Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ 2023: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ

ಭಾನುವಾರ, ಆಗಸ್ಟ್ 13ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿಯಾಗಿವೆ.

ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಮನೀಶ್ ಪಾಂಡೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದ್ದರಿಂದ, ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡ ಮೊದಲು ಬ್ಯಾಟಿಂಗ್ ಆರಂಭಿಸಲಿದೆ.

Maharaja Trophy 2023: Mysore Warriors vs Hubballi Tigers Match Toss Report, Playing 11, Live Score

ಇನ್ನು ಭಾರತ ತಂಡಕ್ಕೆ ಪುನರಾಗಮನ ಮಾಡಲು ಎದುರು ನೋಡುತ್ತಿರುವ ಪ್ರಸಿದ್ಧ್ ಕೃಷ್ಣ ಮೈಸೂರು ವಾರಿಯರ್ಸ್ ತಂಡದ ಪರ ಆಡುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಸುದೀರ್ಘ ವಿಶ್ರಾಂತಿಯಿಂದ ಮರಳಿ ಮೈದಾನಕ್ಕೆ ಕಾಲಿಟ್ಟಿದ್ದಾರೆ.

2023ರ ಮಹಾರಾಜ ಟ್ರೋಫಿ ಪಂದ್ಯಾವಳಿಯ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 2 (HD ಮತ್ತು SD) ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.

ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ ಆಡುವ 11ರ ಬಳಗ

ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ(ವಿಕೆಟ್ ಕೀಪರ್), ಮೊಹಮ್ಮದ್ ತಾಹಾ, ಮನೀಶ್ ಪಾಂಡೆ(ನಾಯಕ), ನಾಗ ಭರತ್, ಪ್ರವೀಣ್ ದುಬೆ, ಮನ್ವಂತ್ ಕುಮಾರ್ ಎಲ್, ಎಂಬಿ ದರ್ಶನ್, ಕೆಸಿ ಕಾರಿಯಪ್ಪ, ವಿಧ್ವತ್ ಕಾವೇರಪ್ಪ, ಮಿತ್ರಕಾಂತ್ ಯಾದವ್, ಲವಿಶ್ ಕೌಶಲ್.

ಮೈಸೂರು ವಾರಿಯರ್ಸ್: ಕರುಣ್ ನಾಯರ್(ನಾಯಕ), ರವಿಕುಮಾರ್ ಸಮರ್ಥ್, ಕೋದಂಡ ಅಜಿತ್ ಕಾರ್ತಿಕ್, ಶಿವಕುಮಾರ್ ರಕ್ಷಿತ್(ವಿಕೆಟ್ ಕೀಪರ್), ರಾಹುಲ್ ರಾವತ್, ಮನೋಜ್ ಭಾಂಡಗೆ, ತುಷಾರ್ ಸಿಂಗ್, ಜಗದೀಶ ಸುಚಿತ್, ಮುರಳೀಧರ ವೆಂಕಟೇಶ್, ಶಶಿಕುಮಾರ್ ಕೆ, ಪ್ರಸಿದ್ಧ್ ಕೃಷ್ಣ.

Story first published: Sunday, August 13, 2023, 17:42 [IST]
Other articles published on Aug 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+