Maharaja Trophy 2024: '"ವಾ" ಸೀಮ್' ಬೌಲಿಂಗ್‌ಗೆ ಬೆನ್ನು ತಟ್ಟಿದ ಪಾಕ್ ದಿಗ್ಗಜ
ಆಗಸ್ಟ್ 18 ಭಾನುವಾರ, ವಿಶ್ವ ಕ್ರಿಕೆಟ್‌ನಲ್ಲಿ ಹಲವಾರು ಸ್ವಿಂಗ್ ಬೌಲರ್‌ಗಳು ಬಂದು ಹೋಗಿದ್ದಾರೆ. ಆದರೆ ಎಷ್ಟೋ ಬೌಲರ್‌ಗಳು ಪಾಕಿಸ್ತಾನ ತಂಡದ ದಿಗ್ಗಜ ಕ್ರಿಕೆಟಿಗ ವಾಸಿಮ್ ಅಕ್ರಮ್ ರೀತಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡಬೇಕೆಂದು ಕನಸು ಕಾಣುತ್ತಿರುತ್ತಾರೆ. ಅಲ್ಲದೆ ಅವರಿಂದ ಭೇಷ್ ಎನಿಸಿಕೊಳ್ಳಬೇಕು ಎಂದು ಕಾಯುತ್ತಿರುತ್ತಾರೆ.
90ರ ದಶಕದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೆಯಾದ ಛಾಪು ಮೂಡಿಸಿದ್ದ ಸ್ವಿಂಗ್ ಸುಲ್ತಾನ ವಾಸಿಮ್ ಅಕ್ರಮ್ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಅವರ ಬೌಲಿಂಗ್ ಅನ್ನು ಎದುರಿಸುವುದು ಬ್ಯಾಟರ್‌ಗಳಿಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಅವರ ಬೌಲಿಂಗ್‌ನಲ್ಲಿ ವೇಗ ಇರಲಿಲ್ಲ, ಚೆಂಡನ್ನು ಎರಡು ಕಡೆ ಸ್ವಿಂಗ್ ಮಾಡುವ ಕಲೆ ಗೊತ್ತಿತ್ತು.

ಇಂತಹ ಬೌಲರ್ ಪ್ರತಿ ತಂಡದಲ್ಲೂ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇದೀಗ ವಾಸಿಮ್ ಅಕ್ರಮ್ ಅವರು ಕರ್ನಾಟಕದ ಬೌಲರ್ ಬೆನ್ನು ತಟ್ಟಿರುವುದು ಸಣ್ಣ ವಿಷಯವೇ ಅಲ್ಲ. ಅಷ್ಟಕ್ಕೂ ಪಾಕಿಸ್ತಾನದ ದಿಗ್ಗಜ ಕರ್ನಾಟಕದ ಬೌಲರ್ ಬೆನ್ನು ತಟ್ಟಿರುವುದು ಏಕೆ ಗೊತ್ತಾ?. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Maharaja Trophy 2024: ಆರ್‌ಸಿಬಿಯಲ್ಲಿ ಬೆಂಚ್ ಕಾಯುತ್ತಿದ್ದ 'ಮಹಾರಾಜ' ಮನೋಜ್ ಅಬ್ಬರ
2024ರ ಮಹಾರಾಜ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ ಮತ್ತು ಶಿವಮೊಗ್ಗ ಲಯನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ನಾಯಕ ನಿಹಾಲ್ ಉಳ್ಳಾಲ್‌ರನ್ನು ಮೊದಲ ಓವರ್‌ನಲ್ಲೇ ಮಂಗಳೂರು ಡ್ರ್ಯಾಗನ್ ತಂಡದ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಡಕ್ ಔಟ್ ಮಾಡಿದರು.
ನಿಹಾಲ್ ಉಳ್ಳಾಲ್ ಅವರಿಗೆ ಔಟ್ ಸ್ವಿಂಗ್ ಬೌಲ್ ಮಾಡುವ ಮೂಲಕ ಅಭಿಲಾಷ್ ಶೆಟ್ಟಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಕರ್ನಾಟಕದ ಬೌಲರ್‌ಗೆ ವಾಸಿಮ್ ಅಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಅಭಿಷೇಕ್ ಶೆಟ್ಟಿ ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications