ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಪುಣೆ ಪಾಲಾದ ಧೋನಿ, ರೈನಾ ರಾಜ್ ಕೋಟ್ ಗೆ

By Mahesh

ಮುಂಬೈ, ಡಿ. 15: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಪುಣೆ ಹಾಗೂ ರಾಜ್ ಕೋಟ್ ತಂಡಗಳು ಮೊಟ್ಟ ಮೊದಲ ಬಾರಿಗೆ ಆಟಗಾರರನ್ನು ಆಯ್ಕೆ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿವೆ . ಉಭಯ ತಂಡಗಳು ಐದು ಆಟಗಾರರನ್ನು ಆಯ್ಕೆ ಮಾಡಬಹುದಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಎಂಎಸ್ ಧೋನಿ ಅವರು ಇನ್ನೆರಡು ವರ್ಷಗಳ ಕಾಲ ಪುಣೆ ತಂಡದ ಪರ ಆಡಲಿದ್ದಾರೆ. ಸಿಎಸ್ ಕೆ ಪರ ಆಡುತ್ತಿದ್ದ ಸುರೇಶ್ ರೈನಾ ಅವರು ರಾಜ್ ಕೋಟ್ ಸೇರಿದ್ದಾರೆ.

MS Dhoni and Raina

ಯಾರು ಎಲ್ಲಿಗೆ ಸೇಲ್ ಆಗಿದ್ದಾರೆ:
* ಎಂಎಸ್ ಧೋನಿ- ಪುಣೆ ತಂಡಕ್ಕೆ 12.5 ಕೋಟಿ ರು ಗೆ (ಇದು ಅವರಿಗೆ ನೀಡುವ ಮೊತ್ತವಲ್ಲ, ಈ ಹಿಂದಿನ ತಂಡದಲ್ಲಿ ಪಡೆಯುತ್ತಿದ್ದ ಸಂಭಾವನೆಯೇ ಮುಂದುವರೆಯಲಿದೆ)
* ಸುರೇಶ್ ರೈನಾ- ರಾಜ್ ಕೋಟ್ (12.5 ಕೋಟಿ ರು)
* ಅಜಿಂಕ್ಯ ರಹಾನೆ-ಪುಣೆ (9.5 ಕೋಟಿ ರು)
* ರವೀಂದ್ರ ಜಡೇಜ- ರಾಜ್ ಕೋಟ್ (9.5 ಕೋಟಿ ರು)
* ಆರ್ ಅಶ್ವಿನ್-ಪುಣೆ (7.5 ಕೋಟಿ ರು)
* ಬ್ರೆಂಡನ್ ಮೆಕಲಮ್ -ರಾಜ್ ಕೋಟ್ (7.5 ಕೋಟಿ ರು)
* ಸ್ಟೀವನ್ ಸ್ಮಿತ್ - ಪುಣೆ (5.5 ಕೋಟಿ ರು)
* ಫಾಫ್ ಡುಪ್ಲೆಸಿಸ್- ಪುಣೆ (4 ಕೋಟಿ ರು)
* ಜೇಮ್ಸ್ ಫಾಲ್ಕನರ್ -ರಾಜ್ ಕೋಟ್ (5.5 ಕೋಟಿ ರು)
* ಡ್ವಾಯ್ನೆ ಬ್ರಾವೋ-ರಾಜ್ ಕೋಟ್ (4 ಕೋಟಿ ರು)
Indian Premier League Players' Draft Live: Pune likely to gun for Dhoni

ಹೊಸದಾಗಿ ಸೇರ್ಪಡೆಗೊಂಡಿರುವ ಪುಣೆ ಹಾಗೂ ರಾಜ್ ಕೋಟ್ ತಂಡಗಳು ಮಂಗಳವಾರ ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಲು ಯಾವೆಲ್ಲ ಆಟಗಾರರು ತಮ್ಮ ಬಳಿ ಇದ್ದಾರೆ ಎಂಬ ಕರಡು ಪ್ರತಿಯನ್ನು ಪ್ರಕಟಿಸಿದ್ದಾರೆ.

ಪುಣೆ ತಂಡ (66 ಕೋಟಿ ರು) : ಎಂಎಸ್ ಧೋನಿ(ಭಾರತ), ಅಜಿಂಕ್ಯ ರಹಾನೆ(ಭಾರತ), ಆರ್ ಅಶ್ವಿನ್(ಭಾರತ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡುಪ್ಲೆಸಿಸ್ (ದಕ್ಷಿಣ ಆಫ್ರಿಕಾ)



ರಾಜ್ ಕೋಟ್ (66 ಕೋಟಿ ರು) :
ಸುರೇಶ್ ರೈನಾ (ಭಾರತ), ರವೀಂದ್ರ ಜಡೇಜ (ಭಾರತ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) , ಜೇಮ್ಸ್ ಫಾಲ್ಕನರ್ (ಆಸ್ಟ್ರೇಲಿಯಾ), ಡ್ವಾಯ್ನೆ ಬ್ರಾವೋ (ವೆಸ್ಟ್ ಇಂಡೀಸ್)



ಹರಾಜು ಪ್ರಕ್ರಿಯೆಯಲ್ಲಿ ಪುಣೆ ತಂಡಕ್ಕೆ ಹರಾಜು ಕೂಗುವ ಮೊದಲ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. [ಕರಡು ಪ್ರತಿಯಲ್ಲಿರುವ 50 ಆಟಗಾರರ ಹೆಸರು]
Indian Premier League Players' Draft Live: Pune likely to gun for Dhoni

ಈ ತಂಡಗಳು ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬದಲಿಗೆ ಟೂರ್ನಿಯಲ್ಲಿ ಆಡಲಿವೆ.

ಆಟಗಾರರ ಹರಾಜು ಪ್ರಕ್ರಿಯೆಗೆ ಸಿದ್ಧವಾಗುವ ಮುನ್ನ ಯಾವೆಲ್ಲ ಆಟಗಾರರು ಹರಾಜಿಗೆ ಲಭ್ಯರಿದ್ದಾರೆ ಎಂಬುದರ ಕರಡು ಪ್ರತಿ ಪ್ರಕಟವಾಗಿದೆ.

ಎಂಎಸ್ ಧೋನಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಆಟಗಾರರು ಬೆಂಗಳೂರಿನಲ್ಲಿ ಫೆಬ್ರವರಿ 6ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಎರಡು ಹೊಸ ತಂಡಗಳು ಕನಿಷ್ಠ 40 ಕೋಟಿ ರು ಹಾಗೂ ಗರಿಷ್ಠ 66 ಕೋಟಿ ರು ಬಳಸಿ ಆಟಗಾರರನ್ನು ಖರೀದಿಸಬಹುದಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X