ಮಹಾರಾಜ ಟ್ರೋಫಿ: ಬೆಂಗಳೂರು ವಿರುದ್ಧ ಸಿಡಿದ ಸಿದ್ಧಾರ್ಥ್: ಮಂಗಳೂರು ಡ್ರ್ಯಾಗನ್ಸ್‌ಗೆ ಭರ್ಜರಿ ಗೆಲುವು
ಮಹಾರಾಜ ಟ್ರೋಫಿಯ 12ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತೊಂದು ಸೋಲು ಕಂಡಿದೆ. ಮಂಗಳೂರು ಡ್ರ್ಯಾಗನ್ಸ್ ತಮಡ ಬ್ಯಾಟಿಂಗ್‌ನಲ್ಲೊ ಅದ್ಭುತ ಯಶಸ್ಸು ಸಾಧಿಸಿದ್ದು ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನಿಡಿದ ಕಾರಣದಿಂದಾಗಿ 23 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡ್ರ್ಯಾಗನ್ಸ್ ಪರವಾಗಿ ಸಿದ್ಧಾರ್ಥ್ ಅಮೋಘ ಶತಕ ಸಿಡಿಸಿ ಗಮನಸೆಳೆದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಮಂಗಳೂರು ಡ್ರ್ಯಾಗನ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. 24 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡರೆ 31 ರನ್‌ಗೆ ಎರಡನೇ ವಿಕೆಟ್ ಕಲೆದುಕೊಂಡಿತು ಮಂಗಳೂರು ತಂಡ. ಆದರೆ ಆರಂಭಿಕ ಆಟಗಾರ ಸಿದ್ಧಾರ್ಥ್ ಹಾಗೂ ಬಿಯು ಶಿವಕುಮಾರ್ ಮತ್ತು ಕನೆಯ ಹಂತದಲ್ಲಿ ಅನಿರುದ್ಧ್ ಜೋಶಿ ಅಮೋಗ ಪ್ರದರ್ಶನ ನೀಡಿದ್ದು ಬೃಹತ್ ಮೊತ್ತಕ್ಕೆ ಕಾರಣವಾದರು.

ಸಿದ್ಧಾರ್ಥ್ ಕೊನೆಯವರೆಗೂ ಔಟಾಗದೆ ಉಳಿದಿದ್ದು 64 ಎಸೆತಗಳಲ್ಲಿ ಭರ್ಜರಿ 100 ರನ್‌ಗಳಿಸಿದರು. ಈ ಮ್ಯಾಚ್ ವಿನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸೇರಿತ್ತು. ಇನ್ನು ಶಿವಕುಮಾರ್ 30 ಎಸೆತಗಳಲ್ಲಿ 40 ರನ್ ಬಾರಿಸಿದರೆ ಅನಿರುದ್ಧ ಜೋಶಿ 18 ಎಸೆತಗಳಲ್ಲಿ 31 ರನ್ ಬಾರಿಸಿದರು. ಹೀಗಾಘಿ ನಿಗದಿತ 20 ಓವರ್‌ಗಳಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡ 3 ವಿಕೆಟ್ ಕಳೆದುಕೊಂಡು 194 ರನ್‌ಗಳನ್ನು ಕಲೆಹಾಕಿತು.
ಈ ಮೊತ್ತವನ್ನು ಬೆನ್ನಟ್ಟಿದ ಬೆಂಗಳುರು ಬ್ಲಾಸ್ಟರ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಿಬ್ಬರು ಕೂಡ 6 ರನ್‌ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಮಯಾಂಕ್ ಅಗರ್ವಾಲ್ ಶೂನ್ಯ ಸುತ್ತಿದರು. ಆದರೆ ದೆಗಾ ನಿಶ್ಚಲ್, ಶುಭಾಂಗ್ ಹೆಗ್ಡೆ ಮತ್ತು ಸೂರಜ್ ಅಹುಜಾ ಹೋರಾಟದ ಪ್ರದರ್ಶನ ನೀಡಿದರು. ನಿಶ್ಚಲ್ 61 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಬ್ಲಾಸ್ಟರ್ಸ್ 171 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿದ್ದು 23 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ಮಂಗಳೂರು ಡ್ರ್ಯಾಗನ್ಸ್: ಕೃಷ್ಣಮೂರ್ತಿ ಸಿದ್ಧಾರ್ಥ್, ರೋಹನ್ ಪಾಟೀಲ್, ಶರತ್ ಬಿಆರ್ (ವಿಕೆಟ್ ಕೀಪರ್), BU ಶಿವಕುಮಾರ್, ಅನಿರುದ್ಧ ಜೋಶಿ, ಕೃತಿಕ್ ಕೃಷ್ಣ, ಕೃಷ್ಣಪ್ಪ ಗೌತಮ್ (ನಾಯಕ), ನವೀನ್ ಎಂಜಿ, ಆದಿತ್ಯ ಗೋಯಲ್, ಪಾರಸ್ ಗುರ್ಬಾಕ್ಸ್ ಆರ್ಯ, ಸಂಕಲ್ಪ್ ಶೆಟ್ಟೆನ್ನವರ್
ಬೆಂಚ್: ಅನೀಶ್ವರ್ ಗೌತಮ್, ನಿಕಿನ್ ಜೋಸ್, ಧೀರಜ್ ಜೆ ಗೌಡ, ನಿಖಿಲ್ ಬರೆತ್, ಆನಂದ್ ದೊಡ್ಡಮನಿ, ಪ್ರತೀಕ್ ಜೈನ್, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಗೌರವ್ ಧಿಮಾನ್, ರೋನಿತ್ ಮೋರ್
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್ (ನಾಯಕ), ದೇಗಾ ನಿಶ್ಚಲ್, ಜೆಸ್ವತ್ ಆಚಾರ್ಯ, ಪವನ್ ದೇಶಪಾಂಡೆ, ಸೂರಜ್ ಅಹುಜಾ (ವಿಕೆಟ್ ಕೀಪರ್), ಲೋಚನ್ ಅಪ್ಪಣ್ಣ, ಶುಭಾಂಗ್ ಹೆಗ್ಡೆ, ರಿಷಿ ಬೋಪಣ್ಣ, ಪ್ರದೀಪ್ ಟಿ, ಸರ್ಫರಾಜ್ ಅಶ್ರಫ್, ಎಲ್ ಆರ್ ಕುಮಾರ್
ಬೆಂಚ್: ಭುವನ್ ರಾಜು, ಅಮನ್ ಖಾನ್, ವಿದ್ಯಾಧರ್ ಪಾಟೀಲ್, ಆರನ್ ಕ್ರಿಸ್ಟಿ, ಅಭಿಷೇಕ್ ಅಹ್ಲಾವತ್,
ಇಜೆ ಜಾಸ್ಪರ್, ಮೊಹ್ಸಿನ್ ಖಾನ್, ಗೌರವ್, ಅಭಿಮನ್ಯು ಮಿಥುನ್, ಆಶಿಶ್ ಮಹೇಶ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications