ಫ್ರಾಂಚೈಸಿ ಟಿ20 ಕ್ರಿಕೆಟ್‌ಗೆ ಹೆಚ್ಚು ಪ್ರೋತ್ಸಾಹ ಸಿಗಬೇಕು, ಟಿ20 ಸರಣಿ ಕಮ್ಮಿ ಆಗಬೇಕು: ರವಿಶಾಸ್ತ್ರಿ

ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅಂತರಾಷ್ಟ್ರೀಯ ಮಟ್ಟದ ಟಿ20 ದ್ವಿಪಕ್ಷೀಯ ಸರಣಿಗಳನ್ನ ತಗ್ಗಿಸಿ, ಫ್ರಾಂಚೈಸಿ ಕ್ರಿಕೆಟ್‌ಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ ಎರಡೂವರೆ ತಿಂಗಳು ನಡೆಸಲು ಐಸಿಸಿ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಟಿ20 ಪಂದ್ಯಗಳ ಸಂಖ್ಯೆಯು ಕೂಡ ಹೆಚ್ಚಾಗಲಿದೆ.
ವರದಿ ಪ್ರಕಾರ 2023 ರಿಂದ 2027ರ ಸೀಸನ್‌ವರೆಗೆ ಪಂದ್ಯಗಳ ಹೆಚ್ಚಿಸಲಾಗುತ್ತಿದ್ದು, ಮುಂದಿನ ಎರಡು ಸೀಸನ್‌ಗಳು 74 ಪಂದ್ಯಗಳನ್ನ ಕಾಣಬಹುದು, ನಂತರ ಎರಡು ಸೀಸನ್‌ಗಳಲ್ಲಿ 84 ಪಂದ್ಯಗಳು, ಐದು ಆರನೇ ಸೀಸನ್‌ನಲ್ಲಿ(2026, 2027) 94 ಪಂದ್ಯಗಳನ್ನ ಆಡಿಸಲು ಬಿಸಿಸಿಐ ಯೋಜನೆ ನಡೆಸುತ್ತಿದೆ.

ಮೂರು ಫಾರ್ಮೆಟ್‌ನಿಂದ ಆಟಗಾರರ ಮೇಲೆ ಹೆಚ್ಚಿದ ಒತ್ತಡ
ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ಖ್ಯಾತ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೂರು ಫಾರ್ಮೆಟ್‌ನಿಂದ ಒತ್ತಡ ಹೆಚ್ಚಿರುವುದಾಗಿ ಕಾರಣವನ್ನ ನೀಡಿ ಏಕದಿನ ಫಾರ್ಮೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಇದೇ ರೀತಿಯಲ್ಲಿ ಆಟಗಾರರ ಸಂಖ್ಯೆಯು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎಂದು ಅನೇಕ ಕ್ರಿಕೆಟ್ ಪಂಡಿತರು ಅಂದಾಜಿಸಿದ್ದಾರೆ.
ಹೀಗಾಗಿ ಅತಿ ಹೆಚ್ಚು ದ್ವಿಪಕ್ಷೀಯ ಸರಣಿಗಳನ್ನು ಗಮನಿಸಿದಾಗ ನಿಜಕ್ಕೂ ಆತಂಕವಾಗುತ್ತದೆ ಎಂದು ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸಿಸ್ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿದ ದಕ್ಷಿಣ ಆಫ್ರಿಕಾ
31ರ ಹರೆಯದ ಬೆನ್ ಸ್ಟೋಕ್ಸ್ ಅವರು ಇನ್ನು ಮುಂದೆ ಮೂರು ಫಾರ್ಮೆಟ್ ಆಡಲು ಸಾಧ್ಯವಿಲ್ಲ ಎಂದು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿಯುವ ನಿರ್ಧಾರ ಮಾಡಿತು. ಹೊಸದಾಗಿ ಶುರುವಾಗುತ್ತಿರುವ ದೇಶೀಯ ಟಿ20 ಲೀಗ್‌ನಲ್ಲಿ ತಮ್ಮ ಆಟಗಾರರು ಲಭ್ಯವಾಗುವುದನ್ನ ಖಚಿತಪಡಿಸಿಕೊಳ್ಳುವ ಸಲುವಾಗಿ ಆಸಿಸ್ ವಿರುದ್ಧ ಸರಣಿಗೆ ಗುಡ್‌ಬೈ ಹೇಳಿತು.
ಹಾರ್ದಿಕ್ ಪಾಂಡ್ಯ ಗಾಯದಿಂದ ಮರಳಿದ್ದೇಗೆ?; 2019ರ ವಿಶ್ವಕಪ್ ನೆನಪಿಸಿದ ಬಸು ಶಂಕರ್

ಟಿ20 ಸರಣಿ ತಗ್ಗಲಿ, ಫ್ರಾಂಚೈಸಿ ಕ್ರಿಕೆಟ್ ಹೆಚ್ಚಾಗಲಿ : ರವಿಶಾಸ್ತ್ರಿ
"ನಾನು ದ್ವಿಪಕ್ಷೀಯ ಸರಣಿಗಳ ಸಂಖ್ಯೆಯ ಬಗ್ಗೆ ಸ್ವಲ್ಪ ಜಾಗರೂಕರಾಗಿರುತ್ತೇನೆ, ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ. ಭಾರತ, ವೆಸ್ಟ್ ಇಂಡೀಸ್ ಅಥವಾ ಪಾಕಿಸ್ತಾನದ ಯಾವುದೇ ದೇಶದಲ್ಲಿದ್ದರೂ ಅದನ್ನು ಪ್ರೋತ್ಸಾಹಿಸಬಹುದಾದ ಸಾಕಷ್ಟು ಫ್ರಾಂಚೈಸ್ ಕ್ರಿಕೆಟ್ ಇದೆ, "ಎಂದು ರವಿಶಾಸ್ತ್ರಿ ಟೆಲಿಗ್ರಾಫ್ಸ್ ಸ್ಪೋರ್ಟ್ಸ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.
"ಕಡಿಮೆ ದ್ವಿಪಕ್ಷೀಯ ಪಂದ್ಯಗಳನ್ನ ಆಡಿಸಿದ್ರೆ, ನಂತರ ವಿಶ್ವಕಪ್‌ನಲ್ಲಿ ಒಟ್ಟಿಗೆ ಆಡಲುಬಹುದು. ಹಾಗಾಗಿ ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ಒತ್ತು ನೀಡುವುದು ಅತಿಮುಖ್ಯವಾಗುತ್ತದೆ. ಜನರು ಈ ರೀತಿಯಾದ ಫ್ರಾಂಚೈಸಿ ಕ್ರಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ತಾನಾಡುತ್ತಿದ್ದ ಪಂದ್ಯದ ವೇಳೆ ಡಿಕೆ ಹೆಸರು ಕೂಗಿದ ಪ್ರೇಕ್ಷಕರು; ಮೈದಾನದಲ್ಲೇ ಕೈಮುಗಿದ ಮುರಳಿ ವಿಜಯ್!

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಹಂತಗಳ ಅವಶ್ಯಕತೆ ಇದೆ: ನಾಸಿರ್ ಹುಸೇನ್
ಟೆಸ್ಟ್ ಕ್ರಿಕೆಟ್‌ನ ಉಳಿವಿಗಾಗಿ ಎರಡು ಹಂತಗಳ ಅಗತ್ಯವಿದೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ. ಇದರ ಜೊತೆಗೆ ಅತ್ಯಂತ ಒತ್ತಡದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರಿಕೆಟ್ ವೇಳಾಪಟ್ಟಿ ಕುರಿತಾಗಿಯೂ ಟೀಕಿಸಿದ್ದಾರೆ.
ನಾಸಿರ್ ಹುಸೇನ್ ಮಾತನ್ನು ರವಿಶಾಸ್ತ್ರಿ ಕೂಡ ಬೆಂಬಲಿಸಿದ್ದು, ದೀರ್ಘಸ್ವರೂಪದ ಆಟದ ಉಳಿವಿಗೆ ಎರಡು ಹಂತಗಳ ಅಗತ್ಯವಿದೆ ಎಂದಿದ್ದಾರೆ. ಇಲ್ಲದಿದ್ರೆ ಮುಂದಿನ 10 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಇಲ್ಲವಾಗುತ್ತದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications