ದರೆ, ಭಾರತ ತಂಡದ ಪ್ರಮುಖ ಆಟಗಾರ ಶ್ರೇಯಸ್ ಅಯ್ಯರ್ ತಮ್ಮ ಉತ್ತಮ ಪ್ರದರ್ಶನವನ್ನು ಈ ಸರಣಿಯಲ್ಲಿಯೂ ಮುಂದುವರೆಸಿದ್ದಾರೆ. ಹೌದು, ಶ್ರೇಯಸ್ ಅಯ್ಯರ್ ದೆಹಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ 36 ರನ್ ಬಾರಿಸಿದರೆ, ಕಟಕ್ ನಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ 40 ರನ್ ಬಾರಿಸಿದರು.
ಹೀಗೆ ಕಳೆದೆರಡು ಪಂದ್ಯಗಳಲ್ಲಿಯೂ 30+ ರನ್ ಕಲೆಹಾಕಿರುವ ಶ್ರೇಯಸ್ ಅಯ್ಯರ್ ಆಡಿರುವ ಕಳೆದ 5 ಪಂದ್ಯಗಳಲ್ಲಿಯೂ ಸತತವಾಗಿ 30+ ರನ್ ಕಲೆಹಾಕುತ್ತಾ ತಂಡಕ್ಕೆ ಆಸರೆಯಾಗಿದ್ದು, ಕಳೆದೆರಡು ವರ್ಷಗಳಲ್ಲಿ ಈ ರೀತಿ ಉತ್ತಮವಾಗಿ ಬ್ಯಾಟ್ ಬೀಸಿರುವುದು ನಿಜಕ್ಕೂ ಟೀಮ್ ಇಂಡಿಯಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದೇ ಹೇಳಬಹುದು. ಇನ್ನು 2020ರಿಂದ ಇಲ್ಲಿಯವರೆಗೂ ನಡೆದಿರುವ ಟ್ವೆಂಟಿ ಪಂದ್ಯಗಳ ಪೈಕಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಬಾರಿ 30+ ರನ್ ಕಲೆಹಾಕಿರುವ ಆಟಗಾರ ಯಾರು ಹಾಗೂ ಇದರ ಟಾಪ್ 4 ಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

2020ರಿಂದೀಚೆಗೆ ಹೆಚ್ಚು ಬಾರಿ 30+ ರನ್ ಗಳಿಸಿದವರು
2020ರಿಂದ ಇಲ್ಲಿಯವರೆಗೂ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 30+ ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 4 ಪಟ್ಟಿ ಕೆಳಕಂಡಂತಿದೆ
• ಕೆಎಲ್ ರಾಹುಲ್ 12 ಇನ್ನಿಂಗ್ಸ್‌ನಲ್ಲಿ 30+ ರನ್ ಬಾರಿಸಿದ್ದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
• ಶ್ರೇಯಸ್ ಅಯ್ಯರ್ 11 ಇನ್ನಿಂಗ್ಸ್‌ನಲ್ಲಿ 30+ ರನ್ ಬಾರಿಸಿದ್ದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
• ರೋಹಿತ್ ಶರ್ಮಾ ಕೂಡ 11 ಇನ್ನಿಂಗ್ಸ್‌ನಲ್ಲಿ 30+ ರನ್ ಬಾರಿಸಿ ತೃತೀಯ ಸ್ಥಾನದಲ್ಲಿದ್ದಾರೆ.
• ವಿರಾಟ್ ಕೊಹ್ಲಿ 10 ಇನ್ನಿಂಗ್ಸ್‌ನಲ್ಲಿ 30ಕ್ಕೂ ಹೆಚ್ಚು ರನ್ ಬಾರಿಸಿದ್ದು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ರಾಹುಲ್, ಅಯ್ಯರ್, ರೋಹಿತ್ ಶರ್ಮಾಗಿಂತ ಹಿಂದೆ ಉಳಿದ ಕೊಹ್ಲಿ
ಇನ್ನು ಈ ರೀತಿಯ ರನ್ ಗಳಿಕೆಯ ಹಿಂದಿನ ಪಟ್ಟಿಗಳನ್ನು ತೆಗೆದುಕೊಂಡರೆ ವಿರಾಟ್ ಕೊಹ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ಆದರೆ ಇದೀಗ ಈ ಹಿಂದಿನ ರೀತಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿರುವ ವಿರಾಟ್ ಕೊಹ್ಲಿ ಈ ಅಂಕಿಅಂಶದಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ರೋಹಿತ್ ಶರ್ಮಾಗಿಂತಲೂ ಹಿಂದೆ ಉಳಿದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈ ಎಲ್ಲಾ ಆಟಗಾರರಿಗಿಂತ ಹೆಚ್ಚಿನ ಬ್ಯಾಟಿಂಗ್ ಸರಾಸರಿಯನ್ನು ( 96.16 ) ಹೊಂದಿದ್ದಾರೆ.

ಕೆಎಲ್ ರಾಹುಲ್ ಪಾರುಪತ್ಯ
ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ಕೆಎಲ್ ರಾಹುಲ್ ಕಳೆದೆರಡು ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಬಾರಿ 30+ ರನ್ ಕಲೆಹಾಕಿರುವ ಆಟಗಾರ ಎನಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ 12 ಇನ್ನಿಂಗ್ಸ್‌ನಲ್ಲಿ 30ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications