ಮಹಾರಾಜ ಟ್ರೋಫಿ 2023: ಕರುಣ್ ಭರ್ಜರಿ ಬ್ಯಾಟಿಂಗ್; ಶಿವಮೊಗ್ಗ ಲಯನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಮೈಸೂರು
ಶುಕ್ರವಾರ, ಆಗಸ್ಟ್ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಹನ್ನೊಂದನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡವು 12 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡದ ಅಜೇಯ ಗೆಲುವಿನ ಓಟಕ್ಕೆ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡ ಬ್ರೇಕ್ ಹಾಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
191 ರನ್‌ಗಳ ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡವು 20 ಓವರ್‌ಗಳಲ್ಲಿ 9 ನಷ್ಟಕ್ಕೆ 178 ರನ್ ಗಳಿಸಿ ಭರ್ಜರಿ 12 ರನ್‌ಗಳಿಂದ ಸೋಲು ಅನುಭವಿಸಿತು.
ನಂತರ ಬಂದ ನಾಯಕ ಕರುಣ್ ನಾಯರ್ 33 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿದರು. ರಾಹುಲ್ ರಾವತ್ 10 ರನ್, ಜಗದೀಶ್ ಸುಚಿತ್ 6 ರನ್, ಶಿವಕುಮಾರ್ ರಕ್ಷಿತ್ 6 ರನ್, ತುಷಾರ್ ಸಿಂಗ್ 12 ರನ್, ಮನೋಜ್ ಭಾಂಡಗೆ 12 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಬಿರುಸಿನ 29 ರನ್ ಬಾರಿಸಿ ತಂಡದ ಮೊತ್ತವನ್ನು 190ಕ್ಕೆ ಏರಿಸಿದರು.

ಶಿವಮೊಗ್ಗ ಲಯನ್ಸ್ ತಂಡದ ಪರ ಬೌಲಿಂಗ್‌ನಲ್ಲಿ ವಾಸುಕಿ ವೈಭವ್ 4 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರೆ, ಕ್ರಾಂತಿ ಕುಮಾರ್ 2 ವಿಕೆಟ್ ಪಡೆದರು. ಉಳಿದಂತೆ ನಿಶ್ಚಿತ್ ರಾವ್, ಹೆಚ್ಎಸ್ ಶರತ್, ಪ್ರಣವ್ ಭಾಟಿಯಾ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
191 ರನ್‌ಗಳ ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡದ ಆರಂಭಿಕರಾದ ರೋಹನ್ ಕದಂ 31 ರನ್, ನಿಹಾಲ್ ಉಳ್ಳಾಲ 11 ರನ್ ಗಳಿಸಿದರು. ರೋಹಿತ್ ಕುಮಾರ್ 3 ರನ್, ರೋಹನ್ ನವೀನ್ 28 ರನ್, ಅಭಿನವ್ ಮನೋಹರ್ 26 ರನ್, ಶ್ರೇಯಸ್ ಗೋಪಾಲ್ 26 ರನ್, ಕ್ರಾಂತಿ ಕುಮಾರ್ 8 ರನ್, ಶಿವರಾಜ್ 13 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 29 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಮುರುಳೀಧರ್ ವೆಂಕಟೇಶ್ 3 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರೆ, ಮೋನಿಶ್ ರೆಡ್ಡಿ 2 ವಿಕೆಟ್, ಕೋದಂಡ ಅಜಿತ್ ಕಾರ್ತಿಕ್ 2 ವಿಕೆಟ್ ಪಡೆದರು. ಶ್ರೀಶ ಆಚಾರ್ ಮತ್ತು ಮನೋಜ್ ಭಾಂಡಗೆ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಸ್ಫೋಟಕ ಅರ್ಧಶತಕ ಬಾರಿಸಿದ ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications