Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2023: ಮಿನಿ ಹರಾಜಿನ ನಂತರ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ

LSG Team 2023 Players List: Full List of Lucknow Super Giants Players With Price in Kannada

2022ರಲ್ಲಿ ತಮ್ಮ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವು ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಐಪಿಎಲ್ 2023ರ ಹರಾಜಿನಲ್ಲಿ 10 ಹೊಸ ಆಟಗಾರರನ್ನು ಖರೀದಿಸಿದೆ.

ವೆಸ್ಟ್ ಇಂಡೀಸ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ದೊಡ್ಡ ಮೊತ್ತ ನೀಡಿ ಖರೀದಿಸಲಾಗಿದೆ. ಅವರ ಸಾಧಾರಣ ಐಪಿಎಲ್ ದಾಖಲೆಯ ಹೊರತಾಗಿಯೂ ಎಲ್‌ಎಸ್‌ಜಿ ತಂಡ ಬರೋಬ್ಬರಿ 16 ಕೋಟಿ ರೂಪಾಯಿಗೆ ತೆಕ್ಕೆಗೆ ತೆಗೆದುಕೊಂಡಿದೆ.

ಕೆಎಲ್ ರಾಹುಲ್ ನೇತೃತ್ವದ ತಂಡದ ಫ್ರಾಂಚೈಸಿಯು ನಿಕೋಲಸ್ ಪೂರನ್ ಅಷ್ಟೇ ಅಲ್ಲದೆ, ಜಯದೇವ್ ಉನಾದ್ಕಟ್, ಯಶ್ ಠಾಕೂರ್. ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್, ಆಸ್ಟ್ರೇಲಿಯಾದ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಭಾರತದ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಅಫ್ಘಾನ್ ವೇಗಿ ನವೀನ್-ಉಲ್-ಹಕ್ ಇತರ ಆಟಗಾರರಾಗಿದ್ದಾರೆ.

23.35 ಕೋಟಿ ರೂ. ಮೌಲ್ಯದ ಪರ್ಸ್ ಉಳಿದಿತ್ತು

23.35 ಕೋಟಿ ರೂ. ಮೌಲ್ಯದ ಪರ್ಸ್ ಉಳಿದಿತ್ತು

ಮಿನಿ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಳಿ 23.35 ಕೋಟಿ ರೂ. ಮೌಲ್ಯದ ಪರ್ಸ್ ಉಳಿದಿತ್ತು. ಅವರು ಭರ್ತಿ ಮಾಡಲು ಒಟ್ಟು 10 ಸ್ಲಾಟ್‌ಗಳನ್ನು ಹೊಂದಿದ್ದರು, ನಾಲ್ಕು ಸಾಗರೋತ್ತರ ಸ್ಲಾಟ್‌ಗಳು ಲಭ್ಯವಿದ್ದವು.

ಐಪಿಎಲ್ 2023ರ ಮಿನಿ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಟೇನ್ ಪಟ್ಟಿಯನ್ನು ಪ್ರಕಟಿಸಿದಾಗ ಏಳು ಆಟಗಾರರನ್ನು ಕೈಬಿಟ್ಟಿದ್ದರು. ಬಿಡುಗಡೆಯಾದ ಆಟಗಾರರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮತ್ತು ಅನುಭವಿ ಭಾರತೀಯ ಬ್ಯಾಟರ್ ಮನೀಶ್ ಪಾಂಡೆ, ದುಷ್ಮಂತ ಚಮೀರಾ, ಎವಿನ್ ಲೂಯಿಸ್, ಆಂಡ್ರ್ಯೂ ಟೈ, ಶಹಬಾಜ್ ನದೀಮ್ ಮತ್ತು ಅಂಕಿತ್ ರಜ್‌ಪೂತ್ ಒಳಗೊಂಡಿದ್ದರು.

ಬೆಲೆಯೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ಪಟ್ಟಿ

ಬೆಲೆಯೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ಪಟ್ಟಿ

ಐಪಿಎಲ್ 2023 ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತನ್ನ ಎಲ್ಲಾ ಸ್ಲಾಟ್‌ಗಳನ್ನು ಭರ್ತಿ ಮಾಡುವುದರೊಂದಿಗೆ, ತಂಡದಲ್ಲಿರುವ ಆಟಗಾರರ ಆಯಾ ಬೆಲೆಗಳೊಂದಿಗೆ ನವೀಕರಿಸಿದ ಪಟ್ಟಿ ಇಲ್ಲಿದೆ.

ನಿಕೋಲಸ್ ಪೂರನ್ - 16 ಕೋಟಿ ರೂ.

ಜಯದೇವ್ ಉನದ್ಕತ್ - 50 ಲಕ್ಷ ರೂ.

ಯಶ್ ಠಾಕೂರ್ - 45 ಲಕ್ಷ ರೂ.

ರೊಮಾರಿಯೊ ಶೆಫರ್ಡ್ - 50 ಲಕ್ಷ ರೂ.

ಡೇನಿಯಲ್ ಸ್ಯಾಮ್ಸ್ - 75 ಲಕ್ಷ ರೂ.

ಅಮಿತ್ ಮಿಶ್ರಾ - 50 ಲಕ್ಷ ರೂ.

ಪ್ರೇರಕ್ ಮಂಕಡ್ - 20 ಲಕ್ಷ ರೂ.

ಸ್ವಪ್ನಿಲ್ ಸಿಂಗ್ - 20 ಲಕ್ಷ ರೂ.

ನವೀನ್-ಉಲ್-ಹಕ್ - 50 ಲಕ್ಷ ರೂ.

ಯುದ್ಧವೀರ್ ಸಿಂಗ್ ಚರಕ್ - 20 ಲಕ್ಷ ರೂ.

ಕೆಎಲ್ ರಾಹುಲ್ - 17 ಕೋಟಿ ರೂ.

ಆಯುಷ್ ಬದೋನಿ - 20 ಲಕ್ಷ ರೂ.

ಕರಣ್ ಶರ್ಮಾ - 20 ಲಕ್ಷ ರೂ.

ಮನನ್ ವೋಹ್ರಾ - 20 ಲಕ್ಷ ರೂ.

ಕ್ವಿಂಟನ್ ಡಿ ಕಾಕ್ - 6.75 ಕೋಟಿ ರೂ.

ಮಾರ್ಕಸ್ ಸ್ಟೊಯಿನಿಸ್ - 9.2 ಕೋಟಿ ರೂ.

ಕೃಷ್ಣಪ್ಪ ಗೌತಮ್ - 90 ಲಕ್ಷ ರೂ.

ದೀಪಕ್ ಹೂಡಾ - 5.75 ಕೋಟಿ ರೂ.

ಕೈಲ್ ಮೇಯರ್ಸ್ - 50 ಲಕ್ಷ ರೂ.

ಕೃನಾಲ್ ಪಾಂಡ್ಯ - 8.25 ಕೋಟಿ ರೂ.

ಅವೇಶ್ ಖಾನ್ - 10 ಕೋಟಿ ರೂ.

ಮೊಹ್ಸಿನ್ ಖಾನ್ - 20 ಲಕ್ಷ ರೂ.

ಮಾರ್ಕ್ ವುಡ್ - 7.5 ಕೋಟಿ ರೂ.

ಮಯಾಂಕ್ ಯಾದವ್ - 20 ಲಕ್ಷ ರೂ.

ರವಿ ಬಿಷ್ಣೋಯ್- 4 ಕೋಟಿ ರೂ.

ಐಪಿಎಲ್ 2023ರ ಟೂರ್ನಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ

ಐಪಿಎಲ್ 2023ರ ಟೂರ್ನಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ

ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ನಿಕೋಲಸ್ ಪೂರನ್, ಜಯದೇವ್ ಉನಾದ್ಕತ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯುದ್ವೀರ್ ಸಿಂಗ್ ಚರಕ್.

Story first published: Friday, December 23, 2022, 23:12 [IST]
Other articles published on Dec 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+