IPL 2025: ತಂಡ ಸೇರಿಕೊಳ್ಳುವ ವಿದೇಶಿ ಆಟಗಾರರ ಪಟ್ಟಿ
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು ಒಂದು ವಾರ ಮುಂದೂಡಲಾಗಿತ್ತು. ಈಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿದ್ದರಿಂದ ಮತ್ತೆ ಐಪಿಎಲ್ ಆರಂಭವಾಗಲಿದೆ. ಮೇ 17 ರಿಂದ ಐಪಿಎಲ್ ಪುನರಾರಂಭವಾಗಲಿದೆ. ಶನಿವಾರದಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಈ ಕಾದಾಟ ನಡೆಯಲಿದೆ.
ಐಪಿಎಲ್ ಸ್ಥಗಿತಗೊಂಡಿದ್ದರಿಂದ ದೇಶೀಯ ಹಾಗೂ ವಿದೇಶಿ ಆಟಗಾರರು ತವರಿನತ್ತ ಮುಖ ಮಾಡಿದ್ದರು. ಈಗ ವಿದೇಶಿ ಆಟಗಾರರನ್ನು ಮತ್ತೆ ಕರೆಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಇನ್ನು ಹಲವು ಆಟಗಾರರು ಈಗಾಗಲೇ ತಮ್ಮ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಇನ್ನು ಕೆಲವು ಆಟಗಾರರು ಇನ್ನು ಕಾಯುತ್ತಿದ್ದಾರೆ.

ಐಪಿಎಲ್ ಮುಗಿದ ಬಳಿಕ ಒಂದು ವಾರದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಹೀಗಾಗಿ ಈ ಎರಡು ತಂಡಗಳ ಆಟಗಾರರು ಐಪಿಎಲ್ ಮುಗಿಯುವ ವರೆಗೂ ಇರುವುದು ಕಷ್ಟ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಮೇ 26ರ ಮೊದಲು ಆಟಗಾರರು ದೇಶಕ್ಕೆ ವಾಪಸ್ ಆಗುವಂತೆ ಆದೇಶಿಸಿದೆ.
ಆರ್‌ಸಿಬಿಗೆ ಪೆಟ್ಟು
ದಕ್ಷಿಣ ಆಫ್ರಿಕಾದ ಆಟಗಾರರು ಐಪಿಎಲ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಆರ್‌ಸಿಬಿ ತೆಕ್ಕಿಯಲ್ಲೂ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಲುಂಗಿ ಎನ್‌ಗಿಡಿ ಇದ್ದಾರೆ. ಇನ್ನು ಗುಜರಾತ್ ತಂಡದಲ್ಲಿ ಕಗಿಸೊ ರಬಾಡ ಮತ್ತು ಜೆರಾಲ್ಡ್ ಕೋಟ್ಜೀ ಇದ್ದಾರೆ. ಪಂಜಾಬ್ ತಂಡದಲ್ಲಿ ಮಾರ್ಕೊ ಜಾನ್ಸೆನ್, ರಯಾನ್ ರಿಕ್ಲೆಟನ್ ಮತ್ತು ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ತಂಡದ ಪರ, ಟ್ರಿಸ್ಟಾನ್ ಸ್ಟಬ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಈ ಆಟಗಾರರು ಭಾರತಕ್ಕೆ ಮರಳಿದ್ರೂ ಇವರು ಮೇ 26ಕ್ಕೂ ಮೊದಲು ತವರಿಗೆ ಮರಳಬೇಕು.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿರುವ ಆಸ್ಟ್ರೇಲಿಯಾ ತಂಡ ಸಹ ತನ್ನ ಆಟಗಾರರ ನಿರ್ಧಾರವನ್ನು ಬೆಂಬಲಿಸುವುದಾಗಿ ತಿಳಿಸಿದೆ. ಈ ಆಟಗಾರರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಲಿದ್ದು, ಮಿಚೆಲ್ ಸ್ಟಾರ್ಕ್ ದೆಹಲಿ ತಂಡ ಸೇರುವ ಸಾಧ್ಯತೆ ಕಡಿಮೆ. ಪಂಜಾಬ್ ಕಿಂಗ್ಸ್ ತಂಡದ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೋಶ್ ಇಂಗ್ಲಿಸ್ ಭಾರತಕ್ಕೆ ಮರಳುವ ಚಾನ್ಸ್ ಕಡಿಮೆ.
ಉಳಿದಂತೆ ಶೆರ್ಫೇನ್ ರುದರ್ಫೋರ್ಡ್, ಕರೀಮ್ ಜನತ್, ಸುನಿಲ್ ನರೈನ್, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್ ಮತ್ತು ಅನ್ರಿಕ್ ನಾರ್ಖಿಯಾ, ರಶೀದ್ ಖಾನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇನ್ನು ಶ್ರೀಲಂಕಾ ತಂಡದ ಆಟಗಾರರು ಮರಳುವ ಬಗ್ಗೆಯೂ ಯಾವುದೇ ಖಚಿತತೆ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications