For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಎಂ.ಎಸ್.ಧೋನಿ

ಬೆಂಗಳೂರು, ಡಿ. 30 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಮುಗಿಯುವ ಮುನ್ನವೇ ಟೆಸ್ಟ್ ಕ್ರಿಕೆಟ್‌ಗೆ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ (33) ವಿದಾಯ ಹೇಳಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್ ನಾಯಕತ್ವ ವಹಿಸಲಿದ್ದಾರೆ.

ಸದ್ಯ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಬಿಸಿಸಿಐ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದನ್ನು ಖಚಿತಪಡಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನೆಡಸಲಿದ್ದಾರೆ ಎಂದು ಟ್ವಿಟ್ ಮಾಡಿದೆ.

Dhoni

ಮಹೇಂದ್ರ ಸಿಂಗ್ ಧೋನಿ 2005ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 90 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು 6 ಶತಕ, 33 ಅರ್ಧ ಶತಕಗಳನ್ನು ಬಾರಿಸಿದ್ದರು. ಟೆಸ್ಟ್‌ ಪಂದ್ಯದಲ್ಲಿ ಧೋನಿ 4876 ರನ್‌ ಗಳಿಸಿದ್ದಾರೆ. [ಹುಟ್ಟುಹಬ್ಬದ ದಿನವೇ ನಿವೃತ್ತಿ ಜೀವನದ ಬಗ್ಗೆ ಧೋನಿ]

90 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಸೌರವ್ ಗಂಗೂಲಿ 21 ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದ್ದರೆ, ಧೋನಿ 27 ಪಂದ್ಯಗಳಲ್ಲಿ ಗೆಲುವು ತಂದು ಕೊಟ್ಟಿದ್ದರು. ಏಕದಿನ ಮತ್ತು ಟಿ20 ಪಂದ್ಯಗಳ ಮೇಲೆ ಗಮನಹರಿಸಲು ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್‌ ಪಂದ್ಯದಲ್ಲಿ ಧೋನಿ ಗಳಿಸಿದ ಗರಿಷ್ಠ ರನ್ 224. [ಮೆಲ್ಬೋರ್ನ್ ಟೆಸ್ಟ್ ಡ್ರಾ]

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ಆಡಿದ ಮೂರನೇ ಟೆಸ್ಟ್‌ ಪಂದ್ಯ ಧೋನಿ ಟೆಸ್ಟ್‌ ಬದುಕಿನ ಕೊನೆಯ ಪಂದ್ಯವಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 11 ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 24 ರನ್‌ ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ ಧೋನಿ ಸಾಧನೆ, ಅಂಕಿ-ಅಂಶಗಳು

ಒಟ್ಟು ಪಂದ್ಯ - 90
ರನ್ - 4876
ಶತಕ/ಅರ್ಧಶತಕ -6/33
ಸರಾಸರಿ - 59.11
ಬೌಂಡರಿ - 544
ಸಿಕ್ಸ್ -78
ಕ್ಯಾಚ್ - 256

ನಾಯಕನಾಗಿ ಟೆಸ್ಟ್‌ನಲ್ಲಿ ಧೋನಿ ಸಾಧನೆ

ಪಂದ್ಯ - 60
ಗೆಲುವು -27
ಸೋಲು - 18
ಡ್ರಾ - 15

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+