ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Maharaja Trophy: ಅಭಿನವ್ ಅರ್ಧಶತಕ ವ್ಯರ್ಥ; ಮಂಗಳೂರು ಸೋಲಿಸಿ ಅಂಕಪಟ್ಟಿಯಲ್ಲಿ ಜಿಗಿತ ಕಂಡ ಗುಲ್ಬರ್ಗಾ

Maharaja Trophy 2022: Gulbara Mystics beat Mangalore United by 28 runs

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟೂರ್ನಿಯ 24ನೇ ಪಂದ್ಯದಲ್ಲಿ ಇಂದು ( ಆಗಸ್ಟ್ 19 ) ಮಂಗಳೂರು ಯುನೈಟೆಡ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ 28 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಮಂಗಳೂರು ಯುನೈಟೆಡ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿ ಮಂಗಳೂರು ಯುನೈಟೆಡ್ ತಂಡಕ್ಕೆ 165 ರನ್‌ಗಳ ಗುರಿಯನ್ನು ನೀಡಿತು. ಇತ್ತ ಈ ಪೈಪೋಟಿಯುತ ಗುರಿಯನ್ನು ಬೆನ್ನತ್ತಿದ ಮಂಗಳೂರು ಯುನೈಟೆಡ್ 18.4 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಸೋಲನ್ನು ಅನುಭವಿಸಿದೆ.

IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್

ಇನ್ನು ಈ ಪಂದ್ಯದ ಫಲಿತಾಂಶ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಸೆಮಿಫೈನಲ್ ಹಾದಿಯನ್ನು ಸುಲಭಗೊಳಿಸಿದರೆ, ಮಂಗಳೂರು ಯುನೈಟೆಡ್ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕ ಆಟಗಾರರಾಗಿ ದೇವದತ್ ಪಡಿಕ್ಕಲ್ ಹಾಗೂ ರೋಹನ್ ಪಾಟೀಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಈ ಪೈಕಿ ದೇವದತ್ ಪಡಿಕ್ಕಲ್ 25 ರನ್ ಗಳಿಸಿದರೆ, ರೋಹನ್ ಪಾಟೀಲ್ ಶೂನ್ಯ ಸುತ್ತಿದರು. ನಂತರ ಕಣಕ್ಕಿಳಿದ ಜೆಸ್ವಂತ್ ಆಚಾರ್ಯ 9 ರನ್ ಹಾಗೂ ಕೃಷ್ಣನ್ ಶ್ರೀಜಿತ್ 5 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಇನ್ನು ಐದನೇ ಕ್ರಮಾಕದಲ್ಲಿ ಕಣಕ್ಕಿಳಿದ ಮನೀಶ್ ಪಾಂಡೆ 40 ಓವರ್‌ಗಳಲ್ಲಿ 58 ರನ್ ಕಲೆಹಾಕಿದರು. ಒಂದೆಡೆ ತಂಡ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ನಾಯಕ ಮನೀಶ್ ಪಾಂಡೆ ಏಕಾಂಗಿ ಹೋರಾಟ ನಡೆಸಿ ತಂಡ ಪೈಪೋಟಿಯುತ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನುಳಿದಂತೆ ಮನೋಜ್ ಭಂಡಾಗೆ ಒಂದು ರನ್ ಕಲೆಹಾಕಿದರೆ, ಕಾರ್ತಿಕ್ ಸಿಎ ಅಜೇಯ 38 ರನ್ ನಹಾಗೂ ರಿತೇಶ್ ಭಟ್ಕಳ್ ಅಜೇಯ 18 ರನ್ ಕಲೆಹಾಕಿದರು.

ಮಂಗಳೂರು ಯುನೈಟೆಡ್ ಪರ ಎಚ್ ಎಸ್ ಶರತ್ ಹಾಗೂ ವಿಜಯ್ ಕುಮಾರ್ ವೈಶಾಖ್ ಎರಡು ವಿಕೆಟ್ ಪಡೆದರೆ, ಶಶಿ ಕುಮಾರ್ ಕೆ ಒಂದು ವಿಕೆಟ್ ಪಡೆದರು.

Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!

ಮಂಗಳೂರು ಯುನೈಟೆಡ್ ಇನ್ನಿಂಗ್ಸ್:

ಗುಲ್ಬರ್ಗಾ ಮಿಸ್ಟಿಕ್ಸ್ ನೀಡಿದ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಮಂಗಳೂರು ಯುನೈಟೆಡ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸಮರ್ಥ್ ಆರ್ 7, ಮ್ಯಾಕ್‌ನೀಲ್ ನೊರೊನ್ಹಾ 14 ರನ್ ಬಾರಿಸಿದರು. ಇನ್ನುಳಿದಂತೆ ನಿಕಿನ್ ಜೋಸ್ 14, ಸುಜಯ್ ಸತೇರಿ 22, ಹೆಚ್ಎಸ್ ಶರತ್ 9, ಯಶೋವರ್ಧನ್ ಪರಂತಪ್ ಗೋಲ್ಡನ್ ಡಕ್ಔಟ್, ಅನೀಶ್ವರ್ ಗೌತಮ್ 1, ವಿಜಯ್ ಕುಮಾರ್ ವೈಶಾಖ್ ಗೋಲ್ಡನ್ ಡಕ್ ಔಟ್, ಶಶಿ ಕುಮಾರ್ ಕೆ 12 ಹಾಗೂ ಎಂ ವೆಂಕಟೇಶ್ ಅಜೇಯ ಒಂದು ರನ್ ಕಲೆಹಾಕಿದರು.

ಗುಲ್ಬರ್ಗಾ ಮಿಸ್ಟಿಕ್ಸ್ ಪರ ಕುಶಾಲ್ ವಧ್ವಾನಿ 3 ವಿಕೆಟ್‌, ಪ್ರಣವ್ ಭಾಟಿಯಾ ಹಾಗೂ ಕೋದಂಡ ಅಜಿತ್ ಕಾರ್ತಿಕ್ ತಲಾ ಎರಡು ವಿಕೆಟ್, ವಿಧ್ವತ್ ಕಾವೇರಪ್ಪ ಹಾಗೂ ರಿತೇಶ್ ಭಟ್ಕಳ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Saturday, August 20, 2022, 9:53 [IST]
Other articles published on Aug 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X