ಭಾರತಕ್ಕೆ ವಿಶ್ವಕಪ್ ಫೈನಲ್‌ನಲ್ಲಿ ಶರಣಾಗಿದ್ದು ಜೀವನದುದ್ದಕ್ಕೂ ಕಾಡಲಿದೆ: ಪಾಕ್ ಆರಂಭಿಕ ಆಟಗಾರ

ಪಾಕಿಸ್ತಾನದ ಆರಂಭಿಕ ಆಟಗಾರ ಇಮ್ರಾನ್ ನಜೀರ್ ತನ್ನ ಜೀವನದುದ್ದಕ್ಕೂ ಕಾಡುವ ಸಂಗತಿಯನ್ನು ಹೇಳಿಕೊಂಡಿದ್ದಾರೆ. 2007ರಲ್ಲಿ ದಕ್ಚಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದು ಜೀವನದ ದೊಡ್ಡ ವಿಷಾದದ ಸಂಗತಿಯಾಗಿದೆ. ನನ್ನ ಕೊನೆಯುಸಿರಿನವರೆಗೂ ಆ ಸೋಲು ನನ್ನನ್ನು ಕಾಡಲಿದೆ ಎಂದು ನಜೀರ್ ಹೇಳಿದ್ದಾರೆ.

ಎಂಎಸ್ ಧೋನಿ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ 5 ರನ್‌ಗಳಿಂದ ಮಣಿಸಿತ್ತು. ಈ ಮೂಲಕ ಜೊಹನ್ಸ್‌ಬರ್ಗ್‌ನಲ್ಲಿ ವಿಜಯಪತಾಕೆಯನ್ನು ಹಾರಿಸಿತ್ತು ಭಾರತದ ತಂಡ. ಈ ಮೂಲಕ ಚೊಚ್ಚಲ ವಿಶ್ವಕಪ್‌ಅನ್ನು ಮುಡಿಗೇರಿಸಿಕೊಂಡಿತ್ತು.

'ಯಾರ್ಕ್‌ಶೈರ್‌ ಕ್ರಿಕೆಟ್ ಕ್ಲಬ್‌ನಲ್ಲಿ ವರ್ಣಭೇದ ನೀತಿಗೆ ಒಳಗಾಗಿದ್ದೆ'

ಯುಟ್ಯೂಬ್ ಚಾನೆಲ್‌ ಒಂದರಲ್ಲಿ ಮಾತನಾಡಿದ ನಜೀರ್ "ಕ್ರಿಕೆಟ್ ವಿಚಾರದಲ್ಲಿ ಅ ಸೋಲು ನನ್ನ ಜೀವನದ ಅತ್ಯಂತ ವಿಷಾದದ ಸಂದರ್ಭವಾಗಿದೆ. ನನ್ನ ಜಿವನದ ಕೊನೆಯುಸಿರಿರುವವರೆಗೂ ಅದು ನನ್ನನ್ನು ಕಾಡಲಿದೆ. ನಮಗೆ ಇತಿಹಾಸವನ್ನು ಬರೆಯಲು ಅವಕಾವಿತ್ತು ಎಂದು ನಜೀರ್ ಹೇಳಿಕೊಂಡಿದ್ದಾರೆ.

ಅಂದಿನ ವಿಶ್ವಕಪ್ ಟೂರ್ನಿಯಲ್ಲಿ ಇಮ್ರಾನ್ ನಜೀರ್ ಪಾಕಿಸ್ತಾನ ಬ್ಯಾಟಿಂಗ್‌ ಲೈನ್ಅಪ್‌ನ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದರು. ಆರಮಭದಲಲ್ಇ ಅದ್ಭುತ ಆಟವನ್ನು ಪ್ರದರ್ಶಿಸುವ ಭರವಸೆಯನ್ನು ನೀಡಿದ್ದ ನಝಿರ್ ರನ್‌ ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದರು. ನಜೀರ್ 14 ಎಸೆತಗಳಲ್ಲಿ 33 ರನ್ ಗಳಿಸಿದ್ದರು.

ಅಲೆಕ್ಸ್ ಕ್ಯಾರಿ-ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟಕ್ಕೆ ಶರಣಾದ ಇಂಗ್ಲೆಂಡ್

ನಾನು ನಿಜಕ್ಕೂ ಅಂದು ಚೆನ್ನಾಗಿ ಆಡುತ್ತಿದ್ದೆ.ಆದರೆ ದುರದೃಷ್ಟವಶಾತ್ ರನ್‌ಔಟ್‌ಗೆ ಬಲಿಯಾಗಬೇಕಾಯಿತು. ಬಳಿಕ ಪಂದ್ಯ ನಿಧಾನವಾಗಿ ನಮ್ಮ ಕೈಯಿಂದ ಜಾರಲು ಪ್ರಾರಂಭವಾಯಿತು. ಅದು ನನಗೆ ಈಗಲೂ ತುಂಬಾ ಘಾಸಿಮಾಡುತ್ತದೆ ಎಂದು ಬಲಗೈ ಆರಂಭಿಕ ಆಟಗಾರ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, September 17, 2020, 8:47 [IST]
Other articles published on Sep 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X