ಮಹಾರಾಜ ಟ್ರೋಫಿ 2023: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಸತತ 3ನೇ ಜಯ; ಬೆಂಗಳೂರು ತಂಡಕ್ಕೆ 3ನೇ ಸೋಲು
ಬುಧವಾರ, ಆಗಸ್ಟ್ 16ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಏಳನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡವು 5 ರನ್‌ಗಳ ಸುಲಭ ಗೆಲುವು ಸಾಧಿಸಿತು.
ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಪಂದ್ಯಾವಳಿಯಲ್ಲಿ ಸತತ ಮೂರನೇ ಅನುಭವಿಸಿ, ಅಂಕಪಟ್ಟಿಯಲ್ಲಿ ಇನ್ನೂ ಖಾತೆ ತೆರೆದಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 18.4 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು. 106 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ 13.3 ಓವರ್‌ಗಳಲ್ಲಿ 5 ವಿಕೆಟ್‌ಗೆ 111 ರನ್ ಗಳಿಸಿ 5 ವಿಕೆಟ್‌ಗಳ ಗೆಲುವು ಕಂಡಿತು.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬ್ಯಾಟಿಂಗ್ ಆರಂಭಿಸಿದ ಭುವನ್ ರಾಜು 11 ರನ್ ಗಳಿಸಿ ಔಟಾದರೆ, ನಾಯಕ ಮಯಾಂಕ್ ಅಗರ್ವಾಲ್ ಮಾತ್ರ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.
ನಂತರ ಬಂದ, ಜೆಸ್ವಂತ್ ಆಚಾರ್ಯ 7 ರನ್, ಪವನ್ ದೇಶಪಾಂಡೆ 1 ರನ್, ಸೂರಜ್ ಅಹುಜಾ 14 ರನ್, ಶುಭಾಂಗ್ ಹೆಗ್ಡೆ 7 ರನ್, ಲೋಚನ್ ಅಪ್ಪಣ್ಣ 2 ರನ್, ಆಶಿಶ್ ಮಹೇಶ್ 2 ರನ್, ಎಲ್ ಆರ್ ಕುಮಾರ್ 6 ರನ್, ಪ್ರದೀಪ್ ಟಿ 2 ರನ್ ಗಳಿಸಿದರು.
ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಬೌಲಿಂಗ್‌ನಲ್ಲಿ ಮನ್ವಂತ್ ಕುಮಾರ್ 4 ಓವರ್‌ಗಳಲ್ಲಿ 15 ರನ್, ನೀಡಿ 4 ವಿಕೆಟ್ ಕಬಳಿಸಿದರೆ, ಪ್ರವೀಣ್ ದುಬೆ 3 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಲಾವಿಶ್ ಕೌಶಾಲ್ ಮತ್ತು ಕೆಸಿ ಕಾರಿಯಪ್ಪ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು 106 ರನ್‌ಗಳ ಚೇಸ್ ಮಾಡಲು ಬ್ಯಾಟಿಂಗ್ ಆರಂಭಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಆರಂಭಿಕ ಲುವ್ನಿತ್ ಸಿಸೋಡಿಯಾ 33 ರನ್, ಮೊಹಮ್ಮದ್ ತಾಹ 10 ರನ್, ಕೃಷ್ಣನ್ ಶ್ರೀಜಿತ್ 8 ರನ್, ಮನೀಶ್ ಪಾಂಡೆ 23 ರನ್, ಮನ್ವಂತ್ ಕುಮಾರ್ 28 ರನ್, ಪ್ರವೀಣ್ ದುಬೆ 2 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಬೌಲಿಂಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸರ್ಫರಾಜ್ ಅಶ್ರಫ್ 3 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರೆ, ಶುಭಾಂಗ್ ಹೆಗ್ಡೆ, ರಿಷಿ ಬೋಪಣ್ಣ ಮತ್ತು ಎಲ್ಆರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications