Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಸ್‌ಕೆ ಪಂದ್ಯಕ್ಕೆ Lungi Ngidi ಲಭ್ಯ: ಕೋಚ್ ಮುನಫ್ ಪಟೇಲ್ ದೊಡ್ಡ ಹೇಳಿಕೆ

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಬಂದಿದೆ. ಐಪಿಎಲ್‌ ಲೀಗ್‌ ಹಂತದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಹೋಗಿ ತಲೆಗೆ ಗಾಯ ಮಾಡಿಕೊಂಡಿದ್ದ ವೇಗದ ಬೌಲರ್‌ ಲುಂಗಿ ಎನ್‌ಗಿಡಿ ಫುಲ್ ಫಿಟ್ ಆಗಿದ್ದಾರೆ. ಇವರು ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ವಿರುದ್ಧ ಮಂಗಳವಾರ ನಡೆಯಲಿರುವ ಪಂದ್ಯಕ್ಕೆ ಲಭ್ಯರಾಗಿದ್ದಾರೆ ಎಂದು ತಿಳಿದು ಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಮುನಫ್ ಪಟೇಲ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ವೇಗದ ಬೌಲರ್ ಲುಂಗಿ ಎನ್‌ಗಿಡಿ ಫಿಟ್ ಆಗಿದ್ದು, ಮಂಗಳವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

Lungi Ngidi

ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಲುಂಗಿ ಎನ್‌ಗಿಡಿ ಹಾಗೂ ಮಿಚೆಲ್ ಸ್ಟಾರ್ಕ್‌ ಬೌಲಿಂಗ್ ಮಾಡುವುದನ್ನು ನೋಡಬಹುದಾಗಿದೆ. ಇದಕ್ಕೂ ಮೊದಲು ಡಿಸಿ ಭಾರತೀಯ ವೇಗದ ಬೌಲರ್‌ಗಳ ಮೇಲೆ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ ಬಲಿಷ್ಠ ವೇಗದ ಬೌಲಿಂಗ್ ಲೈನ್ ಅಪ್‌ನೊಂದಿಗೆ ಕಣಕ್ಕೆ ಇಳಿಯಲಿದೆ.

ಇದಕ್ಕೂ ಮೊದಲು ಡೆಲ್ಲಿ ಪರ 2020-21ರ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯ ಹಾಗೂ ಕಗಿಸೋ ರಬಾಡ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಈ ಬಾರಿ ಮಿಚೆಲ್ ಸ್ಟಾರ್ಕ್‌ ಹಾಗೂ ಲುಂಗಿ ಎನ್‌ಗಿಡಿ ದಾಳಿಯ ಮುಂದಾಳತ್ವ ವಹಿಸಲಿದ್ದಾರೆ. ಲುಂಗಿ ಎನ್‌ಗಿಡಿ ಚೇತರಿಕೆ ಬಗ್ಗೆ ಮಾತನಾಡಿರುವ ಮುನಫ್‌ ಪಟೇಲ್, ಲುಂಗಿ ಎನ್‌ಗಿಡಿ ನೂರಕ್ಕೆ ನೂರರಷ್ಟು ಫಿಟ್ ಆಗಿದ್ದಾರೆ. ಇವರು ಕಳೆದ ಎರಡು ಪಂದ್ಯಗಳಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ. ಆದರೆ ಇವರು ಈಗ ಗಾಯದಿಂದ ಚೇತರಿಸಿಕೊಂಡಿದ್ದು ಮಂಗಳವಾರ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

Lungi Ngidi

ಏಪ್ರಿಲ್‌ 25 ರಂದು ಪಂಜಾಬ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯುವಾಗ ಲುಂಗಿ ಎನ್‌ಗಿಡಿ ಗಾಯಕ್ಕೆ ತುತ್ತಾಗಿದ್ದರು. ಅಲ್ಲದೆ ಒಂದು ದಿನದ ಹಿಂದೆ ಎನ್‌ಗಿಡಿ ಫಿಟ್ ಆಗಿದ್ದು, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ.

ವೇಗಿ ಲುಂಗಿ ಎನ್‌ಗಿಡಿ ಸಾಧನೆ

ದಕ್ಷಿಣ ಆಫ್ರಿಕಾದ 30 ವರ್ಷದ ಲುಂಗಿ ಎನ್‌ಗಿಡಿ ತಮ್ಮ ಬಿಗುವಿನ ವೇಗದ ದಾಳಿಯಿಂದ ಹೆಸರುವಾಸಿಯಾದ ಆಟಗಾರ. ಇವರು ಐಪಿಎಲ್‌ನಲ್ಲಿ ಮೂರು ತಂಡಗಳ ಪರ ಆಡಿದ್ದು, 23 ಪಂದ್ಯಗಳಲ್ಲಿ 36 ವಿಕೆಟ್‌ ಪಡೆದಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಪರ 64 ಟಿ20 ಪಂದ್ಯಗಳನ್ನು ಆಡಿದ್ದು, 90 ವಿಕೆಟ್‌ ಕಬಳಿಸಿದ್ದಾರೆ.

Story first published: Tuesday, May 5, 2026, 11:57 [IST]
Other articles published on May 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+