For Quick Alerts
ALLOW NOTIFICATIONS  
For Daily Alerts
 

Lucknow Super Giants Jersey: ಕೊನೆಗೂ ಜೆರ್ಸಿ ಬಿಡುಗಡೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್

Lucknow Super Giants unveil their jersey ahead of IPL 2022

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಇದೇ ವಾರಾಂತ್ಯದಲ್ಲಿ ಟೂರ್ನಿ ಆರಂಭಗೊಳ್ಳಲಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಮಾರ್ಚ್ 26ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ನೂತನ ತಂಡಗಳಾಗಿ ಸೇರ್ಪಡೆಗೊಳ್ಳುತ್ತಿದ್ದು, ಟೂರ್ನಿ ಹೊಸ ತಂಡಗಳು, ಹೊಸ ನಾಯಕರು ಹಾಗೂ ಹೊಸ ನಿಯಮಗಳಿಂದ ಬಹಳ ವಿಭಿನ್ನತೆಯಿಂದ ಕೂಡಿರಲಿದೆ.

ಇನ್ನು ಈ ಬಾರಿ ಹೊಸದಾಗಿ ಸೇರ್ಪಡೆಗೊಂಡಿರುವ ತಂಡಗಳ ಪೈಕಿ ಗುಜರಾತ್ ಟೈಟನ್ಸ್ ಈಗಾಗಲೇ ತನ್ನ ಜೆರ್ಸಿಯನ್ನು ಬಿಡುಗಡೆಗೊಳಿಸಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡ ಇಂದು ( ಮಾರ್ಚ್ 22 ) ಜೆರ್ಸಿಯನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಅನಾವರಣಗೊಳಿಸಿದೆ. ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಬಿಡುಗಡೆಗೊಳಿಸಿರುವ ಈ ಜೆರ್ಸಿ ಈ ಹಿಂದೆಯೇ ಲೀಕ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಹಾಗೂ ವಿನ್ಯಾಸದ ಕಾರಣದಿಂದಾಗಿ ಸಾಕಷ್ಟು ಟೀಕೆ ಮತ್ತು ಟ್ರೋಲ್‌ಗೂ ಕೂಡ ಒಳಗಾಗಿತ್ತು. ಹೀಗೆ ಲಕ್ನೋ ಸೂಪರ್ ಜೈಂಟ್ಸ್ ಬಿಡುಗಡೆಗೊಳಿಸಿರುವ ಜೆರ್ಸಿಯ ಪ್ರಮುಖ ಬಣ್ಣ ವೈಡೂರ್ಯ ನೀಲಿಯಿಂದ ಕೂಡಿದ್ದು, ಎರಡೂ ಬದಿಗಳಲ್ಲಿ ಕೇಸರಿ ಹಾಗೂ ಹಸಿರು ಬಣ್ಣಗಳ ಗೆರೆಗಳಿವೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಪ್ರಾಯೋಜಕರಾದ ಮೈ ಇಲೆವೆನ್ ಸರ್ಕಲ್ ಲೋಗೋವನ್ನು ಜೆರ್ಸಿಯ ಮಧ್ಯ ಭಾಗದಲ್ಲಿ ಬಳಸಲಾಗಿದ್ದು, ಇತರೆ ಪ್ರಾಯೋಜಕರಾದ ಜಿಯೋ ಹಾಗೂ ಗ್ರೀನ್‌ಪ್ಲೇ ಲೋಗೋಗಳೂ ಸಹ ಜೆರ್ಸಿ ಮೇಲಿವೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ರಾಜ್‌ಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸ್ ಖಾನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಕರಣ್ ಶರ್ಮಾ, ಎವಿನ್ ಲೆವಿಸ್, ಮಯಾಂಕ್ ಯಾದವ್, ಬಿ ಸಾಯಿ ಸುದರ್ಶನ್

ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಗಳ ಪಟ್ಟಿ:

28 ಮಾರ್ಚ್ 2022 - 7.30 pm - ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್

31 ಮಾರ್ಚ್ 2022 - 7.30 pm - ಲಕ್ನೋ ಸೂಪರ್‌ ಜೈಂಟ್ಸ್ vs ಚೆನ್ನೈ ಸೂಪರ್‌ ಕಿಂಗ್ಸ್

4 ಏಪ್ರಿಲ್ 2022 - 7.30 pm - ಸನ್ ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್‌ ಜೈಂಟ್ಸ್

7 ಏಪ್ರಿಲ್ 2022 - 7.30 pm -ಲಕ್ನೋ ಸೂಪರ್‌ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್

10 ಏಪ್ರಿಲ್ 2022 - 7.30 pm- ರಾಜಸ್ಥಾನ ರಾಯಲ್ಸ್ vs ಲಕ್ನೋ ಸೂಪರ್‌ ಜೈಂಟ್ಸ್

16 ಏಪ್ರಿಲ್ 2022 - 3.30 pm - ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್‌ ಜೈಂಟ್ಸ್

19 ಏಪ್ರಿಲ್ 2022 - 7.30 pm- ಲಕ್ನೋ ಸೂಪರ್‌ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

24 ಏಪ್ರಿಲ್ 2022 - 7.30 pm- ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್‌ ಜೈಂಟ್ಸ್

29 ಏಪ್ರಿಲ್ 2022- 7.30pm- ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್‌ ಜೈಂಟ್ಸ್

1 ಮೇ 2022- ಮಧ್ಯಾಹ್ನ 3.30- ದೆಹಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್‌ ಜೈಂಟ್ಸ್

7 ಮೇ 2022- 7.30 pm - ಲಕ್ನೋ ಸೂಪರ್‌ ಜೈಂಟ್ಸ್ vs ಕೋಲ್ಕತಾ ನೈಟ್ ರೈಡರ್ಸ್

10 ಮೇ 2022- 7.30- ಲಕ್ನೋ ಸೂಪರ್‌ ಜೈಂಟ್ಸ್ vs ಗುಜರಾತ್ ಟೈಟಾನ್ಸ್

15 ಮೇ 2022- 7.30 pm- ಲಕ್ನೋ ಸೂಪರ್‌ ಜೈಂಟ್ಸ್ vs ರಾಜಸ್ಥಾನ ರಾಯಲ್ಸ್

18 ಮೇ 2022- 7.30 pm- ಕೋಲ್ಕತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್‌ ಜೈಂಟ್ಸ್

Story first published: Wednesday, March 23, 2022, 11:05 [IST]
Other articles published on Mar 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+