For Quick Alerts
ALLOW NOTIFICATIONS  
For Daily Alerts
 

IPL 2024: ಸ್ನೇಹಿತನಿಗೆ ರಿಟರ್ನ್‌ ಗಿಫ್ಟ್‌ ನೀಡಲಿರುವ ಕೂಲ್ ಕ್ಯಾಪ್ಟನ್ ಧೋನಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಈ ಬಾರಿ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ 2024ಕ್ಕೆ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ಬಾರಿಯ ಐಪಿಎಲ್‌ ಧೋನಿ ವೃತ್ತಿ ಜೀವನದ ಕೊನೆಯ ಐಪಿಎಲ್‌ ಎಂದು ಹೇಳಲಾಗುತ್ತಿದ್ದು, ಇದನ್ನು ಸ್ಮರಣೀಯವಾಗಿಸಲು ಎಂಎಸ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಆಟದ ಮೂಲಕ ತಮ್ಮ ಆತ್ಮೀಯ ಗೆಳೆಯನಿಗೆ ವಿಶೇಷ ಉಡುಗೊರೆಯನ್ನು ನೀಡಲು ಹೊರಟಿದ್ದಾರೆ.

ಆಟದ ಮೂಲಕ ಧೋನಿ ಸ್ನೇಹಿತನಿಗೆ ಏನು ಉಡುಗೊರೆ ನೀಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಉದ್ಭವಿಸುವುದು ಸಹಜ. ಧೋನಿಯ ಈ ಸ್ನೇಹಿತ ಬೇರೆ ಯಾರೂ ಅಲ್ಲ, ರಾಂಚಿಯಲ್ಲಿ ತನ್ನದೇ ಆದ ಕ್ರೀಡಾ ಸಲಕರಣೆಗಳ ಅಂಗಡಿಯನ್ನು ನಡೆಸುತ್ತಿರುವ ಪರಮ್‌ಜೀತ್ ಸಿಂಗ್. ಈ ಬಾರಿ ಐಪಿಎಲ್ ಮೂಲಕ ತನ್ನ ಸ್ನೇಹಿತರಿಗೆ ವಿಶೇಷ ಉಡುಗೊರೆ ನೀಡಲು ಧೋನಿ ಪ್ಲಾನ್ ಮಾಡಿದ್ದಾರೆ.

Mahendra Singh Dhoni uses bat with sticker of childhood friends sports shop

ರಿಟರ್ನ್‌ ಗಿಫ್ಟ್‌ ಏನು?

ಧೋನಿ ಜೀವನಾಧಾರಿತ ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರವನ್ನು ನೀವು ನೋಡಿ ಇರ್ತಿರಾ. ಧೋನಿ ಈ ಅಂಗಡಿಯ ಮಾಲೀಕರನ್ನು ಮಾಧ್ಯಮ ಸಂದರ್ಶನದಲ್ಲಿ ಕರೆದು ಅಚ್ಚರಿಗೊಳಿಸಿದ್ದು ನೆನಪಾಗುತ್ತದೆ. ಧೋನಿಯ ಈ ಸಿಖ್ ಸ್ನೇಹಿತ ರಾಂಚಿಯಲ್ಲಿ ಸಣ್ಣ ಸ್ಪೋರ್ಟ್ಸ್ ಅಂಗಡಿಯನ್ನು ನಡೆಸುತ್ತಿದ್ದರು. ಈ ಗೆಳೆಯ ಧೋನಿಗೆ ಮೊದಲ ಪ್ರಾಯೋಜಕತ್ವ ನೀಡಿದ್ದು, ಇದೀಗ ಧೋನಿ ಅವರಿಗೆ ರಿಟರ್ನ್ ಗಿಫ್ಟ್ ನೀಡಲಿದ್ದಾರೆ.

ಬಹುಶಃ ಪರಮ್‌ಜಿತ್ ಸಿಂಗ್ ಕೂಡ ಇಂತಹ ಗಿಫ್ಟ್‌ನ್ನು ತನ್ನ ಸ್ನೇಹಿತ ತನಗಾಗಿ ನೀಡುತ್ತಾನೆ ಎಂದು ಅಂದು ಕೊಂಡಿರಲಿಲ್ಲ ಅನಿಸುತ್ತದೆ. ಆದರೆ ಧೋನಿ ಭರ್ಜರಿ ರಿಟರ್ನ್ ಗಿಫ್ಟ್ ಅನ್ನು ತನ್ನ ಗೆಳೆಯನಿಗೆ ನೀಡಲು ಧೋನಿ ಪ್ಲಾನ್ ಮಾಡಿದ್ದಾರೆ. ಈ ಉಡುಗೊರೆಯ ಝಲಕ್ಗಳು ​​ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.

ಧೋನಿ ಸ್ನೇಹಕ್ಕೆ ಫ್ಯಾನ್ಸ್‌ ಫಿದಾ

ಈಗ ಧೋನಿ ಮುಂಬರುವ ಐಪಿಎಲ್ ಸೀಸನ್‌ಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅವರು ಯಾವುದೇ ಪ್ರಸಿದ್ಧ ಬ್ರಾಂಡ್‌ನ ಸ್ಟಿಕ್ಕರ್‌ಗಳನ್ನು ಹೊಂದಿರುವ ಬ್ಯಾಟ್‌ನೊಂದಿಗೆ ಆಡುತ್ತಿಲ್ಲ. ಅವರ ಬ್ಯಾಟ್‌ನಲ್ಲಿ ಪ್ರೈಮ್ ಸ್ಪೋರ್ಟ್ಸ್ ಬ್ಯಾಟ್ ಇದೆ, ಅದು ಅವರ ಸ್ನೇಹಿತ ಪರಮ್‌ಜಿತ್ ಸಿಂಗ್ ಅವರ ಅಂಗಡಿಯ ಹೆಸರು.

Mahendra Singh Dhoni uses bat with sticker of childhood friends sports shop

ಈ ಬಾರಿ ಧೋನಿ 'ಪ್ರೈಮ್ ಸ್ಪೋರ್ಟ್ಸ್' ಬ್ಯಾಟ್‌ನೊಂದಿಗೆ ಆಡುವುದನ್ನು ಕಾಣಬಹುದು. ಇದು ಅವರ ಸ್ನೇಹಿತನ ಅಂಗಡಿಗೆ ವಿಶೇಷ ಪ್ರಚಾರ ಸಿಗಲಿದೆ. ನಿಸ್ಸಂಶಯವಾಗಿ, ಧೋನಿಯಂತಹ ಶ್ರೇಷ್ಠ ಆಟಗಾರ ಪ್ರೈಮ್ ಸ್ಪೋರ್ಟ್ಸ್‌ನ ಬ್ಯಾಟ್‌ನೊಂದಿಗೆ ಆಡಿದಾಗ, ಆ ಕಂಪನಿಯ ಅಭಿಮಾನಿಗಳು ಖಂಡಿತವಾಗಿಯೂ ಅದನ್ನು ಮೆಚ್ಚುತ್ತಾರೆ. ಮತ್ತು ಅವರು ತಮ್ಮ ಕ್ರೀಡಾ ವಸ್ತುಗಳನ್ನು ಪ್ರೈಮ್ ಸ್ಪೋರ್ಟ್ಸ್‌ನಿಂದ ಮಾತ್ರ ಖರೀದಿಸಲು ಯೋಜಿಸುತ್ತಾರೆ, ಇದರಿಂದಾಗಿ ಅವರ ಸ್ನೇಹಿತನ ಲಾಭವು ಹೆಚ್ಚಾಗುವುದು ಖಚಿತ.

42 ವರ್ಷದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರು ಇನ್ನೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದಾರೆ. ಕಳೆದ ವರ್ಷ ಈ ತಂಡ 5ನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸುವಲ್ಲಿ ಧೋನಿ ಕೊಡುಗೆ ಹೆಚ್ಚಿದೆ. ಫೈನಲ್ ನಂತರ ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದುತ್ತಾರೆ ಎಂಬ ಊಹಾಪೋಹಗಳು ಇದ್ದವು ಆದರೆ ನಂತರ ಅವರು ತಮ್ಮ ಅಭಿಮಾನಿಗಳಿಗೆ ರಿಟರ್ನ್ ಗಿಫ್ಟ್ ನೀಡಲು ಐಪಿಎಲ್ 2024 ರಲ್ಲಿ ಆಡುವುದಾಗಿ ಘೋಷಿಸಿದ್ದರು.

ಈ ಬಾರಿ ಧೋನಿ ಐಪಿಎಲ್‌ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಹಿ ತಮ್ಮ ಹಳೆಯ ಲಾಂಗ್‌ ಹೇರ್‌ನಲ್ಲಿ ಅಭಿಮಾನಿಗಳಿಗೆ ಹಬ್ಬದೂಟವನ್ನು ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಆರನೇ ಬಾರಿಗೆ ಚೆನ್ನೈ ತಂಡಕ್ಕೆ ಐಪಿಎಲ್‌ ಮುಕುಟ ತೊಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಧೋನಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.

Story first published: Thursday, February 8, 2024, 16:03 [IST]
Other articles published on Feb 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+