Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ 2023: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ

ಭಾನುವಾರ, ಆಗಸ್ಟ್ 13ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಸೆಣಸಾಡುತ್ತಿವೆ.

ಟಾಸ್ ಗೆದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕ ವಿಜಯ್‌ಕುಮಾರ್ ವೈಶಾಕ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮೊದಲು ಬ್ಯಾಟಿಂಗ್ ಆರಂಭಿಸಲಿದೆ.

Maharaja Trophy 2023: Bengaluru Blasters vs Gulbarga Mystics Match Toss Report, Playing 11

ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಗಾಯದಿಂದಾಗಿ ಪಂದ್ಯಾವಳಿಯಿಂದಲೇ ಹೊರಗುಳಿಸಿದ್ದಾರೆ. ಈ ಬಗ್ಗೆ ನಾಯಕ ವಿಜಯ್‌ಕುಮಾರ್ ವೈಶಾಕ್ ಖಚಿತಪಡಿಸಿದರು.

2023ರ ಮಹಾರಾಜ ಟ್ರೋಫಿ ಪಂದ್ಯಾವಳಿಯ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ

ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 2 (HD ಮತ್ತು SD) ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇನ್ನು Star Sports Kannada ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.

ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಆಡುವ 11ರ ಬಳಗ

ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್ (ನಾಯಕ), ದೇಗಾ ನಿಶ್ಚಲ್, ಜೆಸ್ವತ್ ಆಚಾರ್ಯ, ಪವನ್ ದೇಶಪಾಂಡೆ, ಸೂರಜ್ ಅಹುಜಾ (ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ರಿಷಿ ಬೋಪಣ್ಣ, ಪ್ರದೀಪ್ ಟಿ, ಲೋಚನ್ ಅಪ್ಪಣ್ಣ, ಎಲ್ಆರ್ ಕುಮಾರ್, ಗೌರವ್

ಗುಲ್ಬರ್ಗ ಮಿಸ್ಟಿಕ್ಸ್: ವಿಜಯಕುಮಾರ್ ವೈಶಾಕ್ (ನಾಯಕ), ಆದರ್ಶ್ ಪ್ರಜ್ವಲ್ (ವಿಕೆಟ್ ಕೀಪರ್), ಎಲ್ಆರ್ ಚೇತನ್, ಸ್ಮರಣ್ ಆರ್, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ಅವಿನಾಶ್ ಡಿ, ಶರಣ್ ಗೌಡ್, ಕೆಪಿ ಅಪ್ಪಣ್ಣ, ಅನೀಶ್ ಕೆವಿ, ಅಭಿಲಾಷ್ ಶೆಟ್ಟಿ, ಅಮಿತ್ ವರ್ಮಾ.

Story first published: Sunday, August 13, 2023, 13:21 [IST]
Other articles published on Aug 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+