ಮಹಾರಾಜ ಟ್ರೋಫಿ: ಪ್ಲೇಆಫ್‌ಗೆ ಒಂದೇ ದಿನ ಬಾಕಿ; ಅಂಕಪಟ್ಟಿಯ ಟಾಪ್ 4 ತಂಡಗಳಾವುವು?

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿಯ ಲೀಗ್ ಹಂತದ ಅಂತಿಮ ದಿನದ ಸೆಣಸಾಟ ಇಂದು ( ಆಗಸ್ಟ್ 22 ) ನಡೆಯಲಿವೆ. ಆಗಸ್ಟ್ 7ರಂದು ಆರಂಭವಾಗಿದ್ದ ಈ ಮಹಾರಾಜ ಟ್ರೋಫಿಯ ಲೀಗ್ ಹಂತದ 29 ಮತ್ತು 30ನೇ ಪಂದ್ಯಗಳು ಇಂದು ನಡೆದರೆ, 27 ಹಾಗೂ 28 ಪಂದ್ಯಗಳು ನಿನ್ನೆ ( ಆಗಸ್ಟ್ 21 ) ಮುಕ್ತಾಯಗೊಂಡಿವೆ. ನಿನ್ನೆಯ ಮೊದಲ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮೈಸೂರು ವಾರಿಯರ್ಸ್ ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾದವು. ಈ ಪೈಕಿ ಮೈಸೂರು ವಾರಿಯರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ ಗೆಲುವು ಸಾಧಿಸಿದರೆ, ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಜಯ ಸಾಧಿಸಿದೆ.
ಇನ್ನು ಅಂಕಪಟ್ಟಿಯಲ್ಲಿ ಟಾಪ್ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದ್ದು, ಸದ್ಯ ಲೀಗ್ ಹಂತ ಇಂದು ಮುಕ್ತಾಯಗೊಳ್ಳಿರುವ ಕಾರಣ ಅಂಕಪಟ್ಟಿಯಲ್ಲಿ ಯಾವ ತಂಡಗಳು ಟಾಪ್ ಸ್ಥಾನಗಳನ್ನು ಗಿಟ್ಟಿಸಿಕೊಂಡು ಪ್ಲೇಆಫ್ ಪ್ರವೇಶಸಲಿವೆ ಎಂಬ ಪ್ರಶ್ನೆ ಎದ್ದಿದೆ. ಹೀಗಿರುವಾಗ ಲೀಗ್ ಹಂತದ 28 ಮುಗಿದ ನಂತರ ಅಂಕಪಟ್ಟಿ ಹೇಗಿದೆ, ಯಾವ ತಂಡಗಳು ಎಷ್ಟು ಸ್ಥಾನಗಳನ್ನು ಪಡೆದುಕೊಂಡು ಯಾವ ಸ್ಥಾನದಲ್ಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

28 ಪಂದ್ಯಗಳು ಮುಕ್ತಾಯದ ನಂತರ ಅಂಕಪಟ್ಟಿ
* ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದು 7 ಪಂದ್ಯಗಳಲ್ಲಿ ಗೆದ್ದು ಉಳಿದ 3 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಂಡಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
* ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳಲ್ಲಿ ಕಣಕ್ಕಿಳಿದು 6 ಪಂದ್ಯಗಳಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆದುಕೊಂಡಿರುವ ಗುಲ್ಬರ್ಗಾ ಮಿಸ್ಟಿಕ್ಸ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
* ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದು 5 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡಿರುವ ಮೈಸೂರು ವಾರಿಯರ್ಸ್ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ.
* ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳಲ್ಲಿ ಆಡಿ 4 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡಿರುವ ಹುಬ್ಬಳ್ಳಿ ಟೈಗರ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
* ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡಿರುವ ಮಂಗಳೂರು ಯುನೈಟೆಡ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
* ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳಲ್ಲಿ ಕಣಕ್ಕಿಳಿದು 2 ಪಂದ್ಯಗಳಲ್ಲಿ ಮಾತ್ರ ಗೆದ್ದು, ಉಳಿದ 7 ಪಂದ್ಯಗಳಲ್ಲಿ ಸೋತು ಕೇವಲ ಎರಡು ಅಂಕಗಳನ್ನು ಮಾತ್ರ ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಉಳಿದ ಪಂದ್ಯಗಳ ವೇಳಾಪಟ್ಟಿ
ಆಗಸ್ಟ್ 22: ಶಿವಮೊಗ್ಗ ಸ್ಟ್ರೈಕರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ & ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್
ಆಗಸ್ಟ್ 23: ಎಲಿಮಿನೇಟರ್ & ಕ್ವಾಲಿಫೈಯರ್ 1
ಆಗಸ್ಟ್ 24: ವಿಶ್ರಾಂತಿಯ ದಿನ
ಆಗಸ್ಟ್ 25: ಎರಡನೇ ಕ್ವಾಲಿಫೈಯರ್ ಪಂದ್ಯ
ಆಗಸ್ಟ್ 26: ಫೈನಲ್ ಪಂದ್ಯ

ಕುತೂಹಲ ಮೂಡಿಸಿದ ಹುಬ್ಬಳ್ಳಿ ಟೈಗರ್ಸ್ ಹಾಗೂ ಮಂಗಳೂರು ಯುನೈಟೆಡ್ ಪಂದ್ಯ
ಇನ್ನು ಇಂದು ನಡೆಯಲಿರುವ ಶಿವಮೊಗ್ಗ ಸ್ಟ್ರೈಕರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ನಡುವಿನ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಉತ್ತಮ ಅಂತರದಿಂದ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ ಹಾಗೂ ಒಂದುವೇಳೆ ಶಿವಮೊಗ್ಗ ಸ್ಟ್ರೈಕರ್ಸ್ ಗೆದ್ದರೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎನ್ನಬಹುದು. ಈ ಪಂದ್ಯ ಮುಕ್ತಾಯವಾದ ಬಳಿಕ ನಡೆಯಲಿರುವ ಲೀಗ್ ಹಂತದ ಅಂತಿಮ ಪಂದ್ಯವಾದ ಮಂಗಳೂರು ಯುನೈಟೆಡ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಹಣಾಹಣಿ ದೊಡ್ಡ ಮಟ್ಟದ ಕುತೂಹಲವನ್ನು ಹುಟ್ಟುಹಾಕಿದೆ. ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಪ್ಲೇಆಫ್ ಸುತ್ತಿಗೆ ಲಗ್ಗೆ ಇಡಲಿದ್ದು, ಸೋಲಲಿರುವ ತಂಡ ಐದನೇ ಸ್ಥಾನಕ್ಕೆ ತೃಪತಿಪಟ್ಟುಕೊಂಡು ಲೀಗ್ ಹಂತಕ್ಕೆ ತನ್ನ ಪಯಣವನ್ನು ಮುಗಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications