ಮಹಾರಾಜ ಟ್ರೋಫಿ 2023: ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
ಭಾನುವಾರ, ಆಗಸ್ಟ್ 14ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ತಂಡದ ನಾಯಕ ಕೃಷ್ಣಪ್ಪ ಗೌತಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡ ಮೊದಲು ಬ್ಯಾಟಿಂಗ್ ಆರಂಭಿಸಲಿದೆ.

2023ರ ಮಹಾರಾಜ ಟ್ರೋಫಿ ಪಂದ್ಯಾವಳಿಯ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 2 (HD ಮತ್ತು SD) ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.
ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್ ಆಡುವ 11ರ ಬಳಗ
ಶಿವಮೊಗ್ಗ ಲಯನ್ಸ್: ರೋಹನ್ ಕದಂ, ನಿಹಾಲ್ ಉಳ್ಳಾಲ್(ವಿಕೆಟ್ ಕೀಪರ್), ರೋಹಿತ್ ಕುಮಾರ್ ಕೆ, ಅಭಿನವ್ ಮನೋಹರ್, ಎಸ್ ಶಿವರಾಜ್, ನಿಶ್ಚಿತ್ ಎನ್ ರಾವ್, ಶ್ರೇಯಸ್ ಗೋಪಾಲ್(ನಾಯಕ), ಕ್ರಾಂತಿ ಕುಮಾರ್, ಎಚ್.ಎಸ್ ಶರತ್, ಪ್ರಣವ್ ಭಾಟಿಯಾ, ವಾಸುಕಿ ಕೌಶಿಕ್.
ಮಂಗಳೂರು ಡ್ರಾಗನ್ಸ್: ನಿಕಿನ್ ಜೋಸ್, ಶರತ್ ಬಿಆರ್(ವಿಕೆಟ್ ಕೀಪರ್), ಕೃಷ್ಣಮೂರ್ತಿ ಸಿದ್ಧಾರ್ಥ್, ಅನಿರುದ್ಧ ಜೋಶಿ, ಧೀರಜ್ ಜೆ ಗೌಡ, ಕೃಷ್ಣಪ್ಪ ಗೌತಮ್(ನಾಯಕ), ಆನಂದ್ ದೊಡ್ಡಮನಿ, ಅನೀಶ್ವರ್ ಗೌತಮ್, ಆದಿತ್ಯ ಗೋಯಲ್, ಪ್ರತೀಕ್ ಜೈನ್, ನವೀನ್ ಎಂ.ಜಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications