ಲಂಕಾ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಗೆ ಸಿದ್ಧತೆ ನಡೆಸುತ್ತಿದ್ದು ಈಗಾಗಲೇ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಹರಾಜು ನಡೆಸಿದ್ದು ಎಲ್ಲಾ ತಂಡಗಳು ಕೂಡ ತಂಡವನ್ನು ಭರ್ತಿಗೊಳಿಸಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಈ ಬಾರಿಯ ಎಲ್‌ಪಿಎಲ್ ಟೂರ್ನಿಯ ಹರಾಜಿನಲ್ಲಿ ಹೆಸರು ನೊಂದಾಯಿಯಿಸಿದ್ದು ಇದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಹರಾಜಿನ ಪಟ್ಟಿಯಲ್ಲಿ ಸುರೇಶ್ ರೈನಾ ಹೆಸರು ಕಾಣಿಸಿದ್ದರೂ ರೈನಾ ಅವರನ್ನು ಹರಾಜಿನ ಸಂದರ್ಭದಲ್ಲಿ ಹೆಸರನ್ನು ಕರೆಯದಿರುವುದು ಅಚ್ಚರಿ ಮೂಡಿಸಿದೆ.
ಸುರೇಶ್ ರೈನಾ $5000 ಮೂಲ ಬೆಲೆ ನಿಗದಿಪಡಿಸಿ ಹೆಸರು ನೊಂದಾಯಿಸಿದ್ದರು. ಆದರೆ ಹರಾಜಿನಲ್ಲಿ ಅವರ ಹೆಸರನ್ನು ಪರಿಗಣಿಸಲಿಲ್ಲ. ಇದಕ್ಕೆ ಕಾರಣವೇನೆಂಬುದು ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. ಕೊನೆಯ ಕ್ಷಣದಲ್ಲಿ ಸುರೇಶ್ ರೈನಾ ತಮ್ಮ ಹೆಸರನ್ನು ವಾಪಾಸ್ ಪಡೆದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಎಲ್‌ಪಿಎಲ್‌ನಲ್ಲಿ ಐದು ತಂಡಗಳು ಭಾಗವಹಿಸುತ್ತಿದ್ದು ಬಿ-ಲವ್ ಕ್ಯಾಂಡಿ, ಕಾಫ್ನಾ ಕಿಂಗ್ಸ್, ದಾಂಬುಲ ಔರಾ, ಕೊಲೊಂಬೋ ಸ್ಟ್ರೈಕರ್ಸ್ ಮತ್ತು ಗಾಲೆ ಟೈಟನ್ಸ್ ಈ ಐದು ಫ್ರಾಂಚೈಸಿಗಳಾಗಿದೆ. ಹರಾಜಿನ ಬಳಿಕ ಈ ಐದು ತಂಡಗಳು ಹೇಗಿದೆ? ಇಲ್ಲಿದೆ ಎಲ್ಲಾ ಫ್ರಾಂಚೈಸಿಗಳ ಸಂಪೂರ್ಣ ಮಾಹಿತಿ
ಬಿ-ಲವ್ ಕ್ಯಾಂಡಿ: ಮುಜೀಬ್ ಉರ್ ರೆಹಮಾನ್, ವನಿಂದು ಹಸರಂಗ, ಫಖರ್ ಜಮಾನ್, ಏಂಜೆಲೊ ಮ್ಯಾಥ್ಯೂಸ್, ಇಸುರು ಉದಾನ, ದಿನೇಶ್ ಚಾಂಡಿಮಾಲ್, ಮೊಹಮ್ಮದ್ ಹಸ್ನೇನ್, ದುಷ್ಮಂತ ಚಮೀರ, ಸಹನ್ ಅರಚ್ಚಿಗೆ, ಅಶೇನ್ ಬಂಡಾರ, ಮೊಹಮ್ಮದ್ ಹ್ಯಾರಿಸ್, ನವೋದ್ ಪರಣವಿತಾನ, ಆಸಿಫ್ ಅಲಿ, ಕಮಿಂದು ಮೆಂಡಿಸ್, ನುವಾನ್ ಪ್ರದೀಪ್, ಚತುರಂಗ ಡಿ ಸಿಲ್ವಾ, ಲಹಿರು ಮಧುಶಂಕ, ಅಮೀರ್ ಜಮಾಲ್, ಮಲ್ಶಾ ತರುಪತಿ, ತನುಕಾ ದಬಾರೆ, ಲಸಿತ್ ಅಬೆರತ್ನೆ, ಅವಿಷ್ಕಾ ತರಿಂದು
ಜಾಫ್ನಾ ಕಿಂಗ್ಸ್: ಡೇವಿಡ್ ಮಿಲ್ಲರ್, ತಿಸಾರ ಪೆರೆರಾ, ರಹಮಾನುಲ್ಲಾ ಗುರ್ಬಾಜ್, ಮಹೇಶ್ ತೀಕ್ಷಣ, ಚರಿತ್ ಅಸಲಂಕಾ, ದುನಿತ್ ವೆಲ್ಲಲಾಗೆ, ಶೋಯೆಬ್ ಮಲಿಕ್, ಪಾತುಮ್ ಕುಮಾರ, ವಿಜಯಕಾಂತ್ ವ್ಯಾಸಕಾಂತ್, ತೀಸನ್ ವಿಥುಶನ್, ಅಸಂಕ ಮನೋಜ್, ನಿಶಾನ್ ಮದುಷ್ಕ, ಅಸಿತ ಫೆರ್ನಾಂಡೋ, ಹರ್ಡಸ್ ವಿಲ್ಜೋನ್, ನುವಾನ್ ತುಷಾರ, ದಿಲ್ಶನ್ ಮಧುಶಂಕ, ಜಮಾನ್ ಖಾನ್, ಅಶಾನ್ ರಾಂಡಿಕಾ, ರತ್ನರಾಜ ತೇನುರಥನ್, ಕ್ರಿಸ್ ಲಿನ್, ಅಸೆಲಾ ಗುಣರತ್ನೆ
ದಂಬುಲ್ಲಾ ಔರಾ: ಮ್ಯಾಥ್ಯೂ ವೇಡ್, ಕುಸಾಲ್ ಮೆಂಡಿಸ್, ಲುಂಗಿ ಎನ್ಡಿಡಿ, ಅವಿಷ್ಕಾ ಫೆರ್ನಾಂಡೋ, ಧನಂಜಯ ಡಿ ಸಿಲ್ವಾ, ಕುಸಲ್ ಜನಿತ್ ಪೆರೆರಾ, ಹೇಡನ್ ಕೆರ್, ಸದೀರ ಸಮರವಿಕ್ರಮ, ಬಿನೂರ ಫೆರ್ನಾಂಡೋ, ನೂರ್ ಅಹ್ಮದ್, ಸಚಿತ ಜಯತಿಲಕ, ಜನಿತ್ ಲಿಯಾನಗೆ, ದುಶನ್ ಹೇಮಂತ, ಪ್ರಮೋದ ಮದುಶನ್, ಶಾನವಾಜ್ ದಹಾನಿ, ಲಕ್ಷಣ ಎದಿರಿಸಿಂಗ್, ಜೆಹಾನ್ ಡೇನಿಯಲ್, ವನುಜಾ ಸಹನ್, ಕವಿದು ಪತಿರತ್ನ, ರವಿಂದು ಫೆರ್ನಾಂಡೋ, ಅಲೆಕ್ಸ್ ರಾಸ್, ಟ್ರೆವೀನ್ ಮ್ಯಾಥ್ಯೂ, ಮನೇಲ್ಕರ್ ಡಿ ಸಿಲ್ವಾ, ಪ್ರವೀಣ್ ಜಯವಿಕ್ರಮ
ಕೊಲಂಬೊ ಸ್ಟ್ರೈಕರ್ಸ್: ಬಾಬರ್ ಅಜಮ್, ಮಥೀಶ ಪತಿರಾನ, ನಸೀಮ್ ಶಾ, ಚಮಿಕಾ ಕರುಣರತ್ನೆ, ಪಾತುಮ್ ನಿಸ್ಸಾಂಕ, ನಿರೋಶನ್ ಡಿಕ್ವೆಲ್ಲಾ, ವಹಾಬ್ ರಿಯಾಜ್, ಲಕ್ಷಣ್ ಸಂಡಕನ್, ನಿಪುನ್ ದನಂಜಯ, ಮೊವಿನ್ ಸುಬಾಸಿಂಗ್, ಲಹಿರು ಉದಾರ, ಎಶಾನ್ ಮಾಲಿಂಗ, ಶಶಿಕಾ ದುಲ್ಶನ್, ನುವಾನಿಡು ಫೆರ್ನಾಂಡೋ, ಇಫ್ತಿಕರ್ ಅಹ್ಮದ್, ಲೋರ್ಕನ್ ಟಕರ್, ಜೆಫ್ರಿ ವಾಂಡರ್ಸೆ, ಏಂಜೆಲೊ ಪೆರೇರಾ, ಧನಂಜಯ ಲಕ್ಷಣ್, ಕನಿಷ್ಕಾ ಅಂಜುಲಾ, ರಮೇಶ್ ಮೆಂಡಿಸ್, ಮೊಹಮ್ಮದ್ ನವಾಜ್, ಅಹಾನ್ ವಿಕ್ರಮಸಿಂಘೆ, ಯಶೋದಾ ಲಂಕಾ
ಗಾಲೆ ಟೈಟಾನ್ಸ್: ಶಕೀಬ್ ಅಲ್ ಹಸನ್, ದಸುನ್ ಶನಕ, ತಬ್ರೈಜ್ ಶಮ್ಸಿ, ಭಾನುಕಾ ರಾಜಪಕ್ಸೆ, ಸೀಕ್ಕುಗೆ ಪ್ರಸನ್ನ, ಲಹಿರು ಕುಮಾರ, ಲಸಿತ್ ಕ್ರೂಸ್ಪುಲ್ಲೆ, ಸೋಹನ್ ಡಿ ಲಿವೇರಾ, ಅಶಾನ್ ಪ್ರಿಯಾಂಜನ್, ಬೆನ್ ಕಟಿಂಗ್, ಮೊಹಮ್ಮದ್ ಮಿಥುನ್, ಮಿನೋದ್ ಭಾನುಕಾ, ಪಸಿಂದು ಸೂರಿಯಬಂಡಾರ, ಶೆವೊನ್ ಡೇನಿಯಲ್, ಮೊಹಮ್ಮದ್ ಶಿರಾಜ್, ಲಾಹಿರು ಸಮರಕೋನ್, ಕಸುನ್ ರಜಿತಾ, ಅಕಿಲಾ ದನಂಜಯ, ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಸೋನಾಲ್ ದಿನುಶಾ, ಅವಿಷ್ಕಾ ಪೆರೆರಾ, ಅನುಕ್ ಫೆರ್ನಾಂಡೋ, ವಿಶ್ವ ಫೆರ್ನಾಂಡೋ