For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಲೀಗ್: ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರು; ಎಲ್ಲಾ 6 ಪೂರ್ಣ ತಂಡಗಳು

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಎರಡನೇ ಆವೃತ್ತಿಯು ಮುಂದಿನ ತಿಂಗಳು ಆರಂಭವಾಗಲಿದ್ದು, ಅದಕ್ಕೂ ಮುನ್ನ ಮೊದಲ ಬಾರಿಗೆ ನಡೆದ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಂಡವು.

2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಹರಾಜು ಪ್ರಕ್ರಿಯೆಯು ಶನಿವಾರ, ಜುಲೈ 22ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಈ ವೇಳೇ ಭಾರತ ಮತ್ತು ಐಪಿಎಲ್‌ಗಾಗಿ ಆಡಿದ ಕೆಲವು ಆಟಗಾರರು ಸೇರಿದಂತೆ 200ಕ್ಕೂ ಹೆಚ್ಚು ಆಟಗಾರರು ಹರಾಜಿನ ಸುತ್ತಿಗೆಗೆ ಬಂದರು.

ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯು ಆಗಸ್ಟ್ 13ರಿಂದ ಆಗಸ್ಟ್ 29ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಕ್ರಿಕೆಟ್‌ನ ತಾರೆಯರಾದ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ವಿದ್ವತ್ ಕಾವೇರಪ್ಪ ಮತ್ತು ವೈಶಾಕ್ ವಿಜಯ್‌ಕುಮಾರ್ ಸೇರಿದಂತೆ ಹಲವು ಅಗ್ರ ಆಟಗಾರರು ವಿವಧ ತಂಡಗಳಿಗೆ ಮಾರಾಟವಾಗಿದ್ದಾರೆ.

ಗುಲ್ಬರ್ಗ ಮಿಸ್ಟಿಕ್ಸ್, ಮಂಗಳೂರು ಡ್ರಾಗನ್ಸ್, ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ನಾಲ್ಕು ವಿಭಿನ್ನ ವಿಭಾಗಗಳಲ್ಲಿ ಆಟಗಾರರ ಹರಾಜು ಪೈಪೋಟಿಯಲ್ಲಿ ಭಾಗವಹಿಸಿದ್ದವು.

maharaja-trophy-t20-auction

ಪ್ರತಿ ವರ್ಗದ ಮೂಲ ಬೆಲೆ

ವಿಭಾಗ ಎ (2 ಲಕ್ಷ ರೂ. ಮೂಲ ಬೆಲೆ), ವಿಭಾಗ ಬಿ (1 ಲಕ್ಷ ರೂ. ಮೂಲ ಬೆಲೆ), ವಿಭಾಗ ಸಿ (50,000 ರೂ. ಮೂಲ ಬೆಲೆ) ಮತ್ತು ವಿಭಾಗ ಡಿ (25,000 ರೂ. ಮೂಲ ಬೆಲೆ).

ಗುಜರಾತ್ ಟೈಟನ್ಸ್ ಬ್ಯಾಟರ್ ಅಭಿನವ್ ಮನೋಹರ್ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. ಆ ಬಳಿಕ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಅವರು 10 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತ ಪಡೆದಿದ್ದಾರೆ.

2023ರ ಮಹಾರಾಜ ಟ್ರೋಫಿ ಪ್ರತಿ ತಂಡದ ಅತ್ಯಂತ ದುಬಾರಿ ಆಟಗಾರರು

1. ಅಭಿನವ್ ಮನೋಹರ್ - ಶಿವಮೊಗ್ಗ ಲಯನ್ಸ್ - 15 ಲಕ್ಷ ರೂಪಾಯಿ
2. ಮಯಾಂಕ್ ಅಗರ್ವಾಲ್ - ಬೆಂಗಳೂರು ಬ್ಲಾಸ್ಟರ್ಸ್ - 14 ಲಕ್ಷ ರೂಪಾಯಿ
3. ದೇವದತ್ ಪಡಿಕ್ಕಲ್ - ಗುಲ್ಬರ್ಗಾ ಮಿಸ್ಟಿಕ್ಸ್ - 13 ಲಕ್ಷ ರೂಪಾಯಿ
4. ಮನೀಶ್ ಪಾಂಡೆ - ಹುಬ್ಬಳ್ಳಿ ಟೈಗರ್ಸ್ - 10.30 ಲಕ್ಷ ರೂಪಾಯಿ
5. ಮನೋಜ್ ಭಾಂಡಗೆ - ಮೈಸೂರು ವಾರಿಯರ್ಸ್ - 9 ಲಕ್ಷ ರೂಪಾಯಿ
6. ನಿಕಿನ್ ಜೋಸ್ - ಮಂಗಳೂರು ಡ್ರಾಗನ್ಸ್ - 7 ಲಕ್ಷ ರೂಪಾಯಿ

ಪ್ರತಿ ತಂಡವು 50 ಲಕ್ಷ ರೂಪಾಯಿ ಪರ್ಸ್‌ನೊಂದಿಗೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಪ್ರತಿ ತಂಡವು ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನು ಖರೀದಿ ಮಾಡಿವೆ.

ಹರಾಜಿನ ನಂತರ ಎಲ್ಲಾ ತಂಡಗಳ ಗಾತ್ರ ಮತ್ತು ಉಳಿದ ಪರ್ಸ್‌ನ ಮೊತ್ತ

ಬೆಂಗಳೂರು ಬ್ಲಾಸ್ಟರ್ಸ್ - 18 ಆಟಗಾರರು - 2.20 ಲಕ್ಷ ರೂಪಾಯಿ
ಗುಲ್ಬರ್ಗ ಮಿಸ್ಟಿಕ್ಸ್ - 18 ಆಟಗಾರರು - 45,000 ರೂಪಾಯಿ
ಹುಬ್ಬಳ್ಳಿ ಟೈಗರ್ಸ್ - 18 ಆಟಗಾರರು - 1.30 ಲಕ್ಷ ರೂಪಾಯಿ
ಮಂಗಳೂರು ಡ್ರಾಗನ್ಸ್ - 18 ಆಟಗಾರರು - 2.95 ಲಕ್ಷ ರೂಪಾಯಿ
ಮೈಸೂರು ವಾರಿಯರ್ಸ್ - 18 ಆಟಗಾರರು - 80,000 ರೂಪಾಯಿ
ಶಿವಮೊಗ್ಗ ಲಯನ್ಸ್- 18 ಆಟಗಾರರು - 2.25 ಲಕ್ಷ ರೂಪಾಯಿ

maharaja-trophy-t20-auction

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಹರಾಜಿನ ನಂತರ ಪೂರ್ಣ ತಂಡಗಳು

ಬೆಂಗಳೂರು ಬ್ಲಾಸ್ಟರ್ಸ್: ಅಭಿಮನ್ಯು ಮಿಥುನ್, ಮಯಾಂಕ್ ಅಗರ್ವಾಲ್, ಪ್ರದೀಪ್ ಟಿ, ಮೊಹಮ್ಮದ್ ಸರ್ಫರಾಜ್ ಅಶ್ರಫ್, ಪವನ್ ದೇಶಪಾಂಡೆ, ಶುಭಾಂಗ್ ಹೆಗ್ಡೆ, ನಿಶ್ಚಲ್ ಡಿ, ವಿದ್ಯಾಧರ್ ಪಾಟೀಲ್, ಜೆಸ್ವಂತ್ ಆಚಾರ್ಯ, ಜಾಸ್ಪರ್ ಇಜೆ, ಕುಮಾರ್ ಎಲ್.ಆರ್, ರಿಷಿ ಬೋಪಣ್ಣ, ಸೂರಜ್ ಅಹುಜಾ, ಅರುಣ್ ಎಸ್ ಕ್ರಿಸ್ಟಿ, ಅಭಿಷೇಕ್ ಅಲ್ಹಾವತ್, ಅಮನ್ ಎಫ್ ಖಾನ್.

ಗುಲ್ಬರ್ಗ ಮಿಸ್ಟಿಕ್ಸ್: ದೇವದತ್ ಪಡಿಕಲ್, ಕೆಪಿ ಅಪ್ಪಣ್ಣ, ವೈಶಾಕ್ ವಿಜಯ್‌ಕುಮಾರ್, ಶರತ್ ಶ್ರೀನಿವಾಸ್, ಚೇತನ್ ಎಲ್.ಆರ್, ಮೊಹಮ್ಮದ್ ಅಕಿಬ್ ಜವಾದ್, ಸ್ಮರಣ್ ಆರ್, ಅನೀಶ್ ಕೆವಿ, ಮ್ಯಾಕ್ನೀಲ್ ನೊರೊನ್ಹಾ, ಶರಣ್ ಗೌಡ, ಅಭಿಲಾಷ್ ಶೆಟ್ಟಿ, ಹಾರ್ದಿಕ್ ರಾಜ್, ಶಿಮೊನ್ ಲೂಯಿಜ್, ಅವಿನಾಶ್ ಡಿ, ಯಶೋವರ್ಧನ್ ಪರಂತಪ್, ಆದರ್ಶ್ ಪ್ರಜ್ವಲ್, ಶಾನ್ ಟ್ರಿಸ್ಟಾನ್ ಜೋಸೆಫ್, ಅಬುಲ್ ಹಸನ್ ಖಾಲಿದ್.

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಜಗದೀಶ್ ಸುಚಿತ್, ಪ್ರಸಿದ್ಧ್ ಕೃಷ್ಣ, ಶೋಯೆಬ್ ಮ್ಯಾನೇಜರ್, ಆರ್ ಸಮರ್ಥ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ವೆಂಕಟೇಶ್ ಎಂ, ತುಷಾರ್ ಸಿಂಗ್, ಕುಶಾಲ್ ವಾಧ್ವಾನಿ, ಶಶಿಕುಮಾರ್ ಕೆ, ರಕ್ಷಿತ್ ಎಸ್, ಗೌತಮ್ ಮಿಶ್ರಾ, ಶ್ರೀಶ ಆಚಾರ್, ಮೊನಿಶ್ ರೆಡ್ಡಿ, ಆದಿತ್ಯ ಮಣಿ, ರಾಹುಲ್ ಸಿಂಗ್ ರಾವತ್, ಭರತ್ ಧುರಿ.

ಹುಬ್ಬಳ್ಳಿ ಟೈಗರ್ಸ್: ಪ್ರವೀಣ್ ದುಬೆ, ಮನೀಶ್ ಪಾಂಡೆ, ಕೆಸಿ ಕಾರಿಯಪ್ಪ, ಲುವ್ನಿತ್ ಸಿಸೋಡಿಯಾ, ಶ್ರೀಜಿತ್ ಕೆಎಲ್, ಮೊಹಮ್ಮದ್ ತಾಹಾ, ವಿದ್ವತ್ ಕಾವೇರಪ್ಪ, ದರ್ಶನ್ ಎಂಬಿ, ಶಿವಂ ಎಂಬಿ, ನಾಗ ಭರತ್, ಸಂತೋಖ್ ಸಿಂಗ್, ಮನ್ವಂತ್ ಕುಮಾರ್ ಎಲ್, ಮಿತ್ರಕಾಂತ್ ಯಾದವ್, ಮಲ್ಲಿಕ್‌ಸಾಬ್ ಜಿ, ರಾಜಶೇಖರ್ ಹರಿಕಾಂತ್, ಕ್ಲೆಮೆಂಟ್ ರಾಜು.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ನಿಹಾಲ್ ಉಳ್ಳಾಲ್, ವಾಸುಕಿ ಕೌಶಿಕ್, ಎಚ್ಎಸ್ ಶರತ್, ಕ್ರಾಂತಿ ಕುಮಾರ್, ರೋಹನ್ ಕದಂ, ಶ್ರೇಯಸ್ ಪುರಾಣಿಕ್, ಪ್ರಣವ್ ಭಾಟಿಯಾ, ವಿನಯ್ ಎನ್ ಸಾಗರ್, ಪವನ್ ಶಿರಡಿ, ರೋಹನ್ ನವೀನ್, ಶಿವರಾಜ್ ಎಸ್, ರೋಹಿತ್ ಕುಮಾರ್ ಕೆ, ನಿಶ್ಚಿತ್ ರಾವ್, ದೀಪಕ್ ದೇವಾಡಿಗ.

ಮಂಗಳೂರು ಡ್ರಾಗನ್ಸ್: ರೋನಿತ್ ಮೋರ್, ಕೃಷ್ಣಪ್ಪ ಗೌತಮ್, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶರತ್ ಬಿಆರ್, ಪ್ರತೀಕ್ ಜೈನ್, ಅನಿರುದ್ಧ ಜೋಶಿ, ರೋಹನ್ ಪಾಟೀಲ್, ನವೀನ್ ಎಂಜಿ, ಗೌರವ್ ಧಿಮಾನ್, ಶಿವಕುಮಾರ್ ಬಿಯು, ತಿಪ್ಪಾರೆಡ್ಡಿ, ಆದಿತ್ಯ ನಾಯರ್, ಆದಿತ್ಯ ಗೋಯಲ್, ಆನಂದ್ ದೊಡ್ಡಮನಿ, ಕೃತಿಕ್ ಕೃಷ್ಣ, ಧೀರಜ್ ಜೆ ಗೌಡ, ಅನೀಶ್ವರ್ ಗೌತಮ್.

Story first published: Wednesday, August 9, 2023, 11:56 [IST]
Other articles published on Aug 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+