For Quick Alerts
ALLOW NOTIFICATIONS  
For Daily Alerts
 

Maharaja Trophy 2023: ಗುಲ್ಬರ್ಗ ಮಿಸ್ಟಿಕ್ಸ್ ಆಲ್ರೌಂಡ್ ಆಟ; ಬೆಂಗಳೂರು ಬ್ಲಾಸ್ಟರ್ಸ್‌ಗೆ ತಪ್ಪದ ಸೋಲಿನ ಸರಪಳಿ

ಗುರುವಾರ, ಆಗಸ್ಟ್ 24ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 5 ವಿಕೆಟ್‌ಗಳ ಸುಲಭದ ಗೆಲುವು ಸಾಧಿಸಿತು.

ವಿಜಯಕುಮಾರ್ ವೈಶಾಕ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದರೆ, ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸೋಲಿನ ಸರಪಳಿಯಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ.

Maharaja Trophy 2023: Gulbarga Mystics Won By 5 Wickets Against Bangalore Blasters In 24th Match

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ದೆಗಾ ನಿಶ್ಚಲ್ ಅವರ 36 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ 19.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು.

114 ರನ್‌ಗಳ ಸುಲಭದ ಗುರಿ ಬೆನ್ನಟ್ಟಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ 14.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 114 ರನ್ ಗಳಿಸುವ ಮೂಲಕ ಇನ್ನೂ 5 ವಿಕೆಟ್ ಮತ್ತು 5 ಓವರ್‌ಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಆರಂಭಿಕರಾದ ಭುವನ್ ರಾಜು 10 ರನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ 15 ರನ್ ಗಳಿಸಿದರು. ಈ ಆರಂಭಿಕ ಮತ್ತೊಮ್ಮೆ ದೊಡ್ಡ ಜೊತೆಯಾಟ ನಿರ್ಮಿಸಲು ವಿಫಲರಾದರು.

ಬಳಿಕ ಬಂದ ದೆಗಾ ನಿಶ್ಚಲ್ 33 ಎಸೆತಗಳಲ್ಲಿ 36 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನು ಲೋಚನ್ ಅಪ್ಪಣ್ಣ 3 ರನ್, ಶುಭಾಂಗ್ ಹೆಗ್ಡೆ 8 ರನ್, ಸೂರಜ್ ಅಹುಜಾ 15 ರನ್, ಸರ್ಫರಾಜ್ ಅಶ್ರಫ್ 4 ರನ್, ಅಮನ್ ಖಾನ್ 18 ರನ್, ರಿಷಿ ಬೋಪಣ್ಣ 1 ರನ್, ಎಲ್ಆರ್ ಕುಮಾರ್ 1 ರನ್ ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಪರ 4 ಓವರ್‌ಗಳಲ್ಲಿ 19 ರನ್ ನೀಡಿ 3 ಕಬಳಿಸಿದರೆ, ಅವಿನಾಶ್ ಡಿ 3.3 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಶರಣ್ ಗೌಡ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಿತ್ತರು.

ಇನ್ನು 114 ರನ್‌ಗಳ ಗುರಿ ಚೇಸ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಎಲ್‌ಆರ್ ಚೇತನ್ 18 ರನ್, ಆದರ್ಶ್ ಪ್ರಜ್ವಲ್ 4 ರನ್, ಮ್ಯಾಕ್ನೆಲ್ ನೊರಾನ್ನಾ 28 ರನ್, ಸ್ಮರಣ್ ಆರ್ 29 ರನ್, ಅನೀಶ್ ಕೆವಿ 17 ರನ್, ಅಮಿತ್ ವರ್ಮಾ 11 ರನ್ ಶ್ರೀನಿವಾಸ್ ಶರತ್ 2 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಎಲ್ಆರ್ ಕುಮಾರ್, ಶುಭಾಂಗ್ ಹೆಗ್ಡೆ, ತನೀಶ್ ಮಹೇಶ್, ಸರ್ಫರಾಜ್ ಅಶ್ರಫ್ ಮತ್ತು ರಿಷಿ ಬೋಪಣ್ಣ ತಲಾ ಒಂದೊಂದು ವಿಕೆಟ್ ಪಡೆದರು.

Story first published: Thursday, August 24, 2023, 21:33 [IST]
Other articles published on Aug 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+