Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ 2021-23: ಈವರೆಗೂ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿ; ಯಾರು ಟಾಪ್?

List of top 5 bowlers who took most wickets in ICC World Test Championship 2021-23

ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಯಶಸ್ವಿಯಾದ ಬೆನ್ನಲ್ಲೇ ಇದೀಗ ಎರಡನೇ ಆವೃತ್ತಿ ಆರಂಭಗೊಂಡಿದೆ. ಕಳೆದ ವರ್ಷ ಮುಕ್ತಾಯಗೊಂಡ ಮೊದಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬೆನ್ನಲ್ಲೇ 2021ರ ಆಗಸ್ಟ್ ತಿಂಗಳ 4ರಿಂದ ಎರಡನೇ ಆವೃತ್ತಿಗೆ ಚಾಲನೆ ದೊರತಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಟೌಡಿ ಟೆಸ್ಟ್ ಸರಣಿ ಮೂಲಕ ಈ ಬಾರಿಯ ಆವೃತ್ತಿ ಆರಂಭಗೊಂಡಿದೆ.

ಇನ್ನು ಎರಡು ವರ್ಷಗಳ ಕಾಲ ನಡೆಯಲಿರುವ ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಎರಡನೇ ಆವೃತ್ತಿಯ ಫೈನಲ್ ಪಂದ್ಯ 2023ರ ಮಾರ್ಚ್ 31ರಂದು ನಡೆಯಲಿದೆ. ಈ ಹಣಾಹಣಿಯಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಹೀಗೆ 9 ತಂಡಗಳು ಭಾಗವಹಿಸುತ್ತಿವೆ. ಇನ್ನು ಸದ್ಯ ನ್ಯೂಜಿಲೆಂಡ್ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಹಾಗೂ ಇತ್ತಂಡಗಳ ನಡುವೆ ಇತ್ತೀಚೆಗಷ್ಟೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 5 ವಿಕೆಟ್‌ಗಳ ಜಯ ಸಾಧಿಸಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಹೀಗೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಈ ಮೊದಲ ಪಂದ್ಯ ಮುಕ್ತಾಯಗೊಂಡ ನಂತರ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ 138 ಪಂದ್ಯಗಳು ಮುಕ್ತಾಯಗೊಂಡಿದ್ದು, ಇಲ್ಲಿಯವರೆಗೂ ಯಾವ ಬೌಲರ್ ಹೆಚ್ಚು ವಿಕೆಟ್ ಪಡೆದಿದ್ದಾರೆ ಎಂಬ ಮಾಹಿತಿ ಮತ್ತು ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಟಾಪ್ 5 ಪಟ್ಟಿ ಮುಂದೆ ಇದೆ ಓದಿ..

ಅತಿಹೆಚ್ಚು ವಿಕೆಟ್ ಪಡೆದವರಲ್ಲಿ ಭಾರತೀಯನೇ ಟಾಪ್

ಅತಿಹೆಚ್ಚು ವಿಕೆಟ್ ಪಡೆದವರಲ್ಲಿ ಭಾರತೀಯನೇ ಟಾಪ್

ಇಲ್ಲಿಯವರೆಗೂ ನಡೆದಿರುವ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳ ಪೈಕಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಪಡೆದಿದ್ದಾರೆ. ಇಲ್ಲಿಯವರೆಗೂ ಒಟ್ಟು 17 ಇನ್ನಿಂಗ್ಸ್ ಆಡಿರುವ ಬುಮ್ರಾ 40 ವಿಕೆಟ್‌ಗಳನ್ನು ಪಡೆದಿದ್ದು, ಸದ್ಯ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಟಾಪ್ 5 ಬೌಲರ್‌ಗಳು

ಟಾಪ್ 5 ಬೌಲರ್‌ಗಳು

ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ( ಜೂನ್ 8 ) ನಡೆದಿರುವ ಪಂದ್ಯಗಳ ಪೈಕಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

1. ಜಸ್ಪ್ರಿತ್ ಬುಮ್ರಾ - ಭಾರತ - 17 ಇನ್ನಿಂಗ್ಸ್ 40 ವಿಕೆಟ್
2. ಶಾಹೀನ್ ಅಫ್ರಿದಿ - ಪಾಕಿಸ್ತಾನ - 13 ಇನ್ನಿಂಗ್ಸ್ 37 ವಿಕೆಟ್
3. ಪ್ಯಾಟ್ ಕಮಿನ್ಸ್ - ಆಸ್ಟ್ರೇಲಿಯಾ - 14 ಇನ್ನಿಂಗ್ಸ್ 33 ವಿಕೆಟ್
4. ಓಲ್ಲಿ ರಾಬಿನ್‌ಸನ್ - ಇಂಗ್ಲೆಂಡ್ - 15 ಇನ್ನಿಂಗ್ಸ್ 32 ವಿಕೆಟ್
5. ಕಗಿಸೋ ರಬಾಡ - ದಕ್ಷಿಣ ಆಫ್ರಿಕಾ - 9 ಇನ್ನಿಂಗ್ಸ್ 30 ವಿಕೆಟ್

Ind vs RSA ಸರಣಿಗೂ ಮುನ್ನ ನಮ್ಮ ಹುಡುಗರು ಫುಲ್ ಡ್ರಿಲ್ | Oneindia Kannada
ಮೊದಲ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದವರು ಯಾರು?

ಮೊದಲ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದವರು ಯಾರು?

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೊದಲ ಆವೃತ್ತಿಯಲ್ಲಿ ( 2019 - 21 ) ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ರವಿಚಂದ್ರನ್ ಅಶ್ವಿನ್. ಆ ಆವೃತ್ತಿಯಲ್ಲಿ 26 ಇನ್ನಿಂಗ್ಸ್ ಆಡಿದ್ದ ಅಶ್ವಿನ್ 71 ವಿಕೆಟ್ ಪಡೆದಿದ್ದರು. ಇನ್ನು ಅಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ 28 ಇನ್ನಿಂಗ್ಸ್ ಆಡಿ 70 ವಿಕೆಟ್ ಪಡೆದು ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ಹಾಗೂ 32 ಇನ್ನಿಂಗ್ಸ್ ಆಡಿ 69 ವಿಕೆಟ್ ಪಡೆದಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ತೃತೀಯ ಸ್ಥಾನದಲ್ಲಿದ್ದರು.

Story first published: Wednesday, June 8, 2022, 11:40 [IST]
Other articles published on Jun 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+