Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ, ಎಲಿಮಿನೇಟರ್: ಮೈಸೂರು ತಂಡಕ್ಕೆ ಪೈಪೋಟಿಯುತ ಗುರಿ ನೀಡಿದ ಹುಬ್ಬಳ್ಳಿ ಟೈಗರ್ಸ್

Maharaja Trophy 2022, Eliminator: Mysuru Warriors need 165 runs to win against Hubli Tigers

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟೂರ್ನಿಯು ಪ್ಲೇಆಫ್ ಸುತ್ತಿನ ಹಂತಕ್ಕೆ ಬಂದು ತಲುಪಿದೆ. ಆಗಸ್ಟ್ 7ರಂದು ಆರಂಭವಾಗಿದ್ದ ಟೂರ್ನಿಯ ಲೀಗ್ ಹಂತದ ಮೂವತ್ತು ಪಂದ್ಯಗಳು ಮುಕ್ತಾಯವಾದ ನಂತರ ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಯಶಸ್ವಿಯಾಗಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿವೆ. ಈ ಪೈಕಿ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿದ್ದ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಎಲಿಮಿನೇಟರ್ ಸುತ್ತಿಗೆ ಪ್ರವೇಶಿಸಿವೆ.

ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳಲಿದ್ದು, ಸೋಲಲಿರುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ ಈ ಪಂದ್ಯದ ಕುರಿತಾಗಿ ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಹುಟ್ಟಿಸಿದ್ದು, ಪಂದ್ಯವು ಇಂದು ( ಆಗಸ್ಟ್ 23 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿದ್ದು ಎದುರಾಗಳಿ ಮೈಸೂರು ವಾರಿಯರ್ಸ್ ತಂಡಕ್ಕೆ ಗೆಲ್ಲಲು 165 ರನ್‌ಗಳ ಗುರಿಯನ್ನು ನೀಡಿದೆ.

ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕ ಆಟಗಾರರಾಗಿ ಲವ್‌ನೀತ್ ಸಿಸೋಡಿಯಾ 33 ರನ್ ಕಲೆಹಾಕಿದರೆ, ಮೊಹಮ್ಮದ್ ತಾಹಾ 27 ರನ್ ಕಲೆಹಾಕಿದರು. ಇನ್ನುಳಿದಂತೆ ಬಿ ಯು ಶಿವಕುಮಾರ್ 6 ರನ್, ಲಿಯಾನ್ ಖಾನ್ 7 ರನ್, ಸ್ವಪ್ನಿಲ್ ಎಳವೆ ಅಜೇಯ 30 ರನ್, ತುಷಾರ್ ಸಿಂಗ್ 1 ರನ್, ನವೀನ್ ಎಂಜಿ 32 ರನ್ ಗಳಿಸಿದರು. ಮತ್ತು ಅಭಿಮನ್ಯು ಮಿಥುನ್ 19 ರನ್ ಹಾಗೂ ಶರತ್ ಗೌಡ್ ಅಜೇಯ 1 ರನ್ ಕಲೆಹಾಕಿದರು. ಹೀಗೆ ಲವ್‌ನೀತ್ ಸಿಸೋಡಿಯಾ, ಮೊಹಮ್ಮದ್ ತಾಹಾ, ಸ್ವಪ್ನಿಲ್ ಯೆಳವೆ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ಬ್ಯಾಟಿಂಗ್ ಮಾಡಲಿಲ್ಲ. ಪರಿಣಾಮವಾಗಿ ಹುಬ್ಬಳ್ಳಿ ಟೈಗರ್ಸ್ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ.

ಮೈಸೂರು ವಾರಿಯರ್ಸ್ ಬೌಲಿಂಗ್

ಮೈಸೂರು ವಾರಿಯರ್ಸ್ ಪರ ಶ್ರೇಯಸ್ ಐಯ್ಯರ್ ಮೂರು ವಿಕೆಟ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಉತ್ತಮ ಬೌಲಿಂಗ್ ಮಾಡಿದರು. ಇನ್ನುಳಿದಂತೆ ಪ್ರತೀಕ್ ಜೈನ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ ಹಾಗೂ ಆದಿತ್ಯ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗಗಳು:

ಮೈಸೂರು ವಾರಿಯರ್ಸ್: ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ, ಶಿವರಾಜ್ ಎಸ್, ನಾಗ ಭರತ್, ಶುಭಾಂಗ್ ಹೆಗ್ಡೆ, ಶ್ರೇಯಸ್ ಗೋಪಾಲ್, ಭರತ್ ಧುರಿ, ವಿದ್ಯಾಧರ್ ಪಾಟೀಲ್, ಆದಿತ್ಯ ಗೋಯಲ್, ಪ್ರತೀಕ್ ಜೈನ್ ಬೆಂಚ್ ವರುಣ್ ರಾವ್ ಟಿಎನ್, ನಿತಿನ್ ಭಿಲ್ಲೆ, ಲೋಚನ್ ಅಪ್ಪಣ್ಣ, ಜಿಎಸ್ ಚಿರಂಜೀವಿ, ಜಿ.ಎಸ್. ಮೊನಿಶ್ ರೆಡ್ಡಿ, ರಾಹುಲ್ ಪ್ರಸನ್ನ, ಅಭಿಷೇಕ್ ಅಹ್ಲಾವತ್

ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ ( ನಾಯಕ ಮತ್ತು ವಿಕೆಟ್ ಕೀಪರ್), ಮೊಹಮ್ಮದ್ ತಾಹಾ, BU ಶಿವಕುಮಾರ್, ಲಿಯಾನ್ ಖಾನ್, ಸ್ವಪ್ನಿಲ್ ಯೆಲವೆ, ತುಷಾರ್ ಸಿಂಗ್, ನವೀನ್ MG, ಶರಣ್ ಗೌಡ್, ಅಭಿಮನ್ಯು ಮಿಥುನ್, ವಾಸುಕಿ ಕೌಶಿಕ್, ಆನಂದ್ ದೊಡ್ಡಮನಿ

Story first published: Tuesday, August 23, 2022, 17:13 [IST]
Other articles published on Aug 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+