For Quick Alerts
ALLOW NOTIFICATIONS  
For Daily Alerts
 

ಕೇವಲ ಆರೇ ಆರು ರನ್‌ಗಳಿಗೆ ಆಲ್‌ಔಟ್‌ ಆದ ಮಾಲಿ ತಂಡ!

Mali bowled out for 6 to record lowest total in womens T20Is

ಹೊಸದಿಲ್ಲಿ, ಜೂನ್‌ 18: ರಾಂಡ ರಿಪಬ್ಲಿಕ್‌ ದೇಶದಲ್ಲಿ ನಡೆದ ಕ್ವಿಬುಕಾ ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ರಾಂಡ ತಂಡದೆದುರು ಪ್ರವಾಸಿ ಮಾಲಿ ಮಹಿಳಾ ಕ್ರಿಕೆಟ್‌ ತಂಡ ಕೇವಲ 6 ರನ್‌ಗಳಿಗೆ ಆಲ್‌ಔಟ್‌ ಆಗಿದೆ. ಇದು ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿಯ ಇತಿಹಾಸದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಬಳಿಕ ಗುರಿ ಬೆನ್ನತ್ತಿದ ರಾಂಡ ತಂಡ ಕೇವಲ ನಾಲ್ಕು ಎಸೆತಗಳಲ್ಲಿ 8 ರನ್‌ಗಳನ್ನು ಗಳಿಸುವ ಮೂಲಕ ಇನ್ನು 116 ಎಸೆತಗಳು ಬಾಕಿ ಇರುವಾಗಲೇ 10 ವಿಕೆಟ್‌ಗಳ ಏಕಮುಖ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಅಂದಹಾಗೆ ಮಾಲಿ ತಂಡ ತನ್ನ ಆರು ರನ್‌ಗಳನ್ನು ಗಳಿಸಲು ಬರೋಬ್ಬರಿ 9 ಓವರ್‌ಗಳನ್ನು ತೆಗೆದುಕೊಂಡಿತು ಎಂಬುದು ವಿಶೇಷ. ಇದರಲ್ಲಿ ಆರಂಭಿಕ ಬ್ಯಾಟರ್‌ ಮರಿಮಾ ಸಮಕೆ ಒಂದು ರನ್‌ ಗಳಿಸಿದ್ದನ್ನು ಬಿಟ್ಟರೆ ಉಳಿದ 5 ರನ್‌ಗಳು ಇತರ ರನ್‌ ಮುಖಾಂತರ ರಾಂಡ ತಂಡ ನೀಡಿದ ಉಡುಗೊರೆಯಾಗಿದೆ.

ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಹಿಂದೆ ದಾಖಲಾಗಿದ್ದ ಕನಿಷ್ಠ ಮೊತ್ತ 14 ರನ್‌. ಇದೇ ವರ್ಷದ ಆರಂಭದಲ್ಲ ಬ್ಯಾಂಕಾಕ್‌ನಲ್ಲಿ ನಡೆದ ಮಹಿಳಾ ಟಿ20 ಟೂರ್ನಿಯಲ್ಲಿ ಚೀನಾ ತಂಡ ಯುಎಇ ಎದುರು ಕೇವಲ 14 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

Story first published: Wednesday, June 19, 2019, 18:25 [IST]
Other articles published on Jun 19, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+