Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LLC 2023: ನಾನು ಸುರೇಶ್ ರೈನಾ, ಶಾಹಿದ್ ಅಫ್ರಿದಿ ಅಲ್ಲ ಎಂದಿದ್ಯಾಕೆ 'ಮಿಸ್ಟರ್ ಐಪಿಎಲ್'

LLC 2023: Suresh Rainas Hilarious Shahid Afridi Reference in Response to IPL Comeback Question

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ ಅತ್ಯುತ್ತಮ ಆಟಗಾರರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ರೈನಾ ಸದ್ಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ 2023ರಲ್ಲಿ ಭಾರತ ಮಾಹಾರಾಜಾಸ್ ಪರವಾಗಿ ಆಡುತ್ತಿದ್ದಾರೆ. ಬುಧವಾರ ವರ್ಲ್ಡ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 49 ರನ್ ಗಳಿಸುವ ಮೂಲಕ ಹಳೆದ ದಿನಗಳ ಆಟವನ್ನು ನೆನಪಿಸಿದ್ದರು.

ಸುರೇಶ್ ರೈನಾ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ವಿದಾಯ ಘೋಷಿಸಿದ್ದಾರೆ. ಇನ್ನೂ ಕ್ರಿಕೆಟ್ ಆಡುವ ಸಾಮರ್ಥ್ಯವಿದ್ದರೂ ನಿವೃತ್ತಿ ಘೋಷಿಸಿದ್ದು ಅಭಿಮಾನಿಗಳಿಗೆ ಬೇಸರ ಉಂಟುಮಾಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಎಂಎಸ್ ಧೋನಿ ಹೊರತುಪಡಿಸಿದರೆ, ಸುರೇಶ್ ರೈನಾ ಅತಿ ಹೆಚ್ಚು ಇಷ್ಟಪಡುವ ಆಟಗಾರರಲ್ಲಿ ಒಬ್ಬರಾಗಿದ್ದರು.

ಮಿಸ್ಟರ್ ಐಪಿಎಲ್ ಎಂದೇ ಹೆಸರಾಗಿದ್ದ ಅವರು ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಸಿಎಸ್‌ಕೆ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಲೂ ಸುರೇಶ್ ರೈನಾ ಐಪಿಎಲ್‌ನಲ್ಲಿ ಆಡಬೇಕು ಎನ್ನುವ ಬಯಕೆ ಅಭಿಮಾನಿಗಳಲ್ಲಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಪತ್ರಕರ್ತರೊಬ್ಬರು ಸುರೇಶ್‌ ರೈನಾರನ್ನು ಮತ್ತೆ ಐಪಿಎಲ್‌ನಲ್ಲಿ ಆಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಶಾಹಿದ್ ಅಫ್ರಿದಿ ಉದಾಹರಣೆ ನೀಡುವ ಮೂಲಕ ತಮಾಷೆಯಿಂದಲೇ ಉತ್ತರ ನೀಡಿದ್ದಾರೆ.

LLC 2023: Suresh Rainas Hilarious Shahid Afridi Reference in Response to IPL Comeback Question

ನಾನು ಸುರೇಶ್ ರೈನಾ ಶಾಹಿದ್ ಅಫ್ರಿದಿ ಅಲ್ಲ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹಲವು ಬಾರಿ ನಿವೃತ್ತಿ ಘೋಷಿಸಿದ ಬಳಿಕವೂ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದಲ್ಲದೆ, ಪಾಕಿಸ್ತಾನ ತಂಡದಲ್ಲಿ ಆಡಿದ್ದರು. ಇದನ್ನೇ ಉದಾಹರಣೆಯಾಗಿಟ್ಟುಕೊಂಡು ರೈನಾ ಉತ್ತರ ನೀಡಿದ್ದಾರೆ.

"ನಾನು ಸುರೇಶ್ ರೈನಾ, ಶಾಹಿದ್ ಅಫ್ರಿದಿ ಅಲ್ಲ, ನಾನು ನಿವೃತ್ತಿ ತೆಗೆದುಕೊಂಡಿದ್ದೇನೆ" ಎಂದು ಸುರೇಶ್ ರೈನಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಮತ್ತೆ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

LLC 2023: Suresh Rainas Hilarious Shahid Afridi Reference in Response to IPL Comeback Question

ಸಿಎಸ್‌ಕೆ ಅತ್ಯುತ್ತಮ ಪ್ರದರ್ಶನ ನೀಡಲಿದೆ

ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಮುಖಭಂಗ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ 2023ರ ಐಪಿಎಲ್‌ನಲ್ಲಿ ವಾಪಸಾತಿ ಮಾಡುವ ಉತ್ಸಾಹದಲ್ಲಿದೆ. ಬೆನ್‌ ಸ್ಟೋಕ್ಸ್ ಸಿಎಸ್‌ಕೆ ಸೇರಿಕೊಂಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ.

ತಮ್ಮ ಮಾಜಿ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುರೇಶ್ ರೈನಾ ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ನಾಲ್ಕು ವರ್ಷಗಳ ನಂತರ ಸಿಎಸ್‌ಕೆ ತವರಿನಲ್ಲಿ ಪಂದ್ಯವನ್ನಾಡಲಿದೆ. ರವೀಂದ್ರ ಜಡೇಜಾ ಈ ಬಾರಿ ಉತ್ತಮ ಪ್ರದರ್ಶನ ನೀಡಲಿದ್ದಾರೆ, ಧೋನಿ ಪಂದ್ಯ ಗೆಲ್ಲಲು ಜಡೇಜಾ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಹೇಳಿದ್ದಾರೆ.

ಸಿಎಸ್‌ಕೆ ತಂಡದ ನಾಯಕ ಎಂಎಸ್‌ ಧೋನಿ ಈ ಬಾರಿಯ ಐಪಿಎಲ್ ನಂತರ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿಗೆ ಮುನ್ನ ತಂಡವನ್ನು ಚಾಂಪಿಯನ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Story first published: Thursday, March 16, 2023, 15:39 [IST]
Other articles published on Mar 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+