ಮಹಾರಾಜ ಟ್ರೋಫಿ 2022: 6 ತಂಡಗಳು ಸೆಣಸಾಡಲಿರುವ ಹೊಸ ಕೆಪಿಎಲ್‌ನ ವೇಳಾಪಟ್ಟಿ ಪ್ರಕಟ

2019ರವರೆಗೂ ಕರ್ನಾಟಕ ಪ್ರೀಮಿಯರ್ ಲೀಗ್‌ನ 8 ಆವೃತ್ತಿಗಳು ಯಶಸ್ವಿಯಾಗಿ ಜರುಗಿದ್ದವು. ಆದರೆ ನಂತರದಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳ ವಿವಾದದಿಂದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಕರ್ನಾಟಕ ಪ್ರೀಮಿಯರ್ ಲೀಗ್‌ನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಮತ್ತೆ ಕರ್ನಾಟಕ ರಾಜ್ಯದ ಫ್ರಾಂಚೈಸಿ ಟಿ ಟ್ವೆಂಟಿ ಲೀಗ್ ಮರಳಿ ಬಂದಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಬೋರ್ಡ್ ಈ ಟಿ ಟ್ವೆಂಟಿ ಲೀಗ್‌ಗೆ ಮಹಾರಾಜ ಟ್ರೋಫಿ ಎಂದು ನಾಮಕರಣವನ್ನು ಮಾಡಿದೆ.
ಈ ಲೀಗ್ ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಇದ್ದು, ಒಟ್ಟು 6 ತಂಡಗಳು ಸೆಣಸಾಟ ನಡೆಸಲಿವೆ. ಆಗಸ್ಟ್ ತಿಂಗಳ 7ರಂದು ನಡೆಯಲಿರುವ ಹುಬ್ಬಳ್ಳಿ ಟೈಗರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳ ನಡುವಿನ ಲೀಗ್ ಹಂತದ ಪಂದ್ಯದ ಮೂಲಕ ಈ ಟೂರ್ನಿಯ ಪಂದ್ಯಗಳು ಆರಂಭವಾಗಲಿದ್ದು, ಆಗಸ್ಟ್ 26ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 30 ಲೀಗ್ ಪಂದ್ಯಗಳು ನಡೆಯಲಿದ್ದು, ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆಯಲಿರುವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ ಹಾಗೂ ಕೊನೆಯ 2 ಸ್ಥಾನಗಳನ್ನು ಪಡೆಯುವ ತಂಡಗಳು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರ ಬೀಳಲಿವೆ. ಮೊದಲೆರಡು ಸ್ಥಾನವನ್ನು ಪಡೆಯುವ ತಂಡಗಳು ಕ್ವಾಲಿಫೈಯರ್ 1 ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡರೆ, 3 ಮತ್ತು 4ನೇ ಸ್ಥಾನ ಪಡೆದುಕೊಳ್ಳುವ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿವೆ. ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶಿಸಲಿದೆ.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬಿದ್ದರೆ, ಜಯ ಸಾಧಿಸುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಡಲಿದೆ. ಹೀಗೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿದೆ. ಈ ಲೀಗ್ ಸುತ್ತಿನ ಪಂದ್ಯಗಳು ಯಾವ ದಿನದಂದು ಯಾವ ತಂಡಗಳ ನಡುವೆ ನಡೆಯಲಿದೆ ಎಂಬುದರ ಕುರಿತಾದ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.

ಭಾಗವಹಿಸಲಿರುವ 6 ತಂಡಗಳು
ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಸ್ಟ್ರೈಕರ್ಸ್, ಹುಬ್ಬಳ್ಳಿ ಟೈಗರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಮಂಗಳೂರು ಯುನೈಟೆಡ್

ಪಂದ್ಯಗಳ ವಿವರ
ಆಗಸ್ಟ್ 7: ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್ & ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್ 8: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ & ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್
ಆಗಸ್ಟ್ 9: ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್
ಆಗಸ್ಟ್ 10: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ & ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್ 11: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಯುನೈಟೆಡ್ & ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್
ಆಗಸ್ಟ್ 12: ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ & ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್ 13: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್
ಆಗಸ್ಟ್ 14: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಗುಲ್ಬರ್ಗ ಮಿಸ್ಟಿಕ್ಸ್ vs ಮಂಗಳೂರು ಯುನೈಟೆಡ್
ಆಗಸ್ಟ್ 15: ಮಂಗಳೂರು ಯುನೈಟೆಡ್ vs ಬೆಂಗಳೂರು ಬ್ಲಾಸ್ಟರ್ಸ್ & ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್
ಆಗಸ್ಟ್ 16: ವಿಶ್ರಾಂತಿ ದಿನ
ಆಗಸ್ಟ್ 17: ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್ & ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್ 18: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್
ಆಗಸ್ಟ್ 19: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್ & ಮಂಗಳೂರು ಯುನೈಟೆಡ್ vs ಗುಲ್ಬರ್ಗಾ ಮಿಸ್ಟಿಕ್ಸ್
ಆಗಸ್ಟ್ 20: ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್ & ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಆಗಸ್ಟ್ 21: ಮೈಸೂರು ವಾರಿಯರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಆಗಸ್ಟ್ 22: ಶಿವಮೊಗ್ಗ ಸ್ಟ್ರೈಕರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್
ಆಗಸ್ಟ್ 23: ಎಲಿಮಿನೇಟರ್ & ಕ್ವಾಲಿಫೈಯರ್ 1
ಆಗಸ್ಟ್ 24: ವಿಶ್ರಾಂತಿಯ ದಿನ
ಆಗಸ್ಟ್ 25: ಎರಡನೇ ಕ್ವಾಲಿಫೈಯರ್ ಪಂದ್ಯ
ಆಗಸ್ಟ್ 26: ಫೈನಲ್ ಪಂದ್ಯ

ವಿಶ್ರಾಂತಿ ದಿನ ಈ ಕಾರಣಕ್ಕಾಗಿ
ಇನ್ನು ಆಗಸ್ಟ್ 16 ಮತ್ತು ಆಗಸ್ಟ್ 24 ಈ 2 ದಿನಗಳನ್ನು ವಿಶ್ರಾಂತಿಯ ದಿನವೆಂದು ಪ್ರಕಟಿಸಲಾಗಿದೆ. ಒಂದು ಕ್ರೀಡಾಂಗಣದಿಂದ ಮತ್ತೊಂದು ಕ್ರೀಡಾಂಗಣಕ್ಕೆ ಪ್ರಯಾಣ ಮಾಡುವುದಕ್ಕೋಸ್ಕರ ಈ ದಿನಗಳನ್ನು ವಿಶ್ರಾಂತಿ ದಿನ ಎಂದು ಘೋಷಿಸಲಾಗಿದ್ದು ಅಂದು ಯಾವುದೇ ಪಂದ್ಯಗಳು ನಡೆಯುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications