
ಮಂಗಳೂರು ಯುನೈಟೆಡ್ ಇನ್ನಿಂಗ್ಸ್
ಮಂಗಳೂರು ಯುನೈಟೆಡ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸಮರ್ಥ್ ಆರ್ 12 ರನ್ ಹಾಗೂ ರಘುವೀರ್ ಪಾವಲೂರ್ 1 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕಿನ್ ಜೋಸ್ 38, ಅಮಿತ್ ವರ್ಮಾ 10, ಅಭಿನವ್ ಮನೋಹರ್ 36, ಅನೀಶ್ವರ್ ಗೌತಮ್ ಗೋಲ್ಡನ್ ಡಕ್ಔಟ್, ಯಶೋವರ್ಧನ್ ಪರಂತಾಪ್ 16, ಎಂ ವೆಂಕಟೇಶ್ 4, ಎಚ್ ಎಸ್ ಶರತ್ ಅಜೇಯ 5 ಹಾಗೂ ವಿಜಯ್‌ಕುಮಾರ್ ವೈಶಾಖ್ ಅಜೇಯ 5 ರನ್ ಬಾರಿಸಿದರು. ಹೀಗೆ ನಿಕಿನ್ ಜೋಸ್ ಹಾಗೂ ಅಭಿವನ್ ಮನೋಹರ್ ಹೊರತುಪಡಿಸಿದರೆ ಮಂಗಳೂರು ಯುನೈಟೆಡ್ ತಂಡದ ಉಳಿದ ಯಾವುದೇ ಆಟಗಾರ ಕೂಡ ಇಪ್ಪತ್ತರ ಗಡಿ ದಾಟಲಿಲ್ಲ.
ಶಿವಮೊಗ್ಗ ಸ್ಟ್ರೈಕರ್ಸ್ ಪರ ನಾಯಕ ಕೃಷ್ಣಪ್ಪ ಗೌತಮ್, ಕಾರಿಯಪ್ಪ ಹಾಗೂ ಅವಿನಾಶ್ ಡಿ ತಲಾ ಎರಡು ವಿಕೆಟ್ ಪಡೆದರೆ, ಸ್ಟಾಲಿನ್ ಹೂವರ್ ಮತ್ತು ಉತ್ತಮ್ ಐಯ್ಯಪ್ಪ ತಲಾ ಒಂದೊಂದು ವಿಕೆಟ್ ಪಡೆದರು.

ಶಿವಮೊಗ್ಗ ಪರ ಅಬ್ಬರಿಸಿದ ಕೆ ಗೌತಮ್
ಇನ್ನು ಟೂರ್ನಿಯಲ್ಲಿ ಸತತವಾಗಿ ಆಟಗಾರನಾಗಿ ಹಾಗೂ ನಾಯಕನಾಗಿ ಮಂಕಾಗಿದ್ದ ಕೃಷ್ಣಪ್ಪ ಗೌತಮ್ ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದ ಗೌತಮ್ ತಂಡ 3 ರನ್‌ಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 32 ಎಸೆತಗಳಲ್ಲಿ 72 ರನ್ ಚಚ್ಚಿ ತಂಡ ವೇಗವಾಗಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕೃಷ್ಣಪ್ಪ ಗೌತಮ್ 7 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಇನ್ನು ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಶರತ್ ಬಿಆರ್ ಕೇವಲ ಒಂದು ರನ್ ಕಲೆಹಾಕಿ ಔಟ್ ಆದರೆ, ಮತ್ತೋರ್ವ ಆರಂಭಿಕ ಆಟಗಾರ ಸ್ಟಾಲಿನ್ ಹೂವರ್ 35 ಎಸೆತಗಳಲ್ಲಿ ಅಜೇಯ 53 ರನ್ ಕಲೆಹಾಕಿದರು. ಮೂರನೇ ವಿಕೆಟ್‌ಗೆ ಜತೆಯಾದ ಕೆ ಗೌತಮ್ ಹಾಗೂ ಸ್ಟಾಲಿನ್ ಹೂವರ್ 129 ರನ್‌ಗಳ ಜತೆಯಾಟವನ್ನು ಆಡಿದರು. ಅಂತಿಮ ಹಂತದಲ್ಲಿ ಗೌತಮ್ ಔಟ್ ಆದ ನಂತರ ಕಣಕ್ಕಿಳಿದ ಕೃಷ್ಣಮೂರ್ತಿ ಸಿದ್ಧಾರ್ಥ್ 3 ಎಸೆತಗಳಲ್ಲಿ ಅಜೇಯ 3 ರನ್ ಕಲೆಹಾಕಿದರು.
ಮಂಗಳೂರು ಯುನೈಟೆಡ್ ಪರ ಶಶಿಕುಮಾರ್ ಕೆ ಹಾಗೂ ಹೆಚ್ ಎಸ್ ಶರತ್ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗ
ಮಂಗಳೂರು ಯುನೈಟೆಡ್: ರವಿಕುಮಾರ್ ಸಮರ್ಥ್ (ನಾಯಕ), ನಿಕಿನ್ ಜೋಸ್, ಅನೀಶ್ವರ್ ಗೌತಮ್, ಅಭಿನವ್ ಮನೋಹರ್, ಅಮಿತ್ ವರ್ಮಾ, ರಘುವೀರ್ ಪಾವಲೂರ್ (ವಿಕೆಟ್ ಕೀಪರ್), ಮುರಳೀಧರ ವೆಂಕಟೇಶ್, ಎಚ್‌ಎಸ್ ಶರತ್, ವಿಜಯಕುಮಾರ್ ವೈಶಾಕ್, ಶಶಿಕುಮಾರ್ ಕೆ, ಯಶೋವರ್ಧನ್ ಪರಂತಪ್
ಶಿವಮೊಗ್ಗ ಸ್ಟ್ರೈಕರ್ಸ್: ಶರತ್ ಬಿಆರ್ (ವಿಕೆಟ್ ಕೀಪರ್), ಸ್ಟಾಲಿನ್ ಹೂವರ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿನಯ್ ಸಾಗರ್, ಚೈತನ್ಯ ಎಸ್, ಕೃಷ್ಣಪ್ಪ ಗೌತಮ್ (ನಾಯಕ), ಅವಿನಾಶ್ ಡಿ, ರಾಜವೀರ್ ವಾಧ್ವಾ, ಶ್ರೇಯಸ್ ಬಿಎಂ, ಕೆಸಿ ಕಾರಿಯಪ್ಪ, ಉತ್ತಮ್ ಅಯ್ಯಪ್ಪ


Click it and Unblock the Notifications
