Maharaja Trophy 2023: ಶಿವಮೊಗ್ಗ ಲಯನ್ಸ್ ಆಲ್‌ರೌಂಡ್ ಪ್ರದರ್ಶನ; ಮೈಸೂರು ವಾರಿಯರ್ಸ್‌ಗೆ ಸೋಲು
ಮಂಗಳವಾರ, ಆಗಸ್ಟ್ 22ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ 20ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಶಿವಮೊಗ್ಗ ಲಯನ್ಸ್ ತಂಡವು ಕೊನೆಯ ಓವರ್‌ನಲ್ಲಿ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡವು ಮತ್ತೆ ಗೆಲುವಿನ ಹಳಿಗೆ ಮರಳಿದ್ದರೆ, ತನ್ನ ಕೊನೆಯ ಪಂದ್ಯದಲ್ಲಿ ಗೆದ್ದಿದ್ದ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವು ಮತ್ತೆ ಸೋಲಿನತ್ತ ಮುಖ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು.
163 ರನ್‌ಗಳ ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡ ನಿಹಾಲ್ ಉಳ್ಳಾಲ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸುವ ಮೂಲಕ ಕೊನೆಯ ಓವರ್‌ನಲ್ಲಿ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.
ಮೈಸೂರು ವಾರಿಯರ್ಸ್ ತಂಡ ಪರ ಬ್ಯಾಟಿಂಗ್‌ನಲ್ಲಿ ರವಿಕುಮಾರ್ ಸಮರ್ಥ್ 17 ರನ್, ಕಾರ್ತಿಕ್ ಸಿಎ 14 ರನ್, ನಾಯಕ ಕರುಣ್ ನಾಯರ್ 33 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 46 ರನ್ ಗಳಿಸಿದರೆ, ಲಂಕೇಶ್ ಕೆಎಸ್ 25 ರನ್, ಎಸ್ ಮನಗೇರ್ 14 ರನ್ ಮನೋಜ್ ಭಾಂಡಗೆ 20 ರನ್, ಜೆ ಸುಚಿತ್ 18 ರನ್ ಬಾರಿಸಿ ತಂಡದ ಮೊತ್ತ 160ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಪರ ವಾಸುಕಿ ಕೌಶಿಕ್ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರೆ, ಕ್ರಾಂತಿ ಕುಮಾರ್ 4 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಶ್ರೇಯಸ್ ಗೋಪಾಲ್, ದೀಪಕ್ ದೇವಾಡಿಗ ಮತ್ತು ಪ್ರಣವ್ ಭಾಟಿಯಾ ತಲಾ ಒಂದೊಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಚೇಸ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡದ ಪರ ಆರಂಭಿಕರಾದ ರೋಹನ್ ಕದಂ 15 ರನ್ ಗಳಿಸಿದರೆ, ನಿಹಾಲ್ ಉಳ್ಳಾಲ 39 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 45 ರನ್ ಗಳಿಸದರು.
ಇನ್ನು ರೋಹನ್ ನವೀನ್ 10 ರನ್, ರೋಹಿತ್ ಕುಮಾರ್ 12 ರನ್, ಅಭಿನವ್ ಮನೋಹರ್ 27 ರನ್, ಕ್ರಾಂತಿ ಕುಮಾರ್ ಅಜೇಯ 20 ರನ್, ಎಸ್ ಶಿವರಾಜ್ ಅಜೇಯ 20 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
20 ರನ್ ಗಳಿಸುವದಕ್ಕೂ ಮುನ್ನ 2 ವಿಕೆಟ್ ಪಡೆದ ಶಿವಮೊಗ್ಗ ಲಯನ್ಸ್ ತಂಡದ ಕ್ರಾಂತಿ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನು ಮೈಸೂರು ವಾರಿಯರ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬುಧವರಾ, ಆಗಸ್ಟ್ 23ರಂದು ಮಂಗಳೂರು ಡ್ರಾಗನ್ಸ್ ವಿರುದ್ಧ ಸೆಣಸಾಡಲಿದ್ದರೆ, ಶಿವಮೊಗ್ಗ ಲಯನ್ಸ್ ತಂಡವು ಗುರುವಾರ, ಆಗಸ್ಟ್ 24ರಂದು ಮಂಗಳೂರು ಡ್ರಾಗನ್ಸ್ ಕಾದಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications