Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹೇಂದ್ರ ಸಿಂಗ್ ಧೋನಿ-ಸಾಕ್ಷಿ ದಂಪತಿಗೆ ಹೆಣ್ಣು ಮಗು

ನವದೆಹಲಿ, ಫೆ.7 : ವಿಶ್ವಕಪ್‍ಗೂ ಮುನ್ನ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಧೋನಿ ಪತ್ನಿ ಸಾಕ್ಷಿ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಗುರ್ಗಾಂವ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಸಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.7 ಕೆಜೆ ತೂಕವಿದೆ ಎಂದು ಫೋರ್ಟಿಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಫೆಬ್ರವರಿ 8ರ ಭಾನುವಾರ ಆಸ್ಟ್ರೇಲಿಯಾ ಹಾಗೂ ಭಾರತದ ನಡುವೆ ಅಭ್ಯಾಸ ಪಂದ್ಯ ನಡೆಯಲಿದ್ದು, ಧೋನಿ ಆಸ್ಟ್ರೇಲಿಯಾದಲ್ಲಿದ್ದಾರೆ. [ಧೋನಿ ಸಾಗಲಿ ಮುಂದೆ ಹೋಗಲಿ ಬಾಳ ತೀರ ಸೇರಲಿ]

Dhoni

ಎರಡು ದಿನಗಳ ಕಾಲ ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳನ್ನು ನೋಡಲು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಆದರೆ, ವಿಶ್ವಕಪ್ ಆರಂಭವಾದ ಮೇಲೆ ಧೋನಿ ತಂದೆಯಾಗಲಿದ್ದಾರೆ ಎಂಬ ಮಾಹಿತಿ ಮೊದಲೇ ತಿಳಿದಿದ್ದ ಬಿಸಿಸಿಐ ಧೋನಿ ಭಾರತ ಭೇಟಿಗೆ ಅವಕಾಶ ಕೊಟ್ಟಿದೆ. ಅವರು ಎಂದು ಆಗಮಿಸಲಿದ್ದಾರೆ ಎಂದು ತಿಳಿದುಬಂದಿಲ್ಲ. [ಧೋನಿಗೆ ಕೇಳಬಾರದ 10 ಪ್ರಶ್ನೆಗಳು!]

ಎಂ.ಎಸ್.ಧೋನಿ 2010 ಜುಲೈ 4 ರಂದು ಬಾಲ್ಯದ ಗೆಳತಿ ಸಾಕ್ಷಿಯನ್ನು ವಿವಾಹವಾಗಿದ್ದರು. ಹೊಟೇಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿ ಸಾಕ್ಷಿ ಸಿಂಗ್ ರಾವತ್ ಅವರೊಂದಿಗೆ ಧೋನಿ ಮದುವೆ ಡೆಹ್ರಡೂನ್ ನಿಂದ 40 ಕಿ.ಮೀ ದೂರದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ನಡೆದಿತ್ತು.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+