ಲೆಜೆಂಡ್ಸ್ ಕ್ರಿಕೆಟ್ ಲೀಗ್: 206 ರನ್ ಚೇಸ್ ಮಾಡಿದ ಏಷ್ಯಾ ಲಯನ್ಸ್‌ಗೆ ರೋಚಕ ಜಯ

ಒಮನ್ ಅಲ್ ಅಮೀರತ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಲೆಜೆಂಡ್ಸ್ ಲೀಗ್‌ನ ಒಂದೇ ಟಿ20 ಪಂದ್ಯದಲ್ಲಿ 400ಕ್ಕೂ ಹೆಚ್ಚು ರನ್ ಹರಿದು ಬಂದಿದ್ದು, ವರ್ಲ್ಡ್ ಜಾಯಿಂಟ್ಸ್ ವಿರುದ್ಧ ಏಷ್ಯಾ ಲಯನ್ಸ್ 206ರನ್‌ಗಳ ಬೃಹತ್ ಮೊತ್ತವನ್ನ ಚೇಸ್ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡರೆನ್ ಸಮಿ ನಾಯಕತ್ವದ ವರ್ಲ್ಡ್ ಜಾಯಿಂಟ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಕೆವಿನ್ ಪೀಟರ್ಸನ್ ಕೇವಲ 14 ರನ್‌ಗೆ ಔಟಾದ್ರೆ, ಫಿಲ್ ಮಸ್ಟರ್ಡ್ 28ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ನಂತರದಲ್ಲಿ ಕಣಕ್ಕಿಳಿದ ಐರ್ಲೆಂಡ್ ಮೂಲದ ಸ್ಫೋಟಕ ಬ್ಯಾಟ್ಸ್‌ಮನ್ಸ್ ಕೆವಿನ್ ಒಬ್ರಾಯನ್ ಏಷ್ಯಾ ಲಯನ್ಸ್ ಬೌಲರ್‌ಗಳನ್ನ ದಂಡಿಸಿದ್ರು.
ಕೇವಲ 46 ಎಸೆತಗಳಲ್ಲಿ 95 ರನ್ ಸಿಡಿಸಿದ ಒಬ್ರಾಯನ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್‌ಗಳಿದ್ದವು. 206.52 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಒಬ್ರಾಯನ್ ತಂಡದ ಸ್ಕೋರ್ 200ರ ಗಡಿ ದಾಟುವಲ್ಲಿ ನೆರವಾದ್ರು. ಉಳಿದ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ವರ್ಲ್ಡ್ ಜಾಯಿಂಟ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು.
207 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಏಷ್ಯಾ ಲಯನ್ಸ್ ತಂಡ
ವರ್ಲ್ಡ್ ಜಾಯಿಂಟ್ಸ್ ನೀಡಿದ 207 ರನ್ ಗುರಿ ಬೆನ್ನತ್ತಿದ ಏಷ್ಯಾ ಲಯನ್ಸ್ ಟೀಂ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡರೂ ಸಹ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಶ್ರೀಲಂಕಾದ ತಿಲಕರತ್ನೆ ದಿಲ್ಷ್ಯಾನ್ ಹಾಗೂ ಉಪುಲ್ ತರಂಗಾ ಜೋಡಿ ಎದುರಾಳಿ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ್ರು.
ಕಮ್ರಾನ್ ಅಕ್ಮಲ್ ಕೇವಲ 14ರನ್‌ಗೆ ಔಟಾಗುತ್ತಿದ್ದಂತೆ ಕ್ರೀಸ್‌ಗಿಳಿದ ಉಪುಲ್ ತರಂಗ 43 ಎಸೆತಗಳಲ್ಲಿ 63 ರನ್ ಸಿಡಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಇವ್ರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು. ತರಂಗಗೆ ಉತ್ತಮ ಸಾಥ್ ನೀಡಿದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ದಿಲ್ಷ್ಯಾನ್ 32 ಎಸೆತಗಳಲ್ಲಿ 52 ರನ್ ಸಿಡಿಸಿದ್ರು. ಇವರ ಬ್ಯಾಟ್‌ನಿಂದ ಮೂರು ಬಾರಿ ಚೆಂಡು ಬೌಂಡರಿ ಲೈನ್ ಗೆರೆ ದಾಟಿತು.
ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡ ಬಳಿಕ ಮೊಹಮ್ಮದ್ ಹಫೀಜ್ 27, ಅಸ್ಗರ್ ಅಫ್ಘನ್ ಅಜೇಯ 14, ನಾಯಕ ಮಿಸ್ಬಾ ಉಲ್ ಹಕ್ ಅಜೇಯ 19 ರನ್ ಕಲೆಹಾಕಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ರು.
ಆರು ವಿಕೆಟ್‌ಗಳ ಗೆಲುವು ಸಾಧಿಸಿದ ಏಷ್ಯಾ ಲಯನ್ಸ್ ತಂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022ರಲ್ಲಿ ಮೊದಲ ಗೆಲುವನ್ನ ದಾಖಲಿಸಿದೆ. ಈ ಮೊದಲು ಮೊಹಮ್ಮದ್ ಕೈಫ್ ನಾಯಕತ್ವದ ಇಂಡಿಯಾ ಮಹಾರಾಜಸ್ ವಿರುದ್ಧ ಸೋಲನ್ನ ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications