For Quick Alerts
ALLOW NOTIFICATIONS  
For Daily Alerts
 

T20 World Cup: ಭಾರತದ ಪರವಾಗಿ ವಿಶ್ವಕಪ್‌ನಲ್ಲಿ ಹೆಚ್ಚಿನ ರನ್ ಗಳಿಸಿರುವ ಆಟಗಾರರು ಇವರು

List Of Top 3 Highest Run-Scorers For Team India In ICC T20 World Cup So Far

ಐಸಿಸಿ ಪುರುಷರ T20 ವಿಶ್ವಕಪ್‌ನ ಎಂಟನೇ ಆವೃತ್ತಿಯು ಭಾನುವಾರ, ಅಕ್ಟೋಬರ್ 16 ರಂದು ಪ್ರಾರಂಭವಾಗಲಿದ್ದು, ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಗೀಲಾಂಗ್‌ನಲ್ಲಿ ಸೆಣಸಲಿವೆ.

ಭಾರತವು ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳೊಂದಿಗೆ ಟೀಂ ಇಂಡಿಯಾ ಪಂದ್ಯಾವಳಿಗಾಗಿ ತಮ್ಮ ತಯಾರಿ ಪ್ರಾರಂಭಿಸಿತು. ಅವರು ಕ್ರಮವಾಗಿ ಅಕ್ಟೋಬರ್ 17 ಮತ್ತು 19 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಆಡಲಿದ್ದಾರೆ.

ಭಾರತದ ಬ್ಯಾಟಿಂಗ್ ಲೈನ್-ಅಪ್ ಸಾಕಷ್ಟು ಪ್ರಬಲವಾಗಿದೆ. ವಿಶ್ವದರ್ಜೆಯ ಬ್ಯಾಟರ್ ಗಳು ಭಾರತದ ಪ್ರಮುಖ ಶಕ್ತಿಯಾಗಿದ್ದಾರೆ. ಪಂದ್ಯಗಳನ್ನು ಗೆಲ್ಲಿಸುವ ಆಟಗಾರರ ದಂಡೇ ಟೀಂ ಇಂಡಿಯಾದಲ್ಲಿ ಇದೆ. ಆಸ್ಟ್ರೇಲಿಯಾದಲ್ಲಿ ಉತ್ತಮ ವೇಗ ಮತ್ತು ಬೌನ್ಸ್ ಅನ್ನು ಪ್ರದರ್ಶಿಸುವ ಸಾಧ್ಯತೆಯಿರುವ ಪಿಚ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂವರು ಭಾರತೀಯ ಬ್ಯಾಟರ್ ಗಳ ಬಗ್ಗೆ ತಿಳಿದುಕೊಳ್ಳೋಣ.

 ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

2007ರಿಂದ 2021ರ ವರೆಗಿನ ಎಲ್ಲಾ ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿರುವ ರೋಹಿತ್ ಶರ್ಮಾ, 2022ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಅತಿ ಹೆಚ್ಚಿನ ರನ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.

33 ಪಂದ್ಯಗಳಲ್ಲಿ 30 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ, 131.52 ಸ್ಟ್ರೈಕ್‌ ರೇಟ್‌ನಲ್ಲಿ 38.50 ಸರಾಸರಿಯಲ್ಲಿ 847 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧ ಶತಕಗಳು ಸೇರಿವೆ. 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೊಡೆದ ಅಜೇಯ 79 ಪಂದ್ಯಾವಳಿಯಲ್ಲಿ ಅವರ ಅತ್ಯುನ್ನತ ಸ್ಕೋರ್ ಆಗಿದೆ.

SL vs NAM : ಅರ್ಹತಾ ಸುತ್ತಿನ ಮೊದಲನೇ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ, ಉಭಯ ತಂಡಗಳ ಬಲಾಬಲ, ಪಿಚ್‌ ರಿಪೋರ್ಟ್

ಎರಡನೇ ಸ್ಥಾನದಲ್ಲಿದ್ದಾರೆ ವಿರಾಟ್ ಕೊಹ್ಲಿ

ಎರಡನೇ ಸ್ಥಾನದಲ್ಲಿದ್ದಾರೆ ವಿರಾಟ್ ಕೊಹ್ಲಿ

ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಗ್ರ ರನ್‌ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. 21 ಪಂದ್ಯಗಳಲ್ಲಿ 19 ಇನ್ನಿಂಗ್ಸ್ ಆಡಿರುವ ಕೊಹ್ಲಿ 76.81 ಸರಾಸರಿಯಲ್ಲಿ 845 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. 2012 ರಿಂದ 2021 ರವರೆಗೆ ಟಿ20 ವಿಶ್ವಕಪ್‌ನಲ್ಲಿ ಆಡಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ.

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಒಂದು ಶತಕ ಗಳಿಸಿಲ್ಲ. ಅಜೇಯ 89 ರನ್‌ ಗಳಿಸಿರುವುದು ಅವರ ಗರಿಷ್ಠ ರನ್ ಆಗಿದೆ. ಇದುವರೆಗೆ 10 ಅರ್ಧ ಶತಕಗಳನ್ನು ಟಿ20 ವಿಶ್ವಕಪ್‌ನಲ್ಲಿ ದಾಖಲಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 129.60 ಆಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಮತ್ತೊಂದು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ಇಬ್ಬರಿಗೂ ನಂಬರ್ 1 ಆಗುವ ಅವಕಾಶ ಇದೆ.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್

2007 ರಲ್ಲಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿಜಯದ ಪ್ರಮುಖ ಆಟಗಾರರಲ್ಲಿ ಒಬ್ಬರು ಯುವರಾಜ್ ಸಿಂಗ್. ಭಾರತ ಪರವಾಗಿ ಅವರು ಗೆಲ್ಲಲೇಬೇಕಾದ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ ಅವರ ಆರು ಸಿಕ್ಸರ್‌ಗಳು ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೆಮಿ-ಫೈನಲ್‌ನಲ್ಲಿ ಬಿರುಸಿನ 30 ಎಸೆತಗಳಲ್ಲಿ 70 ರನ್‌ಗಳು ಅವರನ್ನು ಶ್ರೇಷ್ಠ ಆಟಗಾರನನ್ನಾಗಿ ಮಾಡಿದೆ.

2016ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಕೊನೆಯ ಬಾರಿಗೆ ಆಡಿದರು. ಟಿ20 ವಿಶ್ವಕಪ್‌ನಲ್ಲಿ 23.72 ಸರಾಸರಿಯಲ್ಲಿ ಮತ್ತು 128.91 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 593 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.

Story first published: Saturday, October 15, 2022, 22:14 [IST]
Other articles published on Oct 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+