ಮಹಾರಾಜ ಟ್ರೋಫಿ: ಅಜೇಯ 91 ರನ್ ಸಿಡಿಸಿದ ಕರುಣ್ ನಾಯರ್; ಹುಬ್ಬಳ್ಳಿಗೆ ಸೋಲುಣಿಸಿದ ಮೈಸೂರು!

2019ರವರೆಗೂ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಒಂಬತ್ತು ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಬೋರ್ಡ್ ನಂತರ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಆರೋಪಗಳಿಂದಾಗಿ ಟೂರ್ನಿಯನ್ನು ನಿಲ್ಲಿಸಿತ್ತು. ಹೀಗೆ ಜನಪ್ರಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೈಬಿಟ್ಟಿದ್ದ ರಾಜ್ಯ ಕ್ರಿಕೆಟ್ ಬೋರ್ಡ್ ಇದೀಗ ನೂತನ ಟಿ ಟ್ವೆಂಟಿ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಿದ್ದು ಇದಕ್ಕೆ ಮಹಾರಾಜ ಟ್ರೋಫಿ ಎಂದು ನಾಮಕರಣ ಮಾಡಿದೆ.
ಈ ಮಹಾರಾಜ ಟ್ರೋಫಿಯನ್ನೂ ಸಹ ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಆಯೋಜಿಸಲಾಗಿದ್ದು, ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಸ್ಟ್ರೈಕರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಮಂಗಳೂರು ಯುನೈಟೆಡ್ ಹೀಗೆ ಆರು ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿವೆ. ಕಳೆದ ಆಗಸ್ಟ್ 7ರ ಭಾನುವಾರದಂದು ನಡೆದ ಮಂಗಳೂರು ಯುನೈಟೆಡ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಿನ ಪಂದ್ಯದ ಮೂಲಕ ಆರಂಭವಾದ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆರಂಭವಾಗಿದ್ದು, ಇಂದು ( ಆಗಸ್ಟ್ 10 ) ನಡೆದ ಟೂರ್ನಿಯ ಏಳನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ಹತ್ತು ವಿಕೆಟ್‌ಗಳ ಜಯವನ್ನು ಸಾಧಿಸಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿ ಎದುರಾಳಿ ಮೈಸೂರು ವಾರಿಯರ್ಸ್ ತಂಡಕ್ಕೆ 141 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಅತ್ತ ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಮೈಸೂರು ವಾರಿಯರ್ಸ್ 15.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 141 ರನ್ ಕಲೆಹಾಕಿ ಹತ್ತು ವಿಕೆಟ್‌ಗಳ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡು ಎದುರಾಳಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲುವ್ನಿತ್ ಸಿಸೋಡಿಯಾ 38 ರನ್ ಕಲೆಹಾಕಿದರೆ, ಬಿಯು ಶಿವಕುಮಾರ್ 6 ರನ್ ಕಲೆಹಾಕಿದರು. ಇನ್ನುಳಿದಂತೆ ನವೀನ್ ಎಂಜಿ 5 ರನ್, ಲಿಯಾನ್ ಖಾನ್ 26, ಶಿಶಿರ್ ಭವಾನೆ 1 ( ರಿಟೈರ್ಡ್ ಹರ್ಟ್), ಸಾಗರ್ ಸೋಲಂಕಿ 8 ರನ್, ನಾಯಕ ಅಭಿಮನ್ಯು ಮಿಥುನ್ 7 ರನ್ ಕಲೆಹಾಕಿದರು. ಅಂತಿಮವಾಗಿ ತುಷಾರ್ ಸಿಂಗ್ 18 ಎಸೆತಗಳಲ್ಲಿ 36 ರನ್ ಸಿಡಿಸಿ ಅಬ್ಬರಿಸಿದ ಅಜೇಯರಾಗಿ ಉಳಿದರೆ, ಸೌರಭ್ ಶ್ರೀವಾಸ್ತವ್ ಅಜೇಯ 3 ರನ್ ಕಲೆಹಾಕಿದರು.

ವಿಕೆಟ್ ನಷ್ಟವಿಲ್ಲದೇ ಗೆದ್ದ ಮೈಸೂರು
ಇನ್ನು ಹುಬ್ಬಳ್ಳಿ ಟೈಗರ್ಸ್ ನೀಡಿದ ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಮೈಸೂರು ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಿಹಾಲ್ ಉಳ್ಳಾಲ್ ಮತ್ತು ನಾಯಕ ಕರುಣ್ ನಾಯರ್ ವಿಕೆಟ್ ಕಳೆದುಕೊಳ್ಳದೇ ಇನ್ನೂ 4.1 ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿದರು. ನಿಹಾಲ್ ಉಳ್ಳಾಲ್ 43 ಎಸೆತಗಳಲ್ಲಿ ಅಜೇಯ 48 ರನ್ ಕಲೆಹಾಕಿದರೆ, ನಾಯಕ ಕರುಣ್ ನಾಯರ್ 11 ಫೋರ್ ಮತ್ತು 3 ಸಿಕ್ಸರ್ ಸೇರಿದಂತೆ 52 ಎಸೆತಗಳಲ್ಲಿ ಅಜೇಯ 91 ರನ್ ಕಲೆಹಾಕಿದರು. ಈ ಮೂಲಕ ಮೈಸೂರು ವಾರಿಯರ್ಸ್ ಭರ್ಜರಿ ಜಯ ಸಾಧಿಸಿದೆ.

ಆಡುವ ಬಳಗಗಳು
ಮೈಸೂರು ವಾರಿಯರ್ಸ್: ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕರುಣ್ ನಾಯರ್ (ನಾಯಕ), ನಾಗ ಭರತ್, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಶಿವರಾಜ್ ಎಸ್, ಶುಭಾಂಗ್ ಹೆಗ್ಡೆ, ವಿದ್ಯಾಧರ್ ಪಾಟೀಲ್, ಪ್ರತೀಕ್ ಜೈನ್, ಆದಿತ್ಯ ಗೋಯಲ್, ಲೋಚನ್ ಅಪ್ಪಣ್ಣ
ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ, ಬಿಯು ಶಿವ ಕುಮಾರ್, ಲಿಯಾನ್ ಖಾನ್, ನವೀನ್ ಎಂಜಿ, ತುಷಾರ್ ಸಿಂಗ್, ಶಿಶಿರ್ ಭವಾನೆ (ವಿಕೆಟ್ ಕೀಪರ್), ಅಭಿಮನ್ಯು ಮಿಥುನ್ (ನಾಯಕ), ವಾಸುಕಿ ಕೌಶಿಕ್, ಜಹೂರ್ ಫಾರೂಕಿ, ಸೌರಭ್ ಶ್ರೀವಾಸ್ತವ್, ಸಾಗರ್ ಸೋಲಂಕಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications