For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ ಟಿ20: KSCA ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ; ಶ್ರೇಯಸ್ ಗೋಪಾಲ್ ಹೇಳಿದ್ದೇನು?

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಗೆ ಇನ್ನು ಕೇವಲ ಹತ್ತು ದಿನಗಳ ಕಾಲ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಮತ್ತೊಂದು ಕ್ರಿಕೆಟ್ ಲೀಗ್‌ಗಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ.

ಮೈದಾನಕ್ಕಿಳಿಯುವ ಸ್ಟಾರ್‌ ಆಟಗಾರರಲ್ಲಿ ಕರ್ನಾಟಕ ರಣಜಿ ತಂಡದ ಅನುಭವಿ ಶ್ರೇಯಸ್ ಗೋಪಾಲ್ ಕೂಡ ಒಬ್ಬರು. ಕರ್ನಾಟಕದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ರಣಜಿ ಋತುವಿನಲ್ಲಿ ಅದ್ಭುತ ಶತಕ ಬಾರಿಸಿದ್ದರು.

ಇದೀಗ ಅದೇ ಫಾರ್ಮ್‌ನೊಂದಿಗೆ ಟಿ20 ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ಮತ್ತೊಂದು ಸ್ಮರಣೀಯ ಅಭಿಯಾನಕ್ಕೆ ಸಿದ್ಧರಾಗಿದ್ದಾರೆ. ಈ ಆವೃತ್ತಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

2023ರ ಮಹಾರಾಜ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 13ರಂದು ಆರಂಭಗೊಳ್ಳಲಿದ್ದು, ಫೈನಲ್ ಪಂದ್ಯ ಆಗಸ್ಟ್ 29ರಂದು ನಡೆಯಲಿದೆ. ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಎರಡು ಹೊಸ ತಂಡಗಳು ಹಾಗೂ ಹಾಲಿ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್, ಕಳೆದ ವರ್ಷದ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಸೇರಿದಂತೆ ಆರು ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಈ ಕ್ರಿಕೆಟ್ ಪಂದ್ಯಾವಳಿಯು ರಾಜ್ಯದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಕರ್ನಾಟಕದ ಕೆಲವು ಅತ್ಯುತ್ತಮ ಆಟಗಾರರನ್ನು ಒಳಗೊಳ್ಳಲು ಗಮನಾರ್ಹ ವೇದಿಕೆಯಾಗಿದೆ.

ಮಹಾರಾಜ ಟ್ರೋಫಿ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡಿದ್ದ ಶ್ರೇಯಸ್ ಗೋಪಾಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 231 ರನ್ ಗಳಿಸಿದರು ಮತ್ತು 16 ವಿಕೆಟ್‌ಗಳೊಂದಿಗೆ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದವರಾದರು.

ಶಿವಮೊಗ್ಗ ಲಯನ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಆಲ್‌ರೌಂಡರ್ ಶ್ರೇಯಸ್ ಗೋಪಾಲ್, ""ಹೊಸ ಋತುವಿನ ಆರಂಭವು ಯಾವಾಗಲೂ ರೋಮಾಂಚನಕಾರಿಯಾಗಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಭಾಗವಾಗಿರುವುದಕ್ಕೆ ಥ್ರಿಲ್ ಆಗಿದ್ದೇನೆ,'' ಎಂದರು.

"ಕರ್ನಾಟಕ ಕ್ರಿಕೆಟ್‌ನ ಕೆಲವು ಅತ್ಯುತ್ತಮ ಪ್ರತಿಭೆಗಳ ಜೊತೆಯಲ್ಲಿ ಆಡಲು ಇದು ಯಾವಾಗಲೂ ಉತ್ತಮವಾಗಿದೆ. ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಮತ್ತು ಹಿಂದಿನ ಆವೃತ್ತಿಯಲ್ಲಿ ನಾನು ನೀಡಿದ ಯಶಸ್ಸನ್ನು ಪುನರಾವರ್ತಿಸಲು ನಾನು ಎದುರು ನೋಡುತ್ತಿದ್ದೇನೆ," ಎಂದು ಶ್ರೇಯಸ್ ಗೋಪಾಲ್ ತಿಳಿಸಿದರು.

ಶಿವಮೊಗ್ಗ ಲಯನ್ಸ್ ತಂಡದಲ್ಲಿ ಲೆಗ್ ಸ್ಪಿನ್ನರ್‌ಗೆ ಸ್ಟಾರ್ ಆಟಗಾರರಾದ ನಿಹಾಲ್ ಉಲ್ಲಾಲ್, ವಾಸುಕಿ ಕೌಶಿಕ್ ಮತ್ತು ಅಭಿನವ್ ಮನೋಹರ್ ಸಾಥ ನೀಡಲಿದ್ದಾರೆ. ಹರಾಜಿನಲ್ಲಿ ಶ್ರೇಯಸ್ ಗೋಪಾಲ್ 15 ಲಕ್ಷ ರೂಪಾಯಿ ಬೇಡಿಕೆಯ ಆಟಗಾರರಾಗಿದ್ದರು.

ಬೆಂಗಳೂರಿನ ಎಂ ಚಿನ್ನಸಾಮಿ ಸ್ಟೇಡಿಯಂನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಶ್ರೇಯಸ್ ಗೋಪಾಲ್ ತಮಗೆ ಇಷ್ಟವಾದ ಮೈದಾನದಲ್ಲಿ ಆಡುವ ಖುಷಿಯನ್ನು ಹಂಚಿಕೊಂಡರು.

"ನನ್ನ ಕ್ರಿಕೆಟ್ ಪಯಣ ಈ ಮೈದಾನದಲ್ಲಿ ಆರಂಭಗೊಂಡಿದೆ ಮತ್ತು ನನಗೆ ಅದು ತುಂಬಾ ಪರಿಚಿತ ಸ್ಥಳವಾಗಿದೆ. ಇತರ ಅನೇಕ ಆಟಗಾರರಿಗೂ ಸಹ ಇದು ಅತ್ಯಂತ ಸ್ಪರ್ಧಾತ್ಮಕ ಪಂದ್ಯಾವಳಿಯನ್ನಾಗಿ ಮಾಡುತ್ತದೆ. ಅತ್ಯಾಧುನಿಕ ಸಬ್-ಏರ್ ವ್ಯವಸ್ಥೆಯು ಮಾನ್ಸೂನ್ ಋತುವಿನಲ್ಲಿ ಸಾಕಷ್ಟು ಸಹಾಯಕವಾಗಿದೆ," ಎಂದು ಹೇಳಿದರು.

Maharaja Trophy T20 Schedule: Know What Shreyas Gopal Says?

ಆಗಸ್ಟ್ 14ರಂದು ಶಿವಮೊಗ್ಗ ಲಯನ್ಸ್ ತನ್ನ ಅಭಿಯಾನದ ಮೊದಲ ಪಂದ್ಯದಲ್ಲಿ ಸಹ ಚೊಚ್ಚಲ ತಂಡವಾದ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಆಡಲಿದೆ. ಸ್ಟಾರ್ ಸ್ಪೋರ್ಟ್ಸ್ 2 (HD ಮತ್ತು SD) ಚಾನೆಲ್‌ಗಳಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ. Star Sports Kannada ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿ ವೇಳಾಪಟ್ಟಿ

ಕ್ರಮ ಸಂಖ್ಯೆ ಪಂದ್ಯ ದಿನಾಂಕ ಸಮಯ
1 ಗುಲ್ಬರ್ಗ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್ ಆಗಸ್ಟ್ 13 ಮಧ್ಯಾಹ್ನ 1 ಗಂಟೆ
2 ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್ ಆಗಸ್ಟ್ 13 ಸಂಜೆ 5.30
3 ಮಂಗಳೂರು ಡ್ರ್ಯಾಗನ್ಸ್ vs ಶಿವಮೊಗ್ಗ ಲಯನ್ಸ್ ಆಗಸ್ಟ್ 14 ಮಧ್ಯಾಹ್ನ 1 ಗಂಟೆ
4 ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್ ಆಗಸ್ಟ್ 14 ಸಂಜೆ 5.30
5 ಮೈಸೂರು ವಾರಿಯರ್ಸ್ vs ಮಂಗಳೂರು ಡ್ರ್ಯಾಗನ್ಸ್ ಆಗಸ್ಟ್ 15 ಮಧ್ಯಾಹ್ನ 1 ಗಂಟೆ
6 ಶಿವಮೊಗ್ಗ ಲಯನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ ಆಗಸ್ಟ್ 15 ಸಂಜೆ 5.30
7 ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್ ಆಗಸ್ಟ್ 16 ಮಧ್ಯಾಹ್ನ 1 ಗಂಟೆ
8 ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಆಗಸ್ಟ್ 16 ಸಂಜೆ 5.30
9 ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್ ಆಗಸ್ಟ್ 17 ಮಧ್ಯಾಹ್ನ 1 ಗಂಟೆ
10 ಮಂಗಳೂರು ಡ್ರ್ಯಾಗನ್ಸ್ vs ಹುಬ್ಬಳ್ಳಿ ಟೈಗರ್ಸ್ ಆಗಸ್ಟ್ 17 ಸಂಜೆ 5.30
11 ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್ ಆಗಸ್ಟ್ 18 ಮಧ್ಯಾಹ್ನ 1 ಗಂಟೆ
12 ಮಂಗಳೂರು ಡ್ರ್ಯಾಗನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ ಆಗಸ್ಟ್ 18 ಸಂಜೆ 5.30
13 ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್ ಆಗಸ್ಟ್ 19 ಮಧ್ಯಾಹ್ನ 1 ಗಂಟೆ
14 ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಲಯನ್ಸ್ ಆಗಸ್ಟ್ 19 ಸಂಜೆ 5.30
15 ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ ಆಗಸ್ಟ್ 20 ಮಧ್ಯಾಹ್ನ 1 ಗಂಟೆ
16 ಗುಲ್ಬರ್ಗ ಮಿಸ್ಟಿಕ್ಸ್ vs ಮಂಗಳೂರು ಡ್ರ್ಯಾಗನ್ಸ್ ಆಗಸ್ಟ್ 20 ಸಂಜೆ 5.30
17 ಶಿವಮೊಗ್ಗ ಲಯನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಆಗಸ್ಟ್ 21 ಮಧ್ಯಾಹ್ನ 1 ಗಂಟೆ
18 ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್ ಆಗಸ್ಟ್ 21 ಸಂಜೆ 5.30
19 ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ ಆಗಸ್ಟ್ 22 ಮಧ್ಯಾಹ್ನ 1 ಗಂಟೆ
20 ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್ ಆಗಸ್ಟ್ 22 ಸಂಜೆ 5.30
21 ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಆಗಸ್ಟ್ 23 ಮಧ್ಯಾಹ್ನ 1 ಗಂಟೆ
22 ಮಂಗಳೂರು ಡ್ರ್ಯಾಗನ್ಸ್ vs ಮೈಸೂರು ವಾರಿಯರ್ಸ್ ಆಗಸ್ಟ್ 23 ಸಂಜೆ 5.30
23 ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರ್ಯಾಗನ್ಸ್ ಆಗಸ್ಟ್ 24 ಮಧ್ಯಾಹ್ನ 1 ಗಂಟೆ
24 ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಆಗಸ್ಟ್ 24 ಸಂಜೆ 5.30
25 ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ ಆಗಸ್ಟ್ 25 ಮಧ್ಯಾಹ್ನ 1 ಗಂಟೆ
26 ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್ ಆಗಸ್ಟ್ 25 ಸಂಜೆ 5.30
27 ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಡ್ರ್ಯಾಗನ್ಸ್ ಆಗಸ್ಟ್ 26 ಮಧ್ಯಾಹ್ನ 1 ಗಂಟೆ
28 ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್ ಆಗಸ್ಟ್ 26 ಸಂಜೆ 5.30
29 ಮಂಗಳೂರು ಡ್ರ್ಯಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ಆಗಸ್ಟ್ 27 ಮಧ್ಯಾಹ್ನ 1 ಗಂಟೆ
30 ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್ ಆಗಸ್ಟ್ 27 ಸಂಜೆ 5.30
31 ಸೆಮಿಫೈನಲ್ 1 ಆಗಸ್ಟ್ 28 ಮಧ್ಯಾಹ್ನ 1 ಗಂಟೆ
32 ಸೆಮಿಫೈನಲ್ 2 ಆಗಸ್ಟ್ 28 ಸಂಜೆ 5.30
33 ಫೈನಲ್ ಆಗಸ್ಟ್ 29 ಸಂಜೆ 5.30

Story first published: Friday, August 4, 2023, 17:09 [IST]
Other articles published on Aug 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+