For Quick Alerts
ALLOW NOTIFICATIONS  
For Daily Alerts
 

ಆಕ್ರಮಣಕಾರಿ ಆಟ ನನ್ನ ಶೈಲಿ, ಉತ್ತಮ ಪ್ರದರ್ಶನ ನನ್ನ ಗುರಿ : ಮಯಾಂಕ್

 Looking forward to give my best: Mayank Agarwal

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರವಾಲ್ ಅವರಿಗೆ ಕೊನೆಗೂ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದೆ. ಕರ್ನಾಟಕ, ಇಂಡಿಯಾ ಎ ಹಾಗೂ ಐಪಿಎಲ್ ನಲ್ಲಿ ಉತ್ತಮವಾಗಿ ಆಡಿದ್ದರೂ ಭಾರತ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಶನಿವಾರದಂದು ಬಿಸಿಸಿಐ ಆಯ್ಕೆ ಸಮಿತಿಯು, ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಕ್ಕೆ ತಂಡವನ್ನು ಘೋಷಿಸಿದ್ದು, ಮಯಾಂಕ್ ಸ್ಥಾನ ಪಡೆದುಕೊಂಡಿದ್ದಾರೆ.

27 ವರ್ಷ ವಯಸ್ಸಿನ ಮಯಾಂಕ್ ಅವರು ತಂಡಕ್ಕೆ ಆಯ್ಕೆಯಾಗಿದ್ದರ ಬಗೆಗ್ ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ತಡವಾಗಿ ಅವಕಾಶ ಸಿಕ್ಕಿದೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಉತ್ತಮ ಪ್ರದರ್ಶನ ನೀಡುತ್ತೇನೆ.

ವೀರೆಂದ್ರ ಸೆಹ್ವಾಗ್, ಮ್ಯಾಥ್ಯೂ ಹೇಡನ್ ಹಾಗೂ ಡೇವಿಡ್ ವಾರ್ನರ್ ಅವರು ಕ್ರಿಕೆಟ್ ನ ಎಲ್ಲಾ ಬಗೆಯಲ್ಲೂ ಒಂದೇ ರೀತಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಯಶಸ್ವಿಯಾಗಿದ್ದರು. ಸನ್ನಿವೇಶಕ್ಕೆ ತಕ್ಕಂತೆ ಆಟವನ್ನು ಅರಿತುಕೊಂಡು ಆಡುವುದು ಮುಖ್ಯ ಎಂದು ಹೇಳಿದರು.

'ನಾನು ರಾಷ್ಟ್ರೀಯ ತಂಡದಲ್ಲಿ ಮತ್ತೆ ಕೊಹ್ಲಿ ನಾಯಕತ್ವದಲ್ಲಿ ಆಡುವುದಕ್ಕೆ ಉತ್ಸುಕನಾಗಿದ್ದೇನೆ, ಕೊಹ್ಲಿ ಜೊತೆ ಆಡುವುದರಿಂದ ಹಲವಾರು ರೀತಿಯ ಸಲಹೆಯನ್ನು ನಿರೀಕ್ಷಿಸಿದ್ದೇನೆ' ಎಂದರು.

ನನಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು, ದೇಶದ ಪರ ಆಡಲು ಅವಕಾಶ ಸಿಕ್ಕಿರುವುದು ದೊಡ್ಡ ವಿಷಯ ಎಂದು ಟ್ವೀಟ್ ಮಾಡಿದ್ದಾರೆ.

43 ಪ್ರಥಮ ದರ್ಜೆ ಕ್ರಿಕೆಟ್​ ಆಡಿದ್ದು, 8 ಶತಕ 18 ಅರ್ಧ ಶತಕ ಸಹಿತ 3372 ರನ್​ ಗಳಿಸಿದ್ದಾರೆ. 304 ರನ್ ಗರಿಷ್ಠ ವೈಯಕ್ತಿಕ ಮೊತ್ತ. 67 ಏಕದಿನ ಕ್ರಿಕೆಟ್​ ಆಡಿದ್ದು 3360 ರನ್​ ಗಳಿಸಿದ್ದಾರೆ. 176 ಗರಿಷ್ಠ ರನ್​​ ವೈಯಕ್ತಿಕ ಸ್ಕೋರ್. 12 ಶತಕ ಹಾಗೂ 13 ಅರ್ಧ ಶತಕ ಗಳಿಸಿದ್ದಾರೆ. ಇನ್ನು 111 ಟಿ20 ಪಂದ್ಯಗಳಲ್ಲಿ ಒಂದು ಶತಕ ಹಾಗೂ 15 ಅರ್ಧ ಶತಕಗಳ ಸಹಿತ 2340 ರನ್​ ಗಳಿಸಿದ್ದಾರೆ.

Story first published: Sunday, September 30, 2018, 17:50 [IST]
Other articles published on Sep 30, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+