Lungi Ngidi Injury: ಕ್ಯಾಚ್ ಪಡೆಯುವ ಭರದಲ್ಲಿ ಲುಂಗಿ ಎನ್‌ಗಿಡಿ ತಲೆಗೆ ಬಲವಾದ ಪೆಟ್ಟು
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಕ್ಯಾಚ್ ಪಡೆಯಲು ಹೋಗಿ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಕ್ಯಾಚ್ ಹಿಡಿಯಲು ಮೈದಾನದಲ್ಲಿ ಬೀಳುತ್ತಿದ್ದಂತೆ ತಲೆ ಹಚ್ಚಿ ಮೈದಾನದಲ್ಲಿ ಬಿದ್ದರು. ಬಳಿಕ ಇವರಿಗೆ ಏಳಲು ಸಾಧ್ಯವಾಗದೇ ಇದ್ದಾಗ ಇವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು.
ಪ್ರಿಯಾಂಶ್ ಆರ್ಯ ಅವರಿಗೆ ಅಕ್ಷರ್ ಪಟೇಲ್ ಸ್ಟಂಪ್‌ಗೆ ಬಂದ ಫುಲ್ ಲೆಂತ್ ಎಸೆತವನ್ನು ಜೋರಾಗಿ ಮಾಡಿದರು. ಈ ವೇಳೆ ಪ್ರಿಯಾಂಶ್ ಆರ್ಯ ಮಿಸ್ ಟೈಮ್ ಆಗಿ ಚೆಂಡು ಆಕಾಶಕ್ಕೆ ಚಿಮ್ಮಿತ್ತು. ಚೆಂಡು ಮಿಡ್ ಆಫ್‌ನತ್ತ ಸಾಗಿತು. ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಲುಂಗಿ ಎನ್‌ಗಿಡಿ ಕ್ಯಾಚ್ ಪಡೆಯಲು ಮುಂದಾದರು. ಎನ್‌ಗಿಡಿ ಕ್ಯಾಚ್ ಪಡೆಯಲು ಹೋದಾಗ, ಚೆಂಡು ಇವರ ಕೈಗೆ ಬಡಿಯಲಿಲ್ಲ. ಪರಿಣಾಮ ಅವರು ಆಯಾ ತಪ್ಪಿ ಮೈದಾನಕ್ಕೆ ಬಿದ್ದರು. ಪರಿಣಾಮ ಗಂಭೀರ ಗಾಯಕ್ಕೆ ತುತ್ತಾದರು.

ಲುಂಗಿ ಎನ್‌ಗಿಡಿ ಅವರು ಚೆಂಡನ್ನು ಹಿಡಿಯುವ ಆತುರದಲ್ಲಿ ತಪ್ಪು ಲೆಕ್ಕಾಚಾರ ಮಾಡಿ ಕೆಳಗೆ ಬಿದ್ದರು. ಬೀಳುವ ರಭಸಕ್ಕೆ ಅವರ ತಲೆಯ ಹಿಂಭಾಗ ನೆಲಕ್ಕೆ ಮೈದಾನಕ್ಕೆ ಅಪ್ಪಳಿಸಿತು. ಬಿದ್ದ ತಕ್ಷಣ ಅವರು ನೋವಿನಿಂದ ತಲೆಯನ್ನು ಹಿಡಿದುಕೊಂಡರು. ನಂತರ ಮಗ್ಗುಲಿಗೆ ಹೊರಳಿದ ಅವರು, ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಲ್ಲಿ ಅಲುಗಾಡದೆ ಬಿದ್ದಿದ್ದರು. ಅವರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ಯಲು ಸ್ಟ್ರೆಚರ್ ತರಲಾಯಿತು. ಅಲ್ಲದೆ ಮೈದಾನಕ್ಕೆ ಆಂಬುಲೆನ್ಸ್ ಸಹ ಬಂದಿತು. ಇದರಿಂದಾಗಿ ಪಂದ್ಯ ಹಲವು ನಿಮಿಷಗಳ ಕಾಲ ಸ್ಥಗಿತಗೊಂಡಿತು.
ಸಾಹಿಲ್‌ಗೆ ಗಾಯ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ತರಬೇತಿ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರ 18 ವರ್ಷದ ಸಾಹಿಲ್ ಪರಾಖ್ ಅವರ ಮುಖಕ್ಕೆ ಬೌನ್ಸರ್ ಬಡಿದು ಗಂಭೀರವಾಗಿ ಗಾಯಕ್ಕೆ ತುತ್ತಾಗಿದ್ದರು. ಚೆಂಡು ಬಡಿದ ತಕ್ಷಣ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ದುಲಾಯಿತು.
ಪಂದ್ಯದ ಚಿತ್ರಣ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭರವಸೆಯ ಆರಂಭಿಕ ಆಟಗಾರ ಪತುಮ್ ನಿಸ್ಸಂಕಾ (11) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ನಿತೀಶ್ ರಾಣಾ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಪಂಜಾಬ್ ಬೌಲರ್‌ಗಳು ವಿಫಲರಾದರು. ಈ ಜೋಡಿ ಐಪಿಎಲ್‌ನಲ್ಲಿ ಎರಡನೇ ದೊಡ್ಡ ಜೊತೆಯಾಟದ ಕಾಣಿಕೆ ನೀಡಿತು. ರಾಹುಲ್ ಅಜೇಯ 152 ರನ್ ಸಿಡಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ನಿತೀಶ್ ರಾಣಾ 91 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಡೆಲ್ಲಿ ಈ ಆವೃತ್ತಿಯ ಐಪಿಎಲ್‌ನಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿತು. ಡೆಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 264 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications