LLC Final 2023: ಚಾಂಪಿಯನ್ ಪಟ್ಟಕ್ಕಾಗಿ ವರ್ಲ್ಡ್ ಜೈಂಟ್ಸ್ ಹಾಗೂ ಏಷ್ಯಾ ಲಯನ್ಸ್ ಸೆಣೆಸಾಟ; ಆಡುವ ಬಳಗ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಫೈನಲ್ ಪಂದ್ಯ ಇಂದು ನಡೆಯುತ್ತಿದ್ದು ವರ್ಲ್ಡ್ ಲೆಜೆಂಡ್ಸ್ ಹಾಗೂ ಏಷ್ಯಾ ಲಯನ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ತಂಡಗಳು ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಏಷ್ಯಾ ಲಯನ್ಸ್ ತಂಡ ಆರಂಭದಲ್ಲಿ ಬೌಲಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಇನ್ನು ಈ ಸೆಣೆಸಾಟದಲ್ಲಿ ವರ್ಲ್ಡ್ ಜೈಂಟ್ಸ್ ತಂಡದಿಂದ ಆರೋನ್ ಫಿಂಚ್ ಹೊರಗುಳಿದಿದ್ದು ಶೇನ್ ವಾಟ್ಸನ್ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಏಷ್ಯಾ ಲಯನ್ಸ್ ತಂಡವನ್ನು ಶಾಹಿದ್ ಅಫ್ರಿದಿ ಮುನ್ನಡೆಸುತ್ತಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಈ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಎನಿಸಲಿದೆ.
ಎಲ್‌ಎಲ್‌ಸಿಯ ಲೀಗ್ ಹಂತದ ಮುಖಾಮುಖಿಯಲ್ಲಿ ಏಷ್ಯಾ ಲಯನ್ಸ್ ವಿರುದ್ಧದ ಅದ್ಭುತ ವಿಜಯದ ನಂತರ ವಿಶ್ವ ಜೈಂಟ್ಸ್ ತಂಡ ಫೈನಲ್‌ಗೆ ಪ್ರವೇಶಿಸಿತು. ಇನ್ನು ಎಲಿಮಿನೇಟರ್‌ನಲ್ಲಿ ಶನಿವಾರದಂದು ಇಂಡಿಯಾ ಮಹಾರಾಜಾಸ್ ತಂಡವನ್ನು 85 ರನ್‌ಗಳ ಅಂತರದಿಂದ ಮಣಿಸಿ ಏಷ್ಯಾ ಲಯನ್ಸ್ ತಂಡ 2023ರ ಆವೃತ್ತಿಯ ಫೈನಲ್‌ಗೆ ಪ್ರವೇಶಿಸಿದೆ.
ವರ್ಲ್ಡ್ ಜೈಂಟ್ಸ್ ಪ್ಲೇಯಿಂಗ್ XI: ಮೋರ್ನೆ ವ್ಯಾನ್ ವೈಕ್(ವಿಕೆಟ್ ಕೀಪರ್), ಶೇನ್ ವ್ಯಾಟ್ಸನ್(ನಾಯಕ), ರಾಸ್ ಟೇಲರ್, ಜಾಕ್ವೆಸ್ ಕಾಲಿಸ್, ಲೆಂಡ್ಲ್ ಸಿಮನ್ಸ್, ಪಾಲ್ ಕಾಲಿಂಗ್‌ವುಡ್, ಸಮಿತ್ ಪಟೇಲ್, ಮಾಂಟಿ ಪನೇಸರ್, ಟಿನೋ ಬೆಸ್ಟ್, ಕ್ರಿಸ್ ಎಂಪೋಫು, ಬ್ರೆಟ್ ಲೀ
ಏಷ್ಯಾ ಲಯನ್ಸ್ ಪ್ಲೇಯಿಂಗ್ XI: ಉಪುಲ್ ತರಂಗ(ವಿಕೆಟ್ ಕೀಪರ್), ತಿಲಕರತ್ನೆ ದಿಲ್ಶನ್, ಮೊಹಮ್ಮದ್ ಹಫೀಜ್, ಅಸ್ಗರ್ ಅಫ್ಘಾನ್, ತಿಸಾರ ಪೆರೆರಾ, ಅಬ್ದುರ್ ರಜಾಕ್, ಶಾಹಿದ್ ಅಫ್ರಿದಿ(ನಾಯಕ), ಮಿಸ್ಬಾ-ಉಲ್-ಹಕ್, ಸೊಹೈಲ್ ತನ್ವೀರ್, ಪರಾಸ್ ಖಡ್ಕಾ, ಅಬ್ದುಲ್ ರಜಾಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications