ಮಹಾರಾಜ ಟ್ರೋಫಿ: ಅಂತಿಮ ಪಂದ್ಯದಲ್ಲಿ ಸೋತ ಪಾಂಡೆ ನಾಯಕತ್ವದ ಗುಲ್ಬರ್ಗಾ ಪ್ಲೇಆಫ್ ತಲುಪುತ್ತಾ?

ಸದ್ಯ ನಡೆಯುತ್ತಿರುವ ಮಹಾರಾಜ್ ಟ್ರೋಫಿಯ ಲೀಗ್ ಹಂತದ ಅಂತಿಮ ದಿನಗಳ ಹಣಾಹಣಿ ಇಂದು ( ಆಗಸ್ಟ್ 22 ) ನಡೆಯುತ್ತಿವೆ. ಇಂದು ಲೀಗ್ ಹಂತದ ಅಂತಿಮ ಎರಡು ಪಂದ್ಯಗಳು ಆಯೋಜನೆಯಾಗಿದ್ದು, ಪ್ರಥಮ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಶಿವಮೊಗ್ಗ ಸ್ಟ್ರೈಕರ್ಸ್ ವಿಜೆಡಿ ನಿಯಮದ ಪ್ರಕಾರ 6 ವಿಕೆಟ್‌ಗಳ ಗೆಲುವನ್ನು ಕಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ಸ್ಟ್ರೈಕರ್ಸ್ ನಾಯಕ ಕೃಷ್ಣಪ್ಪ ಗೌತಮ್ ಫೀಲ್ಟಿಂಗ್ ಆಯ್ದುಕೊಂಡು ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಕಲೆಹಾಕಿ ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡಕ್ಕೆ ಗೆಲ್ಲಲು 119 ರನ್‌ಗಳ ಅಲ್ಪಮೊತ್ತವನ್ನು ಗುರಿಯನ್ನಾಗಿ ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತಲು ಮುಂದಾದ ಶಿವಮೊಗ್ಗ ಸ್ಟ್ರೈಕರ್ಸ್ 6.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿತ್ತು. ಇನ್ನು ಇದೇ ವೇಳೆ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿಪರೀತ ಮಳೆಯಾದ ಕಾರಣ ಪಂದ್ಯವನ್ನು ಮುಂದುವರೆಸಲಾಗಲಿಲ್ಲ. ಹೀಗಾಗಿ ವಿ ಜಯದೇವನ್ ನಿಯಮದ ಪ್ರಕಾರ ವಿಜೇತರನ್ನು ನಿರ್ಧರಿಸಲಾಗಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು ಉತ್ತಮ ರನ್ ರೇಟ್ ಹೊಂದಿದ್ದ ಕಾರಣ ವಿಜೇತ ತಂಡ ಎಂದು ಘೋಷಿಸಲಾಯಿತು.

ಉಭಯ ತಂಡಗಳ ಇನ್ನಿಂಗ್ಸ್
ಗುಲ್ಬರ್ಗಾ ಮಿಸ್ಟಿಕ್ಸ್: ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹನ್ ಪಾಟೀಲ್ ಹಾಗೂ ದೇವದತ್ ಪಡಿಕ್ಕಲ್ ಅಲ್ಪ ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ರೋಹನ್ ಪಾಟೀಲ್ 4 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 11 ರನ್ ಕಲೆಹಾಕಿದರು. ಇನ್ನುಳಿದಂತೆ ಜೆಸ್ವಂತ್ ಆಚಾರ್ಯ 22 ರನ್, ಕೃಷ್ಣನ್ ಶ್ರೀಜಿತ್ 12 ರನ್, ನಾಯಕ ಮನೀಶ್ ಪಾಂಡೆ 11 ರನ್, ಅಜಯ್ ಗೌಡ 7, ರಿತೇಶ್ ಭಟ್ಕಳ್ 38, ಪ್ರಣವ್ ಭಾಟಿಯಾ 1, ಕುಶಾಲ್ ವಧ್ಚಾನಿ 1 ಮತ್ತು ವಿಧ್ವತ್ ಕಾವೇರಪ್ಪ ಅಜೇಯ 6 ರನ್ ಕಲೆಹಾಕಿದರು. ಹೀಗೆ ರಿತೇಶ್ ಭಟ್ಕಳ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರೂ ಸಹ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗದೇ ತಂಡ ಕಳಪೆ ಮೊತ್ತ ಕಲೆಹಾಕಿತು.
ಶಿವಮೊಗ್ಗ ಸ್ಟ್ರೈಕರ್ಸ್ ಪರ ಅವಿನಾಶ್ ಡಿ ಮೂರು ವಿಕೆಟ್, ಉತ್ತಮ್ ಐಯ್ಯಪ್ಪ ಮತ್ತು ಕಾರಿಯಪ್ಪ ತಲಾ ಎರಡು ವಿಕೆಟ್, ಶ್ರೇಯಸ್ ಬಿಎಂ ಮತ್ತು ಕೃಷ್ಣಪ್ಪ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.
ಶಿವಮೊಗ್ಗ ಸ್ಟ್ರೈಕರ್ಸ್: ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಶರತ್ ಬಿಆರ್ 7 ರನ್ ಮತ್ತು ಸ್ಟಾಲಿನ್ ಹೂವರ್ 8 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೆ ಗೌತಮ್ 4, ಕೃಷ್ಣಮೂರ್ತಿ ಸಿದ್ಧಾರ್ಥ್ 18 ರನ್ ಕಲೆಹಾಕಿದರು. ಮಳೆ ಬಂದು ಪಂದ್ಯ ಸ್ಥಗಿತವಾದ ಸಮಯಕ್ಕೆ ಅವಿನಾಶ್ ಡಿ ಅಜೆಯ 11 ರನ್ ಹಾಗೂ ವಿನಯ್ ಸಾಗರ್ ಅಜೇಯ 5 ರನ್ ಬಾರಿಸಿದರು.

ಸೋತ ಗುಲ್ಬರ್ಗಾ ಪ್ಲೇಆಫ್ ತಲುಪುತ್ತಾ?
ಇನ್ನು ಈ ಪಂದ್ಯದಲ್ಲಿ ಸೋತರೂ ಸಹ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದು ತನ್ನ ಪ್ಲೇಆಪ್ ಅನ್ನು ಖಚಿತಪಡಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ತನ್ನೆಲ್ಲಾ ಹತ್ತು ಪಂದ್ಯಗಳನ್ನು ಆಡಿ ಮುಗಿಸಿರುವ ಗುಲ್ಬರ್ಗಾ ಮಿಸ್ಟಿಕ್ಸ್ 6 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರು ಬ್ಲಾಸ್ಟರ್ಸ್ ಪ್ರಥಮ ಸ್ಥಾನ ಹಾಗೂ ಮೈಸೂರು ವಾರಿಯರ್ಸ್ ಮೂರನೇ ಸ್ಥಾನದಲ್ಲಿದೆ. ಹೀಗೆ ಸದ್ಯಕ್ಕೆ ಈ ಮೂರು ತಂಡಗಳು ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಲೀಗ್ ಹಂತದ ಪಂದ್ಯದಲ್ಲಿ ಸೆಣಸಾಡಲಿರುವ ಹುಬ್ಬಳ್ಳಿ ಟೈಗರ್ಸ್ ಹಾಗೂ ಮಂಗಳೂರು ಯುನೈಟೆಡ್ ತಂಡಗಳಲ್ಲಿ ಗೆಲ್ಲುವ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡು ಪ್ಲೇಆಪ್ ಸುತ್ತಿಗೆ ಅಂತಿಮ ತಂಡವಾಗಿ ಪ್ರವೇಶಿಸಲಿದೆ. ಇನ್ನು ಈ ಅಂತಿಮ ಪಂದ್ಯದಲ್ಲಿ ಸೋಲುವ ತಂಡ ಹಾಗೂ ಟೂರ್ನಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಶಿವಮೊಗ್ಗ ಸ್ಟ್ರೈಕರ್ಸ್ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬೀಳಲಿವೆ.

ಆಡುವ ಬಳಗ
ಶಿವಮೊಗ್ಗ ಸ್ಟ್ರೈಕರ್ಸ್: ಶರತ್ ಬಿಆರ್ (ವಿಕೆಟ್ ಕೀಪರ್), ಸ್ಟಾಲಿನ್ ಹೂವರ್, ಕೃಷ್ಣಪ್ಪ ಗೌತಮ್ (ನಾಯಕ), ಕೃಷ್ಣಮೂರ್ತಿ ಸಿದ್ಧಾರ್ಥ್, ವಿನಯ್ ಸಾಗರ್, ಚೈತನ್ಯ ಎಸ್, ಅವಿನಾಶ್ ಡಿ, ರಾಜವೀರ್ ವಾಧ್ವಾ, ಶ್ರೇಯಸ್ ಬಿಎಂ, ಕೆಸಿ ಕಾರಿಯಪ್ಪ, ಉತ್ತಮ್ ಅಯ್ಯಪ್ಪ
ಗುಲ್ಬರ್ಗಾ ಮಿಸ್ಟಿಕ್ಸ್: ದೇವದತ್ ಪಡಿಕ್ಕಲ್, ರೋಹನ್ ಪಾಟೀಲ್, ಜೆಸ್ವತ್ ಆಚಾರ್ಯ, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಅಜಯ್ ಗೌಡ, ರಿತೇಶ್ ಭಟ್ಕಳ್, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ವಿಧ್ವತ್ ಕಾವೇರಪ್ಪ, ಧನುಷ್ ಗೌಡ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications