ಆಸ್ಟ್ರೇಲಿಯಾ ಮಡಿಲಿಗೆ 5ನೇ ಬಾರಿಗೆ ವಿಶ್ವಕಪ್
ಮೆಲ್ಬೋರ್ನ್, ಮಾ.29: ಐಸಿಸಿ ವಿಶ್ವಕಪ್ 2015 ಫೈನಲ್ ಪಂದ್ಯದಲ್ಲಿ ಕಿವೀಸ್ ಚಾಲೆಂಜ್ ಸ್ವೀಕರಿಸಿದ ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿದೆ. ಮೆಲ್ಬೋರ್ನ್ ನಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ನೀಡಿದ್ದ 184 ರನ್ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು 33.1 ಓವರ್ ಗಳಲ್ಲಿ ಮುಟ್ಟಿ ವಿಜಯೋತ್ಸವ ಆಚರಿಸಿದೆ. ಈ ಮೂಲಕ ಆಸ್ಟ್ರೇಲಿಯಾ 5ನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದೆ.
ಈ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ನ್ಯೂಜಿಲೆಂಡ್ ಒಂದು ವೇಳೆ ವಿಶ್ವಕಪ್ ಗೆದ್ದಿದ್ದರೆ ಅಧಿಕ ಮೊತ್ತ (26.78 ಕೋಟಿ ರು) ಪಡೆಯುತ್ತಿತ್ತು. ಆದರೆ, ಕಿವೀಸ್ ತಂಡವನ್ನು ಸುಲಭವಾಗಿ ಮಣಿಸಿದ ಆಸ್ಟ್ರೇಲಿಯಾ 25 ಕೋಟಿ ರು ಗಳಿಸಿದೆ. ರನ್ನರ್ ಅಪ್ ತಂಡಕ್ಕೆ 11 ಕೋಟಿ ಲಭಿಸಲಿದೆ.

ಆಸೀಸ್ ರನ್ ಚೇಸ್: [ಗ್ಯಾಲರಿ: ವಿಶ್ವಕಪ್ ಅಂತಿಮ ಸಮರದ ರಸ ನಿಮಿಷ]
* 8 ಪಂದ್ಯಗಳಲ್ಲಿ 22 ವಿಕೆಟ್ ಕಿತ್ತ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರು ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದರು.
* ಮೂರು ವಿಕೆಟ್ ಕಿತ್ತ ಜೇಮ್ಸ್ ಫಾಲ್ಕ್ನರ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಂದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
* 5ನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದ ಮೈಕಲ್ ಕ್ಲಾರ್ಕ್ ನೇತೃತ್ವದ ತಂಡ.
* ಮೊಟ್ಟ ಮೊದಲ ಬಾರಿಗೆ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ.
* ಇದಕ್ಕೂ ಮುನ್ನ (1987, 1999, 2003, 2007 ಹಾಗೂ ಈಗ 2015).
* 56ರನ್ ಗಳಿಸಿ ಅಜೇಯವಾಗಿ ಉಳಿದ ಸ್ಟೀವನ್ ಸ್ಮಿತ್ ಅವರು ಬೌಂಡರಿ ಗಳಿಸುವ ಮೂಲಕ ವಿಜಯದ ರನ್ ದಾಖಲಿಸಿದರು.
* ಕಿವೀಸ್ ನೀಡಿದ್ದ 184ರನ್ ಗುರಿಯನ್ನು 33.1 ಓವರ್ಸ್ ನಲ್ಲಿ 186/2 ಸ್ಕೋರ್ ಮಾಡಿ ಗೆದ್ದ ಆಸ್ಟ್ರೇಲಿಯಾ.

* ಗೆಲುವಿಗೆ 4 ರನ್ ಬೇಕಿದ್ದಾಗ ಸ್ಟೀವನ್ ಸ್ಮಿತ್ ಅರ್ಧಶತಕ ಪೂರೈಸಿದರು.
* ಮೈಕಲ್ ಕ್ಲಾರ್ಕ್ ಅವರಿಗೆ ಮೈದಾನದಲ್ಲಿದ್ದ ಎಲ್ಲರೂ ಎದ್ದು ನಿಂತು ಕರತಾಡನ ಮಾಡಿದರು.
* 72 ಎಸೆತಗಳಲ್ಲಿ 74ರನ್ ಗಳಿಸಿ ನಾಯಕನ ಆಟವಾಡಿ ತಂಡವನ್ನು ಗೆಲುವಿನ ಅಂಚಿಗೆ ತಂದ ಮೈಕಲ್ ಕ್ಲಾರ್ಕ್ ಏಕದಿನ ಕ್ರಿಕೆಟ್ ನ ಇನ್ನಿಂಗ್ಸ್ ಮುಕ್ತಾಯವಾಗಿದೆ. ಹೆನ್ರಿ ಎಸೆತದಲ್ಲಿ ಕಟ್ ಮಾಡಲು ಹೋಗಿ ಬೋಲ್ಡ್ ಆಗಿ ಕ್ಲಾಕ್ ಪೆವಿಲಿಯನ್ ಸೇರಿದ್ದಾರೆ.
* 31 ಓವರ್ಸ್ ನಂತರ 172/2. ಸೌಥಿ ಬೌಲಿಂಗ್ ನಲ್ಲಿ ಸತತ ನಾಲ್ಕು ಬೌಂಡರಿ ಚೆಚ್ಚಿದ ಮೈಕಲ್ ಕ್ಲಾರ್ಕ್
* ಆಸ್ಟ್ರೇಲಿಯಾ ಬೆಂಬಲಿಗರಿಂದ ಸೆಲ್ಫಿಗಳ ಹಬ್ಬ.
* 30 ಓವರ್ಸ್ ಆಸ್ಟ್ರೇಲಿಯಾ ಸ್ಕೋರ್ 157/2. 20 ಓವರ್ಸ್ ನಲ್ಲಿ 20 ರನ್ ಗುರಿ.
* 20.5 ಓವರ್ ಗಳಲ್ಲಿ ಆಸೀಸ್ 100ರನ್ ದಾಟಿದೆ. ಇದೇ ಸಮಯಕ್ಕೆ ಕಿವೀಸ್ 70/3.
* 20 ಓವರ್ಸ್ ನಂತರ 98/2. ಆಸೀಸ್ ಗೆ ಗೆಲ್ಲಲು 86ರನ್ ಸಾಕು.
* 19 ಓವರ್ಸ್ ನಂತರ 96/2. ಮೈಕಲ್ ಕ್ಲಾರ್ಕ್ ಹಾಗೂ ಸ್ಟೀವನ್ ಸ್ಮಿತ್ ಉತ್ತಮ ಜೊತೆಯಾಟ.
* ಮೈಕಲ್ ಕ್ಲಾರ್ಕ್ ಅವರ ಕೊನೆ ಏಕದಿನ ಪಂದ್ಯ.
* ಸ್ಟೀವ್ ಸ್ಮಿತ್ ಲಕ್ಕಿ. ಚೆಂಡು ನಿಧಾನಗತಿಯಲ್ಲಿ ವಿಕೆಟ್ ಗೆ ಬಡಿದರೂ ಬೇಲ್ಸ್ ಬೀಳಲಿಲ್ಲ.ಈ ವಿಶ್ವಕಪ್ ಟೂರ್ನಿಯಲ್ಲಿ ಈ ರೀತಿ ಮೂರು ಬಾರಿ ಆಗಿದೆ.
* 45ರನ್ ಗಳಿಸಿ ಉತ್ತಮ ಆಡಿಪಾಯ ಹಾಕಿಕೊಟ್ಟ ವಾರ್ನರ್ ಹೆನ್ರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಸ್ಕೋರ್ 63/2, 12.3ಓವರ್ಸ್
* ವಾರ್ನರ್ ಹಾಗೂ ಸ್ಮಿತ್ 50 ರನ್ ಜೊತೆಯಾಟ 11.1 ಓವರ್ಸ್ 58/1.
* ವಾರ್ನರ್ ಅಬ್ಬರದ ಬ್ಯಾಟಿಂಗ್ ಸತತ ಬೌಂಡರಿಗಳನ್ನು ಚೆಚ್ಚುತ್ತಿದ್ದಾರೆ.
* ಟ್ರೆಂಟ್ ಬೌಲ್ಟ್ ಗೆ ಮೊದಲ ಯಶಸ್ಸು. 5 ಎಸೆತಗಳಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ ಫಿಂಚ್.
* 1983 ಕಪಿಲ್ ಡೆವಿಲ್ಸ್ ತಂಡದಿಂದ ಕಿವೀಸ್ ಸ್ಫೂರ್ತಿ ಪಡೆಯಬಹುದು.
ನ್ಯೂಜಿಲೆಂಡ್ ಬ್ಯಾಟಿಂಗ್: [1975-2011: ವಿಶ್ವಕಪ್ ಫೈನಲ್ ಪಂದ್ಯಗಳ ಮೆಲುಕು]

* ಆಸೀಸ್ ಪರ ಸ್ಟಾರ್ಕ್ 2, ಜಾನ್ಸನ್ 3, ಫಾಲ್ಕ್ನರ್ 3, ಮ್ಯಾಕ್ಸ್ ವೆಲ್ 1 ವಿಕೆಟ್.
* 45ನೇ ಓವರ್ ಅಂತ್ಯಕ್ಕೆ 183 ಸ್ಕೋರಿಗೆ ನ್ಯೂಜಿಲೆಂಡ್ ಸರ್ವಪತನ. ಆಸ್ಟ್ರೇಲಿಯಾಕ್ಕೆ 184ರನ್ ಟಾರ್ಗೆಟ್
* 45ನೇ ಓವರ್ ನಲ್ಲಿ ಫುಲ್ ಟಾಸ್ ಬಾಲ್ ನಲ್ಲಿ ಕ್ಯಾಚಿತ್ತು ಹೆನ್ರಿ ಪೆವಿಲಿಯನ್ ಗೆ ಜಾನ್ಸನ್ ಗೆ ವಿಕೆಟ್.
* 44 ಓವರ್ಸ್ ನಂತರ ನ್ಯೂಜಿಲೆಂಡ್ ಮೊತ್ತ 181/8 ರನ್ ಗಳಿಕೆ ನಿಯಂತ್ರಿಸಿದ ಆಸೀಸ್ ಬೌಲರ್ಸ್.
* 43 ಓವರ್ಸ್ ನಂತರ ನ್ಯೂಜಿಲೆಂಡ್ ಮೊತ್ತ 178/8.
* ಗ್ರ್ಯಾಂಟ್ ಎಲಿಯಟ್ 83ರನ್ (82 ಎಸೆತ) ಗಳಿಸಿ ಫಾಲ್ಕ್ನರ್ ಗೆ ವಿಕೆಟ್ ಒಪ್ಪಿಸಿದರು. 42 ಓವರ್ ಅಂತ್ಯಕ್ಕೆ 171/8.
* 41 ಓವರ್ ಆರಂಭದಲ್ಲೇ ಆಘಾತ. ಡೇನಿಯಲ್ ವೆಟ್ಟೋರಿ ಕ್ಲೀನ್ ಬೋಲ್ಡ್, ಜಾನ್ಸನ್ ಗೆ ಮತ್ತೊಂದು ವಿಕೆಟ್ .
* 40 ಓವರ್ಸ್ ಮುಕ್ತಾಯ 165/6.
* 38 ಓವರ್ಸ್ ನಂತರ ಕಿವೀಸ್ 157/6 ಸ್ಕೋರ್. ಎಲಿಯಟ್ 73, ವೆಟ್ಟೋರಿ 5.
* 37ನೇ ಮತ್ತೆ ಬೌಲಿಂಗ್ ಗೆ ಬಂದ ಸ್ಟಾರ್ಕ್ ಗೆ ಯಶಸ್ಸು. ಕಿವೀಸ್ ವಿಕೆಟ್ ಕೀಪರ್ ರಾಂಕಿ ಮೈಕಲ್ ಕ್ಲಾರ್ಕ್ ಗೆ ಕ್ಯಾಚಿತ್ತು ಔಟ್.

* 36 ಓವರ್ ಗಳ ನಂತರ ಕಿವೀಸ್ 150/5. ಲೂಕ್ ರಾಂಕಿ ಹಾಗೂ ಎಲಿಯಟ್ ಮೇಲೆ ರನ್ ಗಳಿಕೆ ಜವಾಬ್ದಾರಿ.
* ಫಾಲ್ಕ್ನರ್ ಗೆ ಸತತ ಎರಡು ವಿಕೆಟ್. ಮೊದಲಿಗೆ ಟೇಲರ್ 40, ಆಂಡರ್ಸನ್ 0. 3 ಎಸೆತಗಳ ಅಂತರದಲ್ಲಿ 2 ವಿಕೆಟ್ ಉದುರಿದೆ.
* 1992 ವಿಶ್ವಕಪ್ ಗೆದ್ದ ಶ್ರೀಲಂಕಾ ನಾಯಕ ಅರ್ಜುನ್ ರಣತುಂಗ ಫ್ಯಾಮಿಲಿ ಸಮೇತ ಪಂದ್ಯ ವೀಕ್ಷಣೆ.
* 35 ಓವರ್ಸ್ ಮುಕ್ತಾಯ. ಕಿವೀಸ್ 150/3. 5 ಓವರ್ಸ್ ಪವರ್ ಪ್ಲೇ ತೆಗೆದುಕೊಂಡ ನ್ಯೂಜಿಲೆಂಡ್.
* 33.2 ಓವರ್ಸ್ ನಲ್ಲಿ ಟೇಲರ್ ಹಾಗೂ ಎಲಿಯಟ್ ನಡುವೆ ನೂರು ರನ್ ಜೊತೆಯಾಟ.
* 30 ಓವರ್ಸ್ ನಂತರ ಕಿವೀಸ್ ಮೊತ್ತ 121/3. ಟೇಲರ್ 30, ಎಲಿಯಟ್ 54 ರನ್.
* 28 ಓವರ್ ಗಳ ನಂತರ 115/3. ಎಲಿಯಟ್ 51 ಎಸೆತಗಳಲ್ಲಿ 50ರನ್

* ಮೊದಲ 50ರನ್ -93 ಎಸೆತ, ಎರಡನೇ 50-68 ಎಸೆತ
* 26.2 ಓವರ್ ಗಳಲ್ಲಿ 100ರನ್ ಸ್ಕೋರ್ ಮಾಡಿದ ಕಿವೀಸ್.
* ಇನ್ನಿಂಗ್ಸ್ ನ ಮಧ್ಯಭಾಗ 25ನೇ ಓವರ್ ಗಳ ನಂತರ 3 ವಿಕೆಟ್ ಕಳೆದುಕೊಂಡ ಕಿವೀಸ್ 93ರನ್ . ಟೇಲರ್ 21, ಎಲಿಯಟ್ 39ರನ್.
* 24 ಓವರ್ಸ್ ನಂತರ 89/3. ಟೇಲರ್ ಹಾಗೂ ಎಲಿಯಟ್ ಉತ್ತಮ ಜೊತೆಯಾಟ.
* 23 ಓವರ್ ಗಳ ನಂತರ 83/3.. ಟಾಪ್ ಎಡ್ಜ್ ಆಗಿ ವಿಕೆಟ್ ಕೀಪರ್ ಹಿಂಬದಿ ಎಲಿಯಟ್ ನಿಂದ ಸಿಕ್ಸ್ ಗಳಿಕೆ.

* 22 ಓವರ್ ಗಳ ನಂತರ ಸ್ಕೋರ್ 77/3.
* 21ನೇ ಓವರ್: ಸ್ಟಾರ್ಕ್ ಮತ್ತೆ ಬೌಲಿಂಗ್
* 20 ಓವರ್ಸ್ ನಂತರ ಕಿವೀಸ್ ಸ್ಕೋರ್ 66/3. ಎಲಿಯರ್ 15, ಟೇಲರ್ 18
* ಮ್ಯಾಕ್ಸ್ ವೆಲ್ ಬೌಲಿಂಗ್ 19.5 ಎಸೆತದಲ್ಲಿ ಎಲಿಯಟ್ ವಿರುದ್ಧ ಎಲ್ ಬಿ ಅಪೀಲ್.. ಡಿಆರ್ ಎಸ್ ಗೆ ಮನವಿ.. ನಾಟೌಟ್ ಎಂದು ತೀರ್ಪು.
* 16 ಓವರ್ಸ್ ನಂತರ 51/3, ಡ್ರಿಂಕ್ಸ್ ಬ್ರೇಕ್.
* 15 ಓವರ್ ಗಳ ನಂತರ 47/3, ರಾಸ್ ಟೇಲರ್ ಮೇಲೆ ಕಿವೀಸ್ ಬ್ಯಾಟಿಂಗ್ ಭವಿಷ್ಯ ಅಡಗಿದೆ.
* 13 ಓವರ್ ನಲ್ಲಿ ಮಿಚೆಲ್ ಜಾನ್ಸನ್ ಗೆ ವಿಕೆಟ್. ಕೇನ್ ವಿಲಿಯಮ್ಸನ್ 33 ಎಸೆತಗಳಲ್ಲಿ 12 ರನ್ ಗಳಿಸಿ ಔಟ್. ಕಿವೀಸ್ 40/3.. ಓವರ್ ಅಂತ್ಯಕ್ಕೆ 41/3.
* 12ನೇ ಓವರ್ ಅಂತ್ಯಕ್ಕೆ 38/2, ರಾಸ್ ಟೇಲರ್ ಮೊದಲ ಎಸೆತದಲ್ಲೇ ಬೌಂಡರಿ ಗಳಿಕೆ.
* ವಿಕೆಟ್ ಪತನ 1 ರನ್ ಆಗಿದ್ದಾಗ ಮೆಕ್ಲಮ್, 33 ರನ್ ಗಪ್ಟಿಲ್ ಇಬ್ಬರು ಬೋಲ್ಡ್.
* 11ನೇ ಓವರ್ ಆರಂಭದಲ್ಲೇ ಕಿವೀಸ್ ಗೆ ಆಘಾತ, ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಗಪ್ಟಿಲ್ ಬೋಲ್ಡ್. ಸ್ಕೋರ್ 33/2
* 10 ಓವರ್ ಗಳ ನಂತರ ಕಿವೀಸ್ ಮೊತ್ತ 31/1, ಗುಪ್ಟಿಲ್ 14, ವಿಲಿಯಮ್ಸನ್ 11.

* 10 ಓವರ್ ಗಳಲ್ಲಿ ನ್ಯೂಜಿಲೆಂಡ್ ಗಳಿಸಿರುವ ಸರಾಸರಿ ರನ್ 57 ರಿಂದ 77 ರನ್ ನಷ್ಟಿದೆ. ಆದರೆ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತ್ಯಂತ ನಿಧಾನಗತಿ ರನ್ ಗಳಿಕೆ ಕಂಡು ಬಂದಿದೆ.
* 9ನೇ ಓವರ್ ಬೌಲಿಂಗ್ ಬದಲಾವಣೆ. ಮಿಚೆಲ್ ಜಾನ್ಸನ್ ಕಣಕ್ಕೆ. ಓವರ್ ಅಂತ್ಯಕ್ಕೆ 24/1.
ನಾಯಕ ಮೆಕ್ಲಮ್ ಡಕ್ ಹೊಡೆದರೂ ದಾಖಲೆ
* 8 ನೇ ಓವರ್ ಮೇಡನ್, ಹೇಜಲ್ ವುಡ್ ಬೌನ್ಸರ್ ಎದುರಿಸಿದ ಕೇನ್ ವಿಲಿಯಮ್ಸನ್.
* 7 ಓವರ್ ಗಳ ನಂತರ 23/1. ಕಿವೀಸ್ ಅಂತ್ಯಂತ ನಿಧಾನಗತಿ ಬ್ಯಾಟಿಂಗ್.
* ಸ್ಟಾರ್ಕ್ ಹಾಗೂ ಹೇಜಲ್ ವುಡ್ ಉತ್ತಮ ಬೌಲಿಂಗ್, ಕಿವೀಸ್ ಬ್ಯಾಟ್ಸ್ ಮನ್ ರನ್ ಗಳಿಕೆಗೆ ಕಡಿವಾಣ.
* 6ನೇ ಓವರ್ 22/1. ವಿಲಿಯನ್ಸನ್ 4 (16), ಗುಪ್ಟೀಲ್ 14 (17).
* 5 ಓವರ್ ಅಂತ್ಯಕ್ಕೆ ಕಿವೀಸ್ ಮೊತ್ತ 18/1.

* 4ನೇ ಓವರ್ : ಸಿಕ್ಸ್ ಎತ್ತಿ 13ರನ್ ಗಳಿಸಿದ್ದಾಗ ಮಾರ್ಟಿನ್ ಗುಪ್ಟಿಲ್ (545ರನ್) ಟೂರ್ನಿಯಲ್ಲಿ ಹೆಚ್ಚು ಸ್ಕೋರ್ ಮಾಡಿದ ಬ್ಯಾಟ್ಸ್ ಮನ್ ಎನಿಸಿದರು. ಓವರ್ ಅಂತ್ಯಕ್ಕೆ 17/1.
* 2ನೇ ಓವರ್ : ನಾಲ್ಕನೇ ಎಸೆತದಲ್ಲಿ ಲೆಗ್ ಬೈ ಮೂಲಕ ಮೊದಲ ಬೌಂಡರಿ. ಓವರ್ ಅಂತ್ಯಕ್ಕೆ 6/1.
* ಮೊದಲ ಓವರ್ : ಸ್ಟಾರ್ಕ್ ಕರಾರುವಾಕ್ ಬೌಲಿಂಗ್ ಕಿವೀಸ್ ಗೆ ಆಘಾತ. ನಾಯಕ ಬ್ರೆಂಡನ್ ಮೆಕ್ಲಮ್ ಕ್ಲೀನ್ ಬೋಲ್ಡ್. ಓವರ್ ಅಂತ್ಯಕ್ಕೆ 1/1.
ಎಂಸಿಜಿಗೆ ಆಟಗಾರರ ಎಂಟ್ರಿ
ಬ್ರೆಂಡನ್ ಮೆಕ್ಲಮ್ ನಾಯಕತ್ವದ ನ್ಯೂಜಿಲೆಂಡ್ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು ಕಪ್ ಗೆ ಮುತ್ತಿಡಲು ಕಾತುರದಿಂದ ಕಾದಿದೆ. ಕೊನೆಯ ಏಕದಿನ ಪಂದ್ಯವಾಡುತ್ತಿರುವ ಮೈಕಲ್ ಕ್ಲಾರ್ಕ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಐದನೇ ಬಾರಿ ವಿಶ್ವಕಪ್ ಗೆಲ್ಲುವ ತವಕದಲ್ಲಿದೆ.[ಕಿವೀಸ್ ಕಪ್ ಗೆದ್ರೆ ತಪ್ಪೇನು?]
11ನೇ ವಿಶ್ವಕಪ್ ಟಾಸ್ ರಿಪೋರ್ಟ್: ಟಾಸ್ ಚಿಮ್ಮಿಸಿದ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್.. ಹೆಡ್ಸ್ ಎಂದ ಕಿವೀಸ್ ನಾಯಕ ಬ್ರೆಂಡನ್ ಮೆಕ್ಲಮ್.. ಹೆಡ್ಸ್ ಬಿದ್ದಿದೆ ಎಂದು ರೆಫ್ರಿ ರಂಜನ್ ಮದುಗಲೆ. ಟಾಸ್ ಗೆದ್ದ ಬ್ರೆಂಡನ್ ಮೆಕಲಮ್ ಮೊದಲು ಬ್ಯಾಟಿಂಗ್ ಆಯ್ಕೆ. [ಏಕದಿನ ಕ್ರಿಕೆಟ್ ಗೆ ಮೈಕಲ್ ಕ್ಲಾರ್ಕ್ ವಿದಾಯ]
ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಡೇವಿಡ್ ವಾರ್ನರ್, ಅರೋನ್ ಫಿಂಚ್, ಶೇನ್ ವಾಟ್ಸನ್, ಸ್ಟೀವ್ ಸ್ಮಿತ್, ಬ್ರಾಡ್ ಹಡ್ಡೀನ್(ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ ವೆಲ್, ಜೇಮ್ಸ್ ಫಾಲ್ಕ್ನರ್, ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ಜೋಶ್ ಹಜೇಲ್ ವುಡ್.
ನ್ಯೂಜಿಲೆಂಡ್: ಗುಪ್ಟಿಲ್, ಬ್ರೆಂಡನ್ ಮೆಕ್ಲಮ್(ನಾಯಕ), ವಿಲಿಯಮ್ಸನ್, ರಾಸ್ ಟೇಲರ್, ಗ್ರ್ಯಾಂಟ್ ಎಲಿಯಟ್, ಆಂಡರ್ಸನ್, ರೋಂಚಿ, ವೆಟ್ಟೋರಿ, ಹೆನ್ರಿ, ಸೌಥಿ, ಬೌಲ್ಟ್.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications