ಮಹಾರಾಜ ಟ್ರೋಫಿ: ಮಯಾಂಕ್ ನಾಯಕತ್ವದ ಬೆಂಗಳೂರು ತಂಡದ ಪಂದ್ಯಗಳು ಮತ್ತು ಸಮಯದ ಸಂಪೂರ್ಣ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾದದ್ದರಿಂದ ಪ್ರೇರೇಪಿತರಾಗಿ ಹಲವಾರು ರಾಜ್ಯ ಕ್ರಿಕಟ್ ಬೋರ್ಡ್‌ಗಳು ರಾಜ್ಯ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿದ್ದವು. ಈ ಪೈಕಿ ಯಶಸ್ಸು ಸಾಧಿಸಿದ್ದ ಹಾಗೂ ಸದ್ದು ಮಾಡಿದ್ದ ಲೀಗ್‌ಗಳಲ್ಲಿ ಪ್ರಮುಖವಾದದ್ದು ಕರ್ನಾಟಕ ಪ್ರೀಮಿಯರ್ ಲೀಗ್. ಇನ್ನು ಒಟ್ಟು ಎಂಟು ಯಶಸ್ವಿ ಆವೃತ್ತಿಗಳನ್ನು ಕಂಡ ಈ ಕರ್ನಾಟಕ ಪ್ರೀಮಿಯರ್ ಲೀಗ್ 2019ಕ್ಕೆ ಕೊನೆಗೊಂಡಿದೆ.
ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಆರೋಪಗಳಿಗೆ ಒಳಗಾದ ಕರ್ನಾಟಕ ಪ್ರೀಮಿಯರ್ ಲೀಗ್‌ನ್ನು ಸ್ಥಗಿತಗೊಳಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಂತರ ಆ ಮಾದರಿಯಲ್ಲಿ ಯಾವುದೇ ಫ್ರಾಂಚೈಸಿ ಲೀಗ್ ಟೂರ್ನಿಗಳನ್ನು ಆಯೋಜನೆ ಮಾಡಿರಲಿಲ್ಲ. ಆದರೆ ಇದೀಗ ಮಹಾರಾಜಾ ಟ್ರೋಫಿಯನ್ನು ಆರಂಭಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಬೋರ್ಡ್ ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ತಂಡಗಳನ್ನು ರಚಿಸಿದೆ.
ಈ ಮಹಾರಾಜ ಟಿ ಟ್ವೆಂಟಿ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಸ್ಟ್ರೈಕರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ಎಂಬ 6 ತಂಡಗಳಿದ್ದು, ಈಗಾಗಲೇ ಈ ಎಲ್ಲಾ ತಂಡಗಳ ಸ್ಕ್ವಾಡ್ ಮತ್ತು ಪ್ರತಿ ತಂಡಗಳ ನಾಯಕರು ಯಾರು ಎಂಬುದು ಘೋಷಣೆಯಾಗಿದೆ. ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಮಯಾಂಕ್ ಅಗರ್ವಾಲ್ ನಾಯಕತ್ವವಿರಲಿದ್ದು, ಮಯಾಂಕ್ ಅಗರ್ವಾಲ್ ಈಗಾಗಲೇ ರಾಜ್ಯ ಮಟ್ಟದ ತಂಡ ಹಾಗೂ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಅನುಭವ ಹೊಂದಿದ್ದಾರೆ. ಹೀಗೆ ಮಯಂಕ್ ಅಗರವಾಲ್ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಬೆಂಗಳೂರು ಬ್ಲಾಸ್ಟರ್ಸ್ ತಂಡ ಹೇಗಿದೆ ಹಾಗೂ ತಂಡದ ಪಂದ್ಯಗಳ ವೇಳಾ ಪಟ್ಟಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಬ್ಲಾಸ್ಟರ್ಸ್ ಸ್ಕ್ವಾಡ್ ಹೀಗಿದೆ
ಮಯಾಂಕ್ ಅಗರ್ವಾಲ್ (ನಾಯಕ), ಜೆ ಸುಚಿತ್, ರೋನಿತ್ ಮೋರೆ, ಅನಿರುಧಾ ಜೋಶಿ, ಪ್ರದೀಪ್ ಟಿ, ಕ್ರಾಂತಿ ಕುಮಾರ್, ಚೇತನ್ ಎಲ್ಆರ್, ಅನೀಶ್ ಕೆವಿ, ಕುಮಾರ್ ಎಲ್ಆರ್, ರಕ್ಷಿತ್ ಎಸ್, ರಿಷಿ ಬೋಪಣ್ಣ, ಸಂತೋಕ್ ಸಿಂಗ್, ಸೂರಜ್ ಅಹುಜಾ, ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಎಸ್ ಗೌಡ, ಸೀನ್ ಇಶಾನ್ ಜೋಸೆಫ್, ಕುಹುಶ್ ಮರಾಠೆ, ತನಯ್ ವಾಲ್ಮಿಕ್

ಬೆಂಗಳೂರು ಬ್ಲಾಸ್ಟರ್ಸ್ ಪಂದ್ಯಗಳು
ಈ ಮಹಾರಾಜ ಟ್ರೋಫಿಯ ಲೀಗ್ ಹಂತದಲ್ಲಿ ಪ್ರತೀ ತಂಡವೂ ಉಳಿದ ಐದು ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳಲ್ಲಿ ಸೆಣಸಾಟ ನಡೆಸಲಿದ್ದು, ಒಟ್ಟು ಹತ್ತು ಲೀಗ್ ಪಂದ್ಯಗಳನ್ನು ಆಡಲಿದೆ. ಅವುಗಳ ಪಟ್ಟಿ ಈ ಕೆಳಕಂಡಂತಿದೆ.
ಆಗಸ್ಟ್ 8: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ - 3 PM - ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು.
ಆಗಸ್ಟ್ 9: ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್ - 7 PM - ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು.
ಆಗಸ್ಟ್ 11: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಯುನೈಟೆಡ್ - 3 PM - ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು.
ಆಗಸ್ಟ್ 12: ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ - 7 PM - ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು.
ಆಗಸ್ಟ್ 13: ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್ - 7 PM - ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು.
ಆಗಸ್ಟ್ 15: ಮಂಗಳೂರು ಯುನೈಟೆಡ್ vs ಬೆಂಗಳೂರು ಬ್ಲಾಸ್ಟರ್ಸ್ - 3 PM - ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು.
ಆಗಸ್ಟ್ 17: ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ - 7 PM - ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರು
ಆಗಸ್ಟ್ 18: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ - 3 PM - ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರು
ಆಗಸ್ಟ್ 20: ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ - 7 PM - ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರು
ಆಗಸ್ಟ್ 21: ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ - 7 PM - ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರು

ಟೂರ್ನಿ ಆರಂಭ ಮತ್ತು ಫೈನಲ್
ಇನ್ನು ಮಹಾರಾಜ ಟಿ ಟ್ವೆಂಟಿ ಕ್ರಿಕೆಟ್ ಟೂರ್ನಿ ಆಗಸ್ಟ್ 7ರ ಸೋಮವಾರದಂದು ಆರಂಭವಾಗಲಿದ್ದು, ಆಗಸ್ಟ್ 26ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ಲೀಗ್ ಹಂತದಲ್ಲಿ ಪ್ರತಿದಿನ 2 ಪಂದ್ಯಗಳು ಜರುಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications