Asia Cup T20: ಲಿಟನ್ ದಾಸ್ ಅರ್ಧಶತಕ: ಬಾಂಗ್ಲಾಗೆ 7 ವಿಕೆಟ್ ವಿಕೆಟ್ ಜಯ
ಅಬುದಾಬಿ: ನಾಯಕ ಲಿಟನ್ ದಾಸ್ ಅವರ ಅರ್ಧಶತಕದ ಬಲದಿಂದ ಬಾಂಗ್ಲಾದೇಶ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 7 ವಿಕೆಟ್‌ಗಳಿಂದ ಹಾಂಗ್ ಕಾಂಗ್ ತಂಡವನ್ನು ಮಣಿಸಿ, ಬಾಂಗ್ಲಾ ಶುಭಾರಂಭ ಮಾಡಿದೆ.
ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ಆರಂಭ ಸಾಧಾರಣವಾಗಿತ್ತು. ಪರ್ವೇಜ್ ಹುಸೇನ್ (19) ರನ್ ಬಾರಿಸಿ ಮೊದಲಿಗರಿಗಾಗಿ ಪೆವಿಲಿಯನ್ ಸೇರಿದರು. ಈ ವೇಳೆ ತಂಡದ ಮೊತ್ತ 24 ಆಗಿತ್ತು. ಇನ್ನೋರ್ವ ತಂಜಿದ್ ಹಸನ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು 1 ಬೌಂಡರಿ ನೆರವಿನಿಂದ 14 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಮೂರನೇ ವಿಕೆಟ್‌ಗೆ ತೋಹಿದ್ ಹೃದಯ್ ಹಾಗೂ ನಾಯಕ ಲಿಟನ್ ದಾಸ್ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಹಾಂಗ್ ಕಾಂಗ್ ತಂಡ ವಿಫಲವಾಯಿತು. ಈ ಜೋಡಿ ಭರ್ಜರಿ ಜೊತೆಯಾಟನ್ನು ನೀಡಿ ತಂಡವನ್ನು ಗೆಲುವಿನ ಗೆರೆಯತ್ತ ಕೊಂಡೊಯ್ದರು. ಈ ಜೋಡಿ 70 ಎಸೆತಗಳಲ್ಲಿ 95 ರನ್ ಬಾರಿಸಿತು. ಬಾಂಗ್ಲಾದೇಶ ನಾಯಕ ಲಿಟನ್ ದಾಸ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿದ 59 ರನ್ ಬಾರಿಸಿ ಔಟ್ ಆದರು. ತೋಹಿದ್ ಹೃದಯ್ ಅಜೇಯ 35 ರನ್ ಸಿಡಿಸಿ ಮಿಂಚಿದರು. ಅಂತಿಮವಾಗಿ ಬಾಂಗ್ಲಾ 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 144 ರನ್ ಸೇರಿಸಿತು.
ಲಿಟನ್ ದಾಸ್ ದಾಖಲೆ
ಬಾಂಗ್ಲಾದೇಶ ತಂಡದ ಪರ ಲಿಟನ್ ದಾಸ್ ಈ ಪಂದ್ಯದಲ್ಲಿ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಲಿಟನ್ ದಾಸ್ ಒಂದು ಸಿಕ್ಸರ್ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆದರು. ಇವರು ಬಾಂಗ್ಲಾದೇಶದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಮೊಹಮ್ಮದುಲ್ಲಾ ಅವರ (77 ಸಿಕ್ಸರ್) ದಾಖಲೆಯನ್ನು ಅಳಿಸಿ ಹಾಕಿದರು.

ಮೊದಲು ಬ್ಯಾಟ್ ಮಾಡಿದ ಹಾಂಗ್ ಕಾಂಗ್ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕಲು ಪರದಾಡಿದರು. ಹಾಂಗ್ ಕಾಂಗ್ ಆರಂಭ ಕಳಪೆಯಾಗಿತ್ತು. 30 ರನ್ ಆಗುವಷ್ಟರಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ನಿಜಾಕತ್ ಖಾನ್ ಹಾಗೂ ಜೀಶಾನ್ ಅಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 41 ಎಸೆತಗಳಲ್ಲಿ 41 ರನ್ ಸೇರಿಸಿದರು. ಜೀಶಾನ್ ಅಲಿ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿದರು. 4ನೇ ವಿಕೆಟ್‌ಗೆ ಯಾಸಿಮ್ ಮುರ್ತಾಜ್ ಹಾಗೂ ನಿಜಕತ್ ಖಾನ್ ಜೋಡಿ 34 ಎಸೆತಗಳಲ್ಲಿ 46 ರನ್ ಬಾರಿಸಿತು. ಮಧ್ಯಮ ಕ್ರಮಾಂಕದಲ್ಲಿ ನಿಜಕತ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿದರು. ಯಾಸೀಮ್ ಮುರ್ತಾಜ್ 19 ಎಸೆತಗಳಲ್ಲಿ 28 ರನ್ ಬಾರಿಸಿದರು. ಉಳಿದಂತೆ ಕೆಳ ಕ್ರಮಾಂಕದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಹಾಂಗ್ ಕಾಂಗ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 143 ರನ್ ಸೇರಿಸಿತು. ಬಾಂಗ್ಲಾದೇಶದ ಪರ ಟಸ್ಕಿನ್ ಅಹ್ಮದ್, ತಂಜಿಮ್ ಹಸನ್, ರಿಶದ್ ಹುಸೇನ್ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications