Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs CSK: ಚೆನ್ನೈಗೆ ಕಾಡಲಿದೆ ಓವರ್‌ಟನ್‌ ಅನುಪಸ್ಥಿತಿ; ಗೆಲುವಿನ ಒತ್ತಡದಲ್ಲಿ ಕಿಂಗ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 19ನೇ ಆವೃತ್ತಿಯ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡಗಳು ಕಾದಾಟ ನಡೆಸಲಿವೆ. ಸಿಎಸ್‌ಕೆಗೆ ಈ ಪಂದ್ಯ ಮಹತ್ವದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಚೆನ್ನೈ ತಂಡ ಪ್ಲೇ ಆಫ್‌ ಪ್ರವೇಶಿಸುವ ಕನಸು ಕಾಣುತ್ತಿದೆ. ಆದರೆ ಚೆನ್ನೈ ತಂಡಕ್ಕೆ ಗಾಯ ಬಹುವಾಗಿ ಕಾಡುತ್ತಿದೆ.

ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 7 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎರಡೂ ತಂಡಗಳು ತಲಾ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಲೀಗ್‌ ಹಂತದಲ್ಲಿ ಈ ಮೊದಲು ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವನ್ನು ಮಣಿಸಿದ ಚೆನ್ನೈ ಅಬ್ಬರಿಸಿತ್ತು. ಲಕ್ನೋ ತವರು ನೆಲದಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ.

LSG vs CSK

ಲಕ್ನೋ ತಂಡದಲ್ಲೂ ಸ್ಟಾರ್ ಆಟಗಾರರ ದಂಡೆ ಇದೆ. ಕಳೆದ ಪಂದ್ಯದಲ್ಲಿ ಎಲ್‌ಎಸ್‌ಜಿ ಪರ ಇನಿಂಗ್ಸ್‌ ಆರಂಭಿಸಿದ್ದ ಜೋಶ್‌ ಇಂಗ್ಲಿಸ್ ಅಬ್ಬರಿಸಿದ್ದರು. ಶುಕ್ರವಾರ ನಡೆಯುವ ಪಂದ್ಯದಲ್ಲೂ ಇವರು ಅಬ್ಬರಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಇವರೊಂದಿಗೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಮಿಚೆಲ್‌ ಮಾರ್ಷ್ ಹೊರಲಿದ್ದಾರೆ. ಲೀಗ್‌ ಉದ್ದಕ್ಕೂ ಸ್ಥಿರ ಬ್ಯಾಟಿಂಗ್ ನಡೆಸಿರುವ ಮಾರ್ಷ್ ಮತ್ತೊಮ್ಮೆ ಬಿಗ್ ಇನಿಂಗ್ಸ್ ಕಟ್ಟುವ ಕನಸಿನಲ್ಲಿದ್ದಾರೆ.

ಪಂತ್‌ ಮೇಲೆ ಒತ್ತಡ

ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್, ನಾಯಕ ರಿಷಭ್ ಪಂತ್‌, ಏಡನ್ ಮಾರ್ಕ್ರಾಮ್‌, ಸಮಯೋಚಿತ ಬ್ಯಾಟಿಂಗ್ ನಡೆಸಬೇಕಿದೆ. ಕಳೆದ ಬಾರಿ ಚೆನ್ನೈ ವಿರುದ್ಧದ ಪಂದ್ಯವನ್ನು ಆಡಿದಾಗ ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಸಮದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಎಲ್‌ಎಸ್‌ಜಿ ತಂಡದಲ್ಲಿ ಸ್ಟಾರ್ ವೇಗದ ಬೌಲರ್‌ಗಳ ದಂಡೇ ಇದೆ. ಈ ವಿಭಾಗವನ್ನು ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ ಮುನ್ನಡೆಸಲಿದ್ದಾರೆ. ಇವರಿಗೆ ಪ್ರಿನ್ಸ್ ಯಾದವ್, ಆವೇಶ್ ಖಾನ್, ಬಿಗುವಿನ ದಾಳಿ ನಡೆಸಿ ತಂಡದ ಜಯದಲ್ಲಿ ಮಿಂಚಬೇಕಿದೆ. ಇನ್ನು ದಿಗ್ವೇಶ್ ರಾಠಿ ಸ್ವಿನ್ ಮೋಡಿ ನಡೆಸಿದರೆ, 2 ಅಂಕದ ಕನಸು ನನಸಾಗುತ್ತದೆ.

ಉರ್ವಿಲ್ ಆಕರ್ಷಣೆ

ಚೆನ್ನೈ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಸ್ಟಾರ್ ಆಲ್‌ರೌಂಡರ್‌ ಜೇಮಿ ಓವರ್‌ಟನ್‌ ಗಾಯಕ್ಕೆ ತುತ್ತಾಗಿದ್ದು ತವರಿನತ್ತ ಮುಖಮಾಡಿದ್ದಾರೆ. ಅಲ್ಲದೆ ಮಹತ್ವದ ಪಂದ್ಯಗಳಿಗೂ ಮುನ್ನ ಓವರ್‌ಟನ್ ಹೊರನಡೆದಿದ್ದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಆರಂಭಿಕ ಸಂಜು ಸ್ಯಾಮ್ಸನ್‌, ನಾಯಕ ರುತುರಾಜ್ ಗಾಯಕ್ವಾಡ್ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಉರ್ವಿಲ್ ಪಟೇಲ್‌ ಕಳೆದ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಅಬ್ಬರಿಸಿದ್ದರು. ಇವರು ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್‌, ಶಿವಂ ದುಬೆ, ಕಾರ್ತಿಕ್ ಶರ್ಮಾ ಬಿಗ್ ಇನಿಂಗ್ಸ್‌ ಕಟ್ಟಿ ತಂಡಕ್ಕೆ ನೆರವಾಗಬೇಕಿದೆ.

ಚೆನ್ನೈ ತಂಡದ ಪರ ಮುಕೇಶ್‌ ಚೌಧರಿ, ಅನ್ಶುಲ್ ಕಾಂಬೋಜ್ ವೇಗದ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಅಕೀಲ್ ಹುಸೇನ್‌, ನೂರ್ ಅಹ್ಮದ್ ಕಾಣಿಸಿಕೊಳ್ಳಲಿದ್ದಾರೆ. ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರೆ ಪ್ಲೇ ಆಫ್‌ ಕನಸು ನನಸಾಗುತ್ತದೆ.

Story first published: Thursday, May 14, 2026, 18:15 [IST]
Other articles published on May 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+