Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ 2023: ಮೈಸೂರು ವಾರಿಯರ್ಸ್ ವಿರುದ್ಧ ಗೆದ್ದು ಬೀಗಿದ ಹುಬ್ಬಳ್ಳಿ ಟೈಗರ್ಸ್

ಭಾನುವಾರ, ಆಗಸ್ಟ್ 13ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡವು (ವಿಜೆಡಿ ವಿಧಾನದ ಮೂಲಕ) 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸಿತು. ಸುಲಭದ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ 8.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತು.

Maharaja Trophy 2023: Hubballi Tigers Beat Mysore Warriors By 9 Wickets in VJD Method

ಈ ವೇಳೆ ಮಳೆ ಬಂದು ಪಂದ್ಯಕ್ಕೆ ಅಡ್ಡಿಪಡಿಸಿದಾಗ ವಿಜೆಡಿ ವಿಧಾನದ ಮೂಲಕ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ವಿಜಯಿಶಾಲಿ ಎಂದು ಘೋಷಿಸಲಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡದ 21 ರನ್, ನಾಯಕ ಕರುಣ್ ನಾಯರ್ 7 ರನ್, ರಾಹುಲ್ ರಾವತ್ 12 ರನ್, ಶಿವಕುಮಾರ್ ರಕ್ಷಿತ್ 2 ರನ್, ಮನೋಜ್ ಭಾಂಡಗೆ 5 ರನ್, ಜಗದೀಶ್ ಸುಚಿತ್ 20 ರನ್, ಭರತ್ ಧುರಿ 16 ರನ್, ಎಂ ವೆಂಕಟೇಶ್ 16 ರನ್ ಮತ್ತು ಶಶಿಕುಮಾರ್ 6 ರನ್ ಗಳಿಸಿದರು.

ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಬೌಲಿಂಗ್‌ನಲ್ಲಿ ಮಿತ್ರಕಾಂತ್ ಯಾದವ್ 4 ಓವರ್‌ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ 4 ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್, ಲಾವಿಶ್ ಕುಶಾಲ್ 3 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಕೆಸಿ ಕಾರಿಯಪ್ಪ ಮತ್ತು ಪ್ರವೀಣ್ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.

ಮೈಸೂರು ವಾರಿಯರ್ಸ್ ತಂಡ ನೀಡಿದ್ದ 112 ರನ್‌ಗಳ ಗುರಿ ಚೇಸ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಲುವ್ನಿತ್ ಸಿಸೋಡಿಯಾ ಸೊನ್ನೆಗೆ ಔಟಾದರು. ಆದರೆ, ಮೊಹಮ್ಮದ್ ತಾಹ 30 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 61 ರನ್ ಗಳಿಸಿದರು. ಕೃಷ್ಣನ್ ಶ್ರೀಜಿತ್ 17 ರನ್ ಗಳಿಸಿದರು.

ಹುಬ್ಬಳ್ಳಿ ಟೈಗರ್ಸ್ ತಂಡದ ಪರ 3 ವಿಕೆಟ್ ಪಡೆದ ಮಿತ್ರಕಾಂತ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Sunday, August 13, 2023, 22:28 [IST]
Other articles published on Aug 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+