Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Liton Das: ತಮ್ಮದೇ ದೇಶದಲ್ಲಿ ಅವಮಾನ ಎದುರಿಸಿದ ಲಿಟ್ಟನ್ ದಾಸ್

ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಲಿಟ್ಟನ್ ದಾಸ್ ತಮ್ಮದೇ ದೇಶದಲ್ಲಿ ಅವಮಾನವನ್ನು ಎದುರಿಸಬೇಕಾಗಿದೆ. ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ (ಬಿಪಿಎಲ್) ಚಿತ್ತಗಾಂಗ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಅವಮಾನಕ್ಕೊಳಗಾಗಿದ್ದಾರೆ. ಈ ಘಟನೆ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಬಾಂಗ್ಲಾದೇಶ ತಂಡದ ಏಕೈಕ ಹಿಂದೂ ಕ್ರಿಕೆಟಿಗನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಅಪಮಾನ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಿಟನ್ ದಾಸ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಢಾಕಾ ಕ್ಯಾಪಿಟಲ್ಸ್ ಪರ ಆಡುತ್ತಾರೆ. ಶ್ರೀಲಂಕಾದ ತಿಸಾರ ಪೆರೇರಾ ಈ ತಂಡದ ನಾಯಕರಾಗಿದ್ದಾರೆ. ಅನುಭವಿ ಬೌಲರ್ ಮುಸ್ತಾಫಿಜುರ್ ರೆಹಮಾನ್ ಢಾಕಾ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಬಿಪಿಎಲ್ ಟೂರ್ನಿಯ ಢಾಕಾ ಕ್ಯಾಪಿಟಲ್ಸ್ Vs ಫಾರ್ಚೂನ್ ಬಾರಿಶಾಲ್ ನಡುವಿನ ಪಂದ್ಯದ ವೇಳೆ ಘಟನೆ ಜರುಗಿದೆ.

Liton Das faces humiliation in Bangladesh Premier League


ಫಾರ್ಚೂನ್ ಬಾರಿಶಾಲ್ ಬ್ಯಾಟಿಂಗ್ ಸಂದರ್ಭದಲ್ಲಿ ಲಿಟನ್ ದಾಸ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಅಪಮಾನ ಮಾಡಿದ್ದಾರೆ. ಲಿಟನ್ ದಾಸ್ ಅವರ ಕಡೆಗೆ ಬೆರಳು ತೋರಿಸುತ್ತಾ 'ವುಹ್ವಾ..ವುಹ್ವಾ.. (ನಕಲಿ, ನಕಲಿ)' ಎಂದು ಕೂಗಿದ್ದಾರೆ. ಈ ಸಂದರ್ಭದಲ್ಲಿ ಲಿಟನ್ ದಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ತನಗೆ ಅಪಮಾನ ಮಾಡುತ್ತಿದ್ದ ಉದ್ರಿಕ್ತ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ನೋಡುತ್ತಲೇ ಇದ್ದರು.

ಬೆಂಬಲಕ್ಕೆ ನಿಂತ ಢಾಕಾ

ಘಟನೆ ನಡೆದ ನಂತರ ಢಾಕಾ ಕ್ಯಾಪಿಟಲ್ಸ್ ತಂಡ ತಮ್ಮ ಆಟಗಾರನಿಗೆ ಬೆಂಬಲವಾಗಿ ಧ್ವನಿ ಎತ್ತಿದೆ. ಢಾಕಾ ಕ್ಯಾಪಿಟಲ್ಸ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬಿಪಿಎಲ್ ಇತಿಹಾಸದಲ್ಲಿ ರಾಷ್ಟ್ರೀಯ ನಾಯಕನೊಬ್ಬ ಅತಿ ವೇಗದ ಶತಕ ಗಳಿಸುವುದನ್ನು ಮತ್ತು ದಾಖಲೆ ಮುರಿದ ಜೊತೆಯಾಟದಲ್ಲಿ ಭಾಗವಾಗಿರುವುದನ್ನು ನಾವು ನೋಡಿದ್ದೇವೆ ಎಂದು ಬರೆದಿದೆ.

ನೀವು ಟೀಕೆಗಳನ್ನು ನೋಡಿದ್ದರೆ. ಬಾಂಗ್ಲಾದೇಶದ ಅತ್ಯಧಿಕ ವೈಯಕ್ತಿಕ ಏಕದಿನ ಸ್ಕೋರರ್ ಮತ್ತು ದೇಶದ ಅತ್ಯುತ್ತಮ ಟೆಸ್ಟ್ ಬ್ಯಾಟಿಂಗ್ ಶ್ರೇಣಿಯನ್ನು ಹೊಂದಿರುವ ಸ್ಟಾರ್ ಬ್ಯಾಟರ್ ಅನ್ನು ನಾವು ನೋಡುತ್ತೇವೆ. ನೀವು ಅಡೆತಡೆಗಳನ್ನು ನೋಡುತ್ತೀರಿ. ಇತಿಹಾಸವನ್ನು ನಿರ್ಮಿಸುವುದನ್ನು ನಾವು ನೋಡುತ್ತೇವೆ. ಲಿಟನ್, ನೀವು ನಮ್ಮ ಪ್ರೀತಿಯ ಸಾಕಾರ. ನೀವು ನಮ್ಮ ಹೆಮ್ಮೆ ಢಾಕಾ ಕ್ಯಾಪಿಟಲ್ಸ್ ಟ್ವೀಟ್ ಮಾಡುವ ಮೂಲಕ ಲಿಟನ್ ದಾಸ್ ಬೆನ್ನಿಗೆ ನಿಂತಿದೆ.

ಲಿಟನ್ ದಾಸ್ ಹೇಳಿದ್ದೇನು?

ಢಾಕಾ ಕ್ಯಾಪಿಟಲ್ಸ್‌ನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಲಿಟನ್ ದಾಸ್, 'ನನ್ನ ತಂಡವಾದ ಢಾಕಾ ಕ್ಯಾಪಿಟಲ್ಸ್‌ನ ಈ ಅದ್ಭುತ ಕಾರ್ಯದಿಂದ ನಿಜವಾಗಿಯೂ ನನ್ನ ಹೃದಯವನ್ನು ಸ್ಪರ್ಶಿಸಿದೆ. ನನನ್ನು ಮತ್ತು ಎಲ್ಲಾ ಕ್ರೀಡಾಪಟುಗಳನ್ನು ಪ್ರತಿ ಉನ್ನತ ಮತ್ತು ಕೆಳಮಟ್ಟದಲ್ಲಿ ಬೆಂಬಲಿಸುವ ಎಲ್ಲರಿಗೂ ಧನ್ಯವಾದಗಳು. ನಿಮ್ಮ ನಂಬಿಕೆಯು ನಮಗೆ ಪ್ರಪಂಚವನ್ನು ತಿಳಿಸುತ್ತದೆ ಎಂದಿದ್ದಾರೆ. ಐಸಿಸಿ 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಬಾಂಗ್ಲಾದೇಶ ತಂಡಕ್ಕೆ ಲಿಟನ್ ದಾಸ್ ಆಯ್ಕೆಯಾಗಿಲ್ಲ.

Story first published: Monday, January 20, 2025, 12:30 [IST]
Other articles published on Jan 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+